/newsfirstlive-kannada/media/post_attachments/wp-content/uploads/2025/05/RCB_VS_PBKS.jpg)
ಐಪಿಎಲ್ ಸೀಸನ್ 18 ಅಂತಿಮ ಘಟ್ಟ ತಲುಪಿದೆ. ಕಪ್ ಗೆಲ್ಲೋ ಫೇವರಿಟ್ ಯಾರು ಎಂಬ ಚರ್ಚೆ ಸಿಕ್ಕಾಪಟ್ಟೆ ಜೋರಾಗಿ ನಡೀತಿದೆ. ಪಂಜಾಬ್ ಕಿಂಗ್ಸ್ನ ಹೆಸರು ಈ ವಿಚಾರದಲ್ಲಿ ಪವರ್ಫುಲ್ ಆಗಿ ಕೇಳಿ ಬರ್ತಿದೆ. ಹಾಗಾದ್ರೆ, ಪಂಜಾಬ್ ಈ ಬಾರಿ ಕಪ್ ಗೆಲ್ಲುತ್ತಾ.? ಇವತ್ತು ಆರ್ಸಿಬಿಗೆ ಟಫ್ ಫೈಟ್ ಕೊಡುತ್ತಾ.? ಅಷ್ಟಕ್ಕೂ ಪಂಜಾಬ್ನ ಯಾಕೆ ಫೇವರಿಟ್?.
ತಂಡದ ನಾಯಕರು ಬದಲಾದ್ರು, ಕೋಚ್ಗಳು ಬದಲಾದ್ರು, ಸ್ಟಾರ್ ಆಟಗಾರರು ಬಂದ್ರು, ಹೋದ್ರು. ಅಷ್ಟೇ ಏಕೆ ನಸೀಬು ಬದಲಾಗಲಿ ಅಂತಾ ಫ್ರಾಂಚೈಸಿ ಹೆಸರನ್ನೂ ಚೇಂಜ್ ಮಾಡ್ತು. ಆದ್ರೆ, ಪಂಜಾಬ್ ತಂಡಕ್ಕೆ ಸಕ್ಸಸ್ ಸಿಕ್ಕಿರಲಿಲ್ಲ. ಲಕ್ಕೂ ಒಲಿದಿರಲಿಲ್ಲ. ಆದ್ರೆ, ಸೀಸನ್ 18ರ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ಕ್ರಿಕೆಟ್ ಲೋಕವನ್ನೇ ಅಚ್ಚರಿಗೆ ದೂಡಿದೆ. ಸುದೀರ್ಘ 11 ವರ್ಷಗಳ ಬಳಿಕ ಟೇಬಲ್ ಟಾಪರ್ ಆಗಿ ಪ್ಲೇ ಅಫ್ಗೆ ಎಂಟ್ರಿ ಕೊಟ್ಟಿದೆ.
ಲೀಗ್ ಸ್ಟೇಜ್ನಲ್ಲಿ ಬೊಂಬಾಟ್ ಆಟವಾಡಿರೋ ಪಂಜಾಬ್ ಈ ಬಾರಿ ಟ್ರೋಫಿ ಗೆಲ್ಲೋ ಹಾಟ್ ಫೇವರಿಟ್ ಅನಿಸಿದೆ. ಮಾಜಿ ಕ್ರಿಕೆಟರ್ಸ್, ಕ್ರಿಕೆಟ್ ಪಂಡಿತರು ಎಲ್ರೂ ಪಂಜಾಬ್ ಕಪ್ ಗೆಲ್ಲೋದು ಪಕ್ಕಾ ಎಂದು ಭವಿಷ್ಯ ನುಡೀತಿದ್ದಾರೆ. ಐಪಿಎಲ್ ಇತಿಹಾಸದಲ್ಲಿ 3ನೇ ಬಾರಿ ಪಂಜಾಬ್ ಪ್ಲೇ ಆಫ್ಗೆ ಎಂಟ್ರಿ ನೀಡಿರೋದು. ಆದ್ರೆ, ಈ ಹಿಂದೆಂದಿಗಿಂತ ಈ ಬಾರಿ ಪಂಜಾಬ್ ಬಲಿಷ್ಠವಾಗಿ ಕಾಣ್ತಿದೆ. ತಂಡದಲ್ಲಿ ಫೈರ್ ಇದೆ. ನಂಬಿಕೆ ಇದೆ. ಅಚಲವಾದ ಆತ್ಮವಿಶ್ವಾಸವಿದೆ. ಕಪ್ ಗೆಲ್ಲೋ ತಂಡಕ್ಕೆ ಬೇಕಾದ ಎಲ್ಲಾ ಕ್ವಾಲಿಟೀಸ್ ಇದೆ.
ಫೈರಿ ಓಪನರ್ಸ್.. ಪವರ್ಫುಲ್ ಟಾಪ್ ಆರ್ಡರ್.!
ಪಂಜಾಬ್ನ ಅಸಲಿ ಪವರ್ ಇರೋದೆ ಟಾಪ್ ಆರ್ಡರ್ ಬ್ಯಾಟಿಂಗ್ನಲ್ಲಿ. ಈ ಬಾರಿ ಪಂಜಾಬ್ಗೆ ಪವರ್ಫುಲ್ ಓಪನರ್ಸ್ ಸಿಕ್ಕಿದ್ದಾರೆ. ಪ್ರಭ್ಸಿಮ್ರನ್ ಸಿಂಗ್, ಪ್ರಿಯಾಂಶ್ ಆರ್ಯ ಕನ್ಸಿಸ್ಟೆಂಟ್ ಆಗಿ ಫೈರಿ ಬ್ಯಾಟಿಂಗ್ ಮೂಲಕ ಗುಡ್ ಸ್ಟಾರ್ಟ್ ನೀಡ್ತಿದ್ದಾರೆ. 3ನೇ ಕ್ರಮಾಂಕದಲ್ಲಿ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಶೈನ್ ಆಗಿದ್ದಾರೆ. ಟಾಪ್ ಆರ್ಡರ್ ಬ್ಯಾಟರ್ಸ್ ಪವರ್ ಪ್ಲೇನಲ್ಲಿ ಡಾಮಿನೇಟಿಂಗ್ ಪರ್ಫಾಮೆನ್ಸ್ ನೀಡ್ತಿದ್ದಾರೆ.
ಪಂಜಾಬ್ ಟಾಪ್ ಆರ್ಡರ್ ಪ್ರದರ್ಶನ
ಲೀಗ್ ಹಂತದ 14 ಪಂದ್ಯಗಳಿಂದ ಪ್ರಭ್ಸಿಮ್ರನ್ ಸಿಂಗ್ 165.78ರ ಸ್ಟ್ರೈಕ್ರೇಟ್ನಲ್ಲಿ 499 ರನ್ಗಳಿಸಿದ್ರೆ, ಪ್ರಿಯಾಂಶ್ ಆರ್ಯ 183.54ರ ಸ್ಟ್ರೈಕ್ರೇಟ್ನಲ್ಲಿ 424 ರನ್ಗಳಿಸಿದ್ದಾರೆ. ಶ್ರೇಯಸ್ ಅಯ್ಯರ್ 171.90ರ ಸ್ಟ್ರೈಕ್ರೇಟ್ನಲ್ಲಿ 514 ರನ್ಗಳಿಸಿದ್ದಾರೆ.
ಬ್ಯಾಟಿಂಗ್ ಡೆಪ್ತ್.. T20 ಸ್ಪೆಷಲಿಸ್ಟ್ ಬ್ಯಾಟರ್ಸ್.!
ಈ ಸೀಸನ್ನಲ್ಲಿ 8ನೇ ಕ್ರಮಾಂಕದವರೆಗೆ ಪಂಜಾಬ್ ಪಡೆಯ ಬ್ಯಾಟಿಂಗ್ ಡೆಪ್ತ್ ಇದೆ. ಮಿಡಲ್ ಆರ್ಡರ್, ಲೋವರ್ ಆರ್ಡರ್ನಲ್ಲಿ ಟಿ20 ಸ್ಪೆಷಲಿಸ್ಟ್ಗಳೇ ತಂಡದಲ್ಲಿದ್ದಾರೆ. ಜೋಶ್ ಇಂಗ್ಲಿಸ್, ನೆಹಾಲ್ ವಡೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೋಯಿನಿಸ್ರಂತ ಬಿಗ್ ಹಿಟ್ಟರ್ಗಳ ಬಲವಿದೆ. ಪರ್ಫಾಮೆನ್ಸ್ ವಿಚಾರದಲ್ಲಿ ಇವರ್ಯಾರೂ ಹಿಂದೆ ಬಿದ್ದಿಲ್ಲ.
‘ಪರ್ಫೆಕ್ಟ್ 4’.. ಬೌಲಿಂಗ್ ವಿಭಾಗ ಸ್ಪಷ್ಟ & ಬಲಿಷ್ಠ.!
ಪಂಜಾಬ್ ಕಿಂಗ್ಸ್ ಬೌಲಿಂಗ್ ಅಟ್ಯಾಕ್ ಸ್ಪಷ್ಟ ಹಾಗೂ ಬಲಿಷ್ಠವಾಗಿದೆ. ಮಾರ್ಕೋ ಯಾನ್ಸೆನ್, ಆರ್ಷ್ದೀಪ್ ಸಿಂಗ್ ಕರಾರುವಕ್ ದಾಳಿ ಸಂಘಟಿಸ್ತಾ ಇದ್ರೆ, ಯುಜುವೇಂದ್ರ ಚಹಲ್, ಹರ್ಪ್ರಿತ್ ಬ್ರಾರ್ ಸ್ಪಿನ್ ಮ್ಯಾಜಿಕ್ ಮಾಡ್ತಿದ್ದಾರೆ. ಈ ಪರ್ಫೆಕ್ಟ್ ಫೋರ್ಗಳು ತಮ್ಮ ಪರ್ಫಾಮೆನ್ಸ್ನಿಂದ ಎದುರಾಳಿಗಳ ಕಂಗೆಡಿಸಿದ್ದಾರೆ. ಎಕಾನಮಿಕಲ್ ಸ್ಪೆಲ್ಗಳನ್ನ ಹಾಕ್ತಿರೋ ಇವ್ರು ವಿಕೆಟ್ ಬೇಟೆಯಲ್ಲೂ ಹಿಂದೆ ಬಿದ್ದಿಲ್ಲ.
ಇದನ್ನೂ ಓದಿ:RCB ಜೊತೆ ಹೋರಾಟ ನಡೆಸೋ ಪಂಜಾಬ್ ಕಿಂಗ್ಸ್ನ ಸ್ಟ್ರೆಂಥ್, ವೀಕ್ನೆಸ್ ಏನೇನು..?
‘ಪಂಟರ್’ ಪಾಂಟಿಂಗ್, ‘ಚಾಣಕ್ಷ’ ಶ್ರೇಯಸ್..!
ಕ್ಯಾಪ್ಟನ್ ಶ್ರೇಯಸ್ ಅಯ್ಯರ್, ಕೋಚ್ ರಿಕಿ ಪಾಂಟಿಂಗ್ ಪಂಜಾಬ್ ತಂಡದ ಚರಿಷ್ಮಾವನ್ನೇ ಬದಲಿಸಿದ್ದಾರೆ. ಪ್ಲೇಯಿಂಗ್ ಇಲೆವೆನ್ ಸೆಲೆಕ್ಷನ್ನಿಂದ ಹಿಡಿದು ಗೇಮ್ ಪ್ಲಾನ್, ಸ್ಟ್ರಾಟರ್ಜಿ ಎಲ್ಲಾ ವಿಚಾರದಲ್ಲೂ ಈ deadly duo ಬ್ರಿಲಿಯಂಟ್ ಡಿಶಿಷನ್ ತೆಗೆದುಕೊಳ್ತಿದೆ. ರನ್ಭೂಮಿಗೆ ಇಳಿದ ಮೇಲೆ ಕನ್ಪ್ಯೂಶನ್ ಅನ್ನೋದು ತಂಡದಲ್ಲಿ ಇರಲ್ಲ. ಪಂಟರ್ ಪಾಂಟಿಂಗ್ ಪಾಠವನ್ನ ಚಾಣಕ್ಷ ಶ್ರೇಯಸ್ ಅಯ್ಯರ್ ಆನ್ಫೀಲ್ಡ್ನಲ್ಲಿ ಫರ್ಪೆಕ್ಟ್ ಆಗಿ ಎಕ್ಸಿಕ್ಯೂಟ್ ಮಾಡ್ತಿದ್ದಾರೆ.
ಬ್ಯಾಟಿಂಗ್, ಬೌಲಿಂಗ್ ಮಾತ್ರವಲ್ಲ, ಫೀಲ್ಡಿಂಗ್ನಲ್ಲೂ ಪಂಜಾಬ್ ಕಿಂಗ್ಸ್ ಉತ್ತಮ ಪ್ರದರ್ಶನವನ್ನ ನೀಡ್ತಿದೆ. ಒಟ್ಟಾರೆಯಾಗಿ ಆಲ್ರೌಂಡ್ ಪರ್ಫಾಮೆನ್ಸ್ನಿಂದ ಪಂಜಾಬ್ ಈ ಸೀಸನ್ನ ಪವರ್ಫುಲ್ ತಂಡ ಅನಿಸಿದೆ. ಪಂಜಾಬ್ ಕಪ್ ಗೆಲ್ಲೋ ಹಾಟ್ ಫೇವರಿಟ್ ಅನಿಸಿರೋದು ಈ ಕಾರಣಗಳಿಂದಲೇ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ