/newsfirstlive-kannada/media/post_attachments/wp-content/uploads/2025/05/RCB-15.jpg)
ಐಪಿಎಲ್ನ ಕ್ವಾಲಿಫೈಯರ್- 1ರ ಪಂದ್ಯದ ಆರಂಭದಲ್ಲೇ ಪಂಜಾಬ್ ಕಿಂಗ್ಸ್ಗೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಿಗ್ ಶಾಕ್ ಕೊಟ್ಟಿದೆ. ಕೇವಲ 60 ರನ್ ಒಳಗೆ ಪ್ರಮುಖವಾದ 6 ವಿಕೆಟ್ಗಳನ್ನು ಉರುಳಿಸಿದೆ.
ಮುಲ್ಲನಪುರದ ನ್ಯೂ ಪಿಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ನಾಯಕ ರಜತ್ ಪಾಟಿದಾರ್ ಬೌಲಿಂಗ್ ಆಯ್ಕೆ ಮಾಡಿದ ನಿರ್ಧಾರ ಸರಿಯಾಗಿ ಇದೆ ಎನಿಸುತ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಪಂಜಾಬ್ ಕಿಂಗ್ಸ್ಗೆ ಶಾಕ್ ಮೇಲೆ ಶಾಕ್ ಅನ್ನು ಆರ್ಸಿಬಿ ತಂಡದ ಬೌಲರ್ಗಳು ಕೊಡುತ್ತಿದ್ದಾರೆ.
ಪ್ರಿಯಾಂಶ್ ಆರ್ಯ 7 ರನ್ ಗಳಿಸಿ ಆಡುತ್ತಿದ್ದರು. ಈ ವೇಳೆ ತಂಡದ 2ನೇ ಓವರ್ ಮಾಡುತ್ತಿದ್ದ ಯಶ್ ದಯಾಳ್ ಅವರ 2ನೇ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾದ ಪ್ರಿಯಾಂಶ್ ಆರ್ಯ ನೇರವಾಗಿ ಕೃನಾಲ್ ಪಾಂಡ್ಯಗೆ ಕ್ಯಾಚ್ ಕೊಟ್ಟು ಹೊರ ನಡೆದಿದ್ದಾರೆ. ಇವರ ಬೆನ್ನಲ್ಲೇ ಬ್ಯಾಟಿಂಗ್ ಮಾಡಲು ಜೋಶ್ ಇಂಗ್ಲಿಷ್ ಬಂದು ಕೇವಲ 4 ರನ್ಗೆ ಹ್ಯಾಜಲ್ವುಡ್ ಬೌಲಿಂಗ್ನಲ್ಲಿ ಔಟ್ ಆಗಿದ್ದಾರೆ.
ಇದನ್ನೂ ಓದಿ: RCBಗೆ ಮತ್ತೊಮ್ಮೆ ಕೈ ಹಿಡಿದ ಅದೃಷ್ಟ; ಟಾಸ್ ಗೆದ್ದ ರಜತ್.. ಪ್ಲೇಯಿಂಗ್- 11ರಲ್ಲಿ ಸಣ್ಣ ಬದಲಾವಣೆ!
ಪ್ರಿಯಾಂಶ್ ಆರ್ಯ ಔಟ್ ಆಗುತ್ತಿದ್ದಂತೆ ಪಂಜಾಬ್ ತಂಡದ ಮೊತ್ತ 27 ಆಗಿದ್ದಾಗ ಇನ್ನೊಬ್ಬ ಓಪನರ್ ಪ್ರಭಾಸಿಮ್ರಾನ್ ಸಿಂಗ್ (18) ಕೀಪರ್ ಕ್ಯಾಚ್ ಆದರು. ಭುವನೇಶ್ವರ್ ಕುಮಾರ್ ಹಾಕಿದ ಕೊನೆಯ ಬಾಲ್ ಅನ್ನು ಡಿಫೆಂಡ್ ಮಾಡಲು ಹೋದ ಪ್ರಭಾಸಿಮ್ರಾನ್, ಜಿತೇಶ್ ಶರ್ಮಾಗೆ ಕ್ಯಾಚ್ ಕೊಟ್ಟು ನಿರಾಶೆಗೆ ಒಳಗಾದರು. ಪ್ರಭಾಸಿಮ್ರಾನ್ ಔಟ್ ಆದ 3 ರನ್ಗಳ ನಂತರ ನಾಯಕ ಶ್ರೇಯಸ್ ಅಯ್ಯರ್ ಕೂಡ ಪೆವಿಲಿಯನ್ ಖಾಲಿ ಮಾಡಿದರು.
ಜೋಶ್ ಹ್ಯಾಜಲ್ವುಡ್ ಅವರು ತಂಡದ 4ನೇ ಓವರ್ನ 4ನೇ ಬಾಲ್ ಅನ್ನು ಹಾಕಿದ್ದರು. ಇದನ್ನು ಹೊಡೆಯಲು ಹೋದ ಶ್ರೇಯಸ್ ಅವರು ಕೀಪರ್ ಜಿತೇಶ್ ಶರ್ಮಾಗೆ ಕ್ಯಾಚ್ ಕೊಟ್ಟು ದೊಡ್ಡ ನಷ್ಟ ಅನುಭವಿಸಿದರು. 5ನೇ ಬ್ಯಾಟರ್ ಆಗಿ ಕ್ರೀಸ್ಗೆ ಬಂದ ನೆಹಾಲ್ ವಧೇರಾ ಕೂಡ ಯಶ್ ದಯಾಳ್ ಬೌಲಿಂಗ್ನಲ್ಲಿ ಕ್ಲೀನ್ ಬೋಲ್ಡ್ ಆಗಿದ್ದಾರೆ. ಇನ್ನು ಸುಯಾಶ್ ಶರ್ಮಾ ಬೌಲಿಂಗ್ನಲ್ಲಿ ಶಶಾಂಕ್ ಸಿಂಗ್ ಕೇವಲ 3 ರನ್ಗೆ ಔಟ್ ಆದರು. ಇದರಿಂದ ಪಂಜಾಬ್ ಕೇವಲ 60 ರನ್ಗೆ 6 ವಿಕೆಟ್ ಕಳೆದುಕೊಂಡಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ