/newsfirstlive-kannada/media/post_attachments/wp-content/uploads/2025/05/RCB_NEW_TEAM.jpg)
2025ರ ಐಪಿಎಲ್ ಟೂರ್ನಿಯಲ್ಲಿ ಬಲಿಷ್ಠ ತಂಡವಾಗಿ ಹೊರ ಹೊಮ್ಮಿದ್ದ ಪಂಜಾಬ್ ಕಿಂಗ್ಸ್ ಅಲ್ಪ ಮೊತ್ತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮಂಡಿಯೂರಿದೆ. 14.1 ಓವರ್ಗೆ ಆಲೌಟ್ ಆಗಿರುವ ಪಂಜಾಬ್ ಕಿಂಗ್ಸ್ ಕೇವಲ 101 ರನ್ಗಳ ಗುರಿಯನ್ನು ಆರ್ಸಿಬಿಗೆ ನೀಡಿದೆ. ಸೆಮಿಸ್ನಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ್ದು ಇದು ಆರ್ಸಿಬಿಗೆ ಆರಂಭಿಕ ಜಯವಾಗಿದೆ.
ಚಂಢಿಗಡದ ಮುಲ್ಲನಪುರದ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಆರ್ಸಿಬಿ ನಾಯಕ ರಜತ್ ಪಾಟಿದಾರ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದರು. ಈ ನಿರ್ಧಾರ ಸರಿಯಾಗಿದೆ ಎಂದು ಕೆಲವೇ ಕ್ಷಣಗಳಲ್ಲಿ ಗೊತ್ತಾಯಿತು. ಏಕೆಂದರೆ ಪಂಜಾಬ್ 60 ರನ್ಗೆ ತನ್ನ ಪ್ರಮುಖ 6 ವಿಕೆಟ್ಗಳನ್ನು ಕಳೆದುಕೊಂಡಿತ್ತು. ಓಪನರ್ ಪ್ರಿಯಾಂಶ್ ಆರ್ಯ ಹಾಗೂ ಪ್ರಭಾಸಿಮ್ರಾನ್ ಸಿಂಗ್ ಉತ್ತಮ ಆರಂಭ ಪಡೆಯಲಿಲ್ಲ.
ಯಶ್ ದಯಾಳ್ ಬೌಲಿಂಗ್ನಲ್ಲಿ ಪ್ರಿಯಾಂಶ್ ಆರ್ಯ 7 ರನ್ಗೆ ಔಟ್ ಆದರೆ, ಭುವನೇಶ್ವರ್ ಕುಮಾರ್ ಬೌಲಿಂಗ್ನಲ್ಲಿ ಪ್ರಭಾಸಿಮ್ರಾನ್ ಸಿಂಗ್ 18 ರನ್ಗೆ ಕೀಪರ್ ಜಿತೇಶ್ ಶರ್ಮಾಗೆ ಕ್ಯಾಚ್ ಕೊಟ್ಟರು. ಪ್ರಭಾಸಿಮ್ರಾನ್ ಔಟ್ ಆದ 3 ರನ್ಗಳ ನಂತರದಲ್ಲೇ ನಾಯಕ ಶ್ರೇಯಸ್ ಅಯ್ಯರ್ ಕೂಡ ಕೇವಲ 2 ರನ್ಗೆ ಡ್ರೆಸ್ಸಿಂಗ್ ರೂಮ್ನತ್ತ ಹೆಜ್ಜೆ ಹಾಕಿದರು. ಇವರ ಬೆನ್ನಲ್ಲೇ ಜೋಶ್ ಇಂಗ್ಲಿಷ್ ಕೇವಲ 4 ರನ್ಗೆ ಹ್ಯಾಜಲ್ವುಡ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು.
ಇದನ್ನೂ ಓದಿ:IPLನಲ್ಲಿ ಶ್ರೇಯಸ್ ಅಯ್ಯರ್ ಟ್ರ್ಯಾಕ್ ರೆಕಾರ್ಡ್ RCBಗೆ ಭಯ ಹುಟ್ಟಿಸುತ್ತಾ?
ಇಲ್ಲಿಗೆ ಪಂಜಾಬ್ ಕಿಂಗ್ಸ್ ತಂಡದ ಬಲಿಷ್ಠ ಬ್ಯಾಟಿಂಗ್ ಮಗ್ಗಲು ಅನ್ನು ಬೆಂಗಳೂರು ತಂಡ ಮುರಿದಂತೆ ಆಯಿತು. ಶ್ರೇಯಸ್ ಅಯ್ಯರ್ ಔಟ್ ಆಗಿದ್ದಾಗ ತಂಡದ ಮೊತ್ತ 30 ಆಗಿತ್ತು. ಇನ್ನು 5ನೇ ಬ್ಯಾಟರ್ ಆಗಿ ಕ್ರೀಸ್ಗೆ ಬಂದ ನೆಹಾಲ್ ವಧೇರಾ ಕೂಡ ಯಶ್ ದಯಾಳ್ ಬೌಲಿಂಗ್ನಲ್ಲಿ ಕ್ಲೀನ್ ಬೋಲ್ಡ್ ಆಗಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮರಳಿದರು.
ಇನ್ನು ಸುಯಶ್ ಶರ್ಮಾ ಬೌಲಿಂಗ್ನಲ್ಲಿ ಶಶಾಂಕ್ ಸಿಂಗ್ ಕೇವಲ 3 ರನ್ಗೆ ಔಟ್ ಆದರು. ಶಶಾಂಕ್ ಸಿಂಗ್ ಬೆನ್ನಲ್ಲೇ ಮುಶೀರ್ ಖಾನ್ ಅವರನ್ನು ಸುಯಶ್ ಶರ್ಮಾ ಎಲ್ಬಿ ಬಲಿಗೆ ಕೆಡವಿದರು. ಇದರ ಜೊತೆಗೆ ಮಾರ್ಕಸ್ ಸ್ಟೊಯಿನಿಸ್ ಅವರನ್ನು ಸುಯಶ್ ಶರ್ಮಾ ಕ್ಲೀನ್ ಬೋಲ್ಡ್ ಮಾಡಿ, ಬ್ಯಾಕ್ ಟು ಬ್ಯಾಕ್ ಮೂರು ವಿಕೆಟ್ಗಳನ್ನು ಉರುಳಿಸಿ ಆರ್ಸಿಬಿಗೆ ದೊಡ್ಡ ಕೊಡುಗೆ ನೀಡಿದರು. 8 ವಿಕೆಟ್ ಉರುಳಿದ ಮೇಲೆ ಇನ್ನು ತಂಡದ ಬ್ಯಾಟಿಂಗ್ ನಿರೀಕ್ಷೆ ಮಾಡಲು ಯಾವುದೇ ಬಲಿಷ್ಠ ಬ್ಯಾಟರ್ ಇರಲಿಲ್ಲ. ಹೀಗಾಗಿ ಪಂಜಾಬ್ ತಂಡದ 14.1 ಓವರ್ಗೆ ಆಲೌಟ್ ಆಗಿ 101 ರನ್ಗಳ ಟಾರ್ಗೆಟ್ ಅನ್ನು ಆರ್ಸಿಬಿಗೆ ನೀಡಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ