/newsfirstlive-kannada/media/post_attachments/wp-content/uploads/2025/04/VIRAT_KOHLI-1-1.jpg)
ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ಟೀಮ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸಾಧಾರಣ ಮೊತ್ತದ ಗುರಿ ನೀಡಿದೆ. ಆರ್ಸಿಬಿ ಬೌಲರ್ಗಳ ಅಬ್ಬರಕ್ಕೆ ಪಂಜಾಬ್ ಬ್ಯಾಟರ್ಸ್ ಆಡಲಾಗದೇ ಈ ಟಾರ್ಗೆಟ್ ನೀಡಿದ್ದಾರೆ.
ಮುಲ್ಲನ್ಪುರ್ನ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆರ್ಸಿಬಿ ಒರ ರಜತ್ ಪಾಟಿದಾರ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಇವರ ನಿರ್ಧಾರ ಸರಿಯಾಗಿಯೇ ಇತ್ತು ಎಂದು ತಂಡ ಆರಂಭದ ನಂತರ ಗೊತ್ತಾಯಿತು. ಪಂಜಾಬ್ ಪರವಾಗಿ ಆರಂಭಿಕ ಬ್ಯಾಟರ್ಗಳಾಗಿ ಕ್ರೀಸ್ಗೆ ಬಂದ ಪ್ರಿಯಾಂಶ್ ಆರ್ಯ 22 ಹಾಗೂ ಪ್ರಭಸಿಮ್ರನ್ ಸಿಂಗ್ 33 ರನ್ಗೆ ಔಟ್ ಆದರು. ಈ ಇಬ್ಬರು ಓಪನರ್ಸ್ ಕೃನಾಲ್ ಪಾಂಡ್ಯ ಬೌಲಿಂಗ್ನಲ್ಲಿ ಟಿಮ್ ಡೇವಿಡ್ಗೆ ಕ್ಯಾಚ್ ಕೊಟ್ಟಿರುವುದು ಅಚ್ಚರಿಯಂತೆ ಕಾಣಿಸಿತು.
ಇದನ್ನೂ ಓದಿ:RCB ಆಲ್ರೌಂಡರ್ ಬ್ಯೂಟಿ ಕ್ಯಾಚ್.. ಪಂಜಾಬ್ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಔಟ್ ಆಗಿದ್ದೇಗೆ?
ನಾಯಕ ಶ್ರೇಯಸ್ ಅಯ್ಯರ್ 3ನೇ ಕ್ರಮಾಂಕದಲ್ಲಿ ಮೈದಾನಕ್ಕೆ ಬಂದು, ಬೇಗನೆ ಹೊರ ನಡೆದರು. 6 ರನ್ ಗಳಿಸಿದ್ದಾಗ ಬಿಗ್ ಶಾಟ್ ಬಾರಿಸಿದ ಅಯ್ಯರ್, ಕೃನಾಲ್ ಪಾಂಡ್ಯಗೆ ಕ್ಯಾಚ್ ಕೊಟ್ಟರು. ಜೋಶ್ ಇಂಗ್ಲಿಸ್ ಕೆಲ ಹೊತ್ತು ಆರ್ಸಿಬಿ ಬೌಲರ್ಗಳನ್ನ ಕಾಡಿದರೂ 29 ರನ್ಗೆ ಬೋಲ್ಡ್ ಆದ್ರು. ಶಶಾಂಕ್ ಸಿಂಗ್ ಪಂಜಾಬ್ಗೆ ಆಸೆರೆಯಾದರು. ತಾಳ್ಮೆಯ ಬ್ಯಾಟಿಂಗ್ ಮಾಡಿದ ಶಶಾಂಕ್ 33 ಎಸೆತದಲ್ಲಿ ಒಂದು ಫೋರ್ ಸಮೇತ 31 ರನ್ ಗಳಿಸಿ ಅಜೇಯರಾಗಿ ಉಳಿದರು.
ಮಾರ್ಕೋ ಜಾನ್ಸನ್ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದರು. 20 ಬಾಲ್ಗಳನ್ನು ಎದುರಿಸಿದ ವಿದೇಶಿ ಆಟಗಾರ 2 ಸಿಕ್ಸರ್ಗಳಿಂದ 25 ರನ್ಗಳಿಸಿದರು. ಇದರಿಂದ ಅಂತಿಮವಾಗಿ ಪಂಜಾಬ್ ಕಿಂಗ್ಸ್ 20 ಓವರ್ಗಳಲ್ಲಿ 6 ವಿಕೆಟ್ಗೆ 158 ರನ್ಗಳ ಗುರಿಯನ್ನು ಆರ್ಸಿಬಿಗೆ ನೀಡಿದೆ. ಇನ್ನು ಬೆಂಗಳೂರು ತಂಡದಲ್ಲಿ ಕೃನಾಲ್ ಪಾಂಡ್ಯ, ಸುಯಶ್ ಶರ್ಮಾ ತಲಾ 2 ವಿಕೆಟ್ ಪಡೆದು ಸಂಭ್ರಮಿಸಿದರು, ಶೇಫರ್ಡ್ ಒಂದು ವಿಕೆಟ್ ಉರುಳಿಸಿದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ