/newsfirstlive-kannada/media/post_attachments/wp-content/uploads/2025/04/Maxwell.jpg)
ಗ್ಲೆನ್ ಮ್ಯಾಕ್ಸ್‌ವೆಲ್ ಸದ್ಯ ಪಂಜಾಬ್ ಕಿಂಗ್ಸ್ ತಂಡದಲ್ಲಿ ಆಲ್‌ರೌಂಡರ್ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ಬಾರಿ ಆರ್ಸಿಬಿಯ ತಂಡದಲ್ಲಿ ಮ್ಯಾಕ್ಸ್‌ವೆಲ್ ಅಷ್ಟಕ್ಕೆ ಅಷ್ಟೇ ಆಡಿದ್ದರು. 2025ರ ಸೀಸನ್ನಲ್ಲಿ ಪಂಜಾಬ್ ತಂಡದಲ್ಲಿದ್ದು ಬ್ಯಾಟಿಂಗ್ನಲ್ಲಿ ಅಂತಹದ್ದೇನು ದೊಡ್ಡ ಸಾಧನೆ ಮಾಡಿಲ್ಲ. ಈ ಎಲ್ಲದರ ಮಧ್ಯೆ ಮ್ಯಾಕ್ಸ್‌ವೆಲ್ ಅವರನ್ನು ಪಂಜಾಬ್ ತಂಡದಿಂದ ಕೈಬಿಡಲಾಗಿದೆ. ಇದಕ್ಕೆ ಬಲವಾದ ಕಾರಣ ಕೂಡ ಇದೆ.
ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಸದ್ಯ ಕೈಬೆರಳಿನ ಮೂಳೆ ಮುರಿತದಿಂದ ಬಳಲುತ್ತಿದ್ದಾರೆ. ಇದರಿಂದ ಪಂದ್ಯದಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ ಎನ್ನಲಾಗಿದೆ. ಈಗಾಗಲೇ ಐಪಿಎಲ್ ಪ್ಲೇ ಆಫ್ ಹಂತಕ್ಕೆ ತಲುಪಿದ್ದು ರೋಚಕತೆ ಪಡೆದಿದ್ದರಿಂದ ಮ್ಯಾಕ್ಸ್‌ವೆಲ್ ಬದಲಿಗೆ ಪಂಜಾಬ್ ಕಿಂಗ್ಸ್ ಬದಲಿ ಆಟಗಾರನಿಗೆ ಮಣೆ ಹಾಕಿದ್ದು 3 ಕೋಟಿ ರೂಪಾಯಿಗಳನ್ನು ನೀಡಿ ತಂಡಕ್ಕೆ ಕರೆ ತರುತ್ತಿದೆ.
ಇದನ್ನೂ ಓದಿ: ಕೊನೆ 2 ಓವರ್ನಲ್ಲಿ 54 ರನ್.. RCB ಸ್ಫೋಟಕ ಬ್ಯಾಟರ್ ಶೆಫರ್ಡ್ ಬ್ಯಾಟಿಂಗ್ ಹೇಗಿತ್ತು? -Video ಇಲ್ಲಿದೆ!
2025ರ ಉಳಿದ ಪಂದ್ಯಗಳಿಂದ ಗ್ಲೆನ್ ಮ್ಯಾಕ್ಸ್‌ವೆಲ್ ಹೊರಗುಳಿಯುತ್ತಿದ್ದರಿಂದ ಅವರ ಬದಲಿಗೆ ಆಸ್ಟ್ರೇಲಿಯಾದ ಮಿಚೆಲ್ ಓವನ್, ಪಂಜಾಬ್ ಕಿಂಗ್ಸ್ ತಂಡವನ್ನು ಸೇರಿಕೊಳ್ಳಲ್ಲಿದ್ದಾರೆ. ಪ್ರಸ್ತುತ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್)ನಲ್ಲಿ ಬಾಬರ್ ಅಜಮ್ ನೇತೃತ್ವದ ಪೇಶಾವರ್ ಝಲ್ಮಿ ತಂಡದಲ್ಲಿ ಆಡುತ್ತಿರುವ ಬ್ಯಾಟರ್ ಮಿಚೆಲ್ ಓವನ್ ಅವರನ್ನು 3 ಕೋಟಿ ಹಣ ನೀಡಿ ಪಂಜಾಬ್ ಫ್ರಾಂಚೈಸಿ ತಂಡಕ್ಕೆ ಕರೆತರುತ್ತಿದೆ.
ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಈ ಸಲ 4.2 ಕೋಟಿ ರೂಪಾಯಿಗಳಿಗೆ ಪಂಜಾಬ್ ಕಿಂಗ್ಸ್ ಖರೀದಿ ಮಾಡಿತ್ತು. ಮೇಲೆ ಮೇಲೆ ಪಂದ್ಯದಲ್ಲಿ ಅವಕಾಶಗಳನ್ನು ನೀಡಿದರೂ ಮ್ಯಾಕ್ಸ್ವೆಲ್ನಿಂದ ಯಾವುದೇ ಉತ್ತಮ ಮಟ್ಟದ ಪರ್ಫಾಮೆನ್ಸ್ ಮೂಡಿ ಬಂದಿರಲಿಲ್ಲ. ಹೀಗಾಗಿ ಅಭಿಮಾನಿಗಳಿಂದ ಅಪಸ್ವರ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಕೈಬೆರಳು ಮುರಿದಿದ್ದರಿಂದ ಅವರನ್ನು ಮುಂದಿನ ಐಪಿಎಲ್ ಪಂದ್ಯಗಳಿಂದ ಹೊರಗಿಡಲಾಗಿದೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ