/newsfirstlive-kannada/media/post_attachments/wp-content/uploads/2025/04/KL_RAHUL_NEW_BAT.jpg)
ದೀ ಗ್ರ್ಯಾಂಡ್ ಐಪಿಎಲ್ ಟೂರ್ನಿಯ ಪಂದ್ಯಗಳು ಕೊನೆಯ ಹಂತಕ್ಕೆ ತಲುಪುತ್ತಿವೆ. ಸದ್ಯ ಇಂದು ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯುವ ಮೊದಲೇ ವಿಘ್ನ ಎದುರಾಗಿದ್ದು ಮಳೆಯಿಂದಾಗಿ ಟಾಸ್ ಅನ್ನು ವಿಳಂಬ ಮಾಡಲಾಗಿದೆ.
ಐಪಿಎಲ್ ವೇಳಾಪಟ್ಟಿಯಂತೆ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಮಹತ್ವದ ಪಂದ್ಯಕ್ಕೆ ಸಂಜೆ 7 ಗಂಟೆಗೆ ಸರಿಯಾಗಿ ಟಾಸ್ ಆಗಬೇಕಿತ್ತು. ಆದರೆ ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರಿಕೆಟ್ ಸ್ಟೇಡಿಯಂ ಸುತ್ತ ವರುಣರಾಯ ಆರ್ಭಟ ಶುರು ಮಾಡಿದ್ದಾನೆ. ಪಂದ್ಯ ನಡೆಯುವ ಮೊದಲೇ ಮಳೆ ಜೋರಾಗಿದ್ದರಿಂದ ಟಾಸ್ ಅನ್ನು ಇದುವರೆಗೂ ಹಾಕಿಲ್ಲ.
ಇದನ್ನೂ ಓದಿ:RCB ಪ್ಲೇಯರ್ಸ್ ಟೆಂಪಲ್ ರನ್.. ಐಪಿಎಲ್ ಟ್ರೋಫಿಗಾಗಿ ಹನುಮಾನ್ ಆಶೀರ್ವಾದ ಪಡೆದ ಆಟಗಾರ
ಟಾಸ್ ಮಾಡಲೆಂದು ಎರಡು ತಂಡಗಳ ನಾಯಕರು ಹಾಗೂ ಸಿಬ್ಬಂದಿ ಸಂಜೆ 6:55ಕ್ಕೆ ಮೈದಾನಕ್ಕೆ ಆಗಮಿಸಿದ್ದರು. ಇನ್ನೇನು ಟಾಸ್ ಚಿಮ್ಮಬೇಕು ಅಷ್ಟರಲ್ಲೇ ಜೋರಾಗಿ ಮಳೆ ಸುರಿದಿದೆ. ಇದರಿಂದ ಎಲ್ಲರೂ ವಾಪಸ್ ಟ್ರೆಸ್ಸಿಂಗ್ ರೂಮ್ ಕಡೆ ಹೋಗಿದ್ದಾರೆ. ಉಳಿದಂತೆ ಸ್ಟೇಡಿಯಂನ ಸಿಬ್ಬಂದಿ ಪಿಚ್ ಅನ್ನು ತಾಡಪಾಲ್, ಕವರ್ಗಳಿಂದ ಮುಚ್ಚಿದ್ದಾರೆ. ಸದ್ಯಕ್ಕೆ ಮಳೆ ಇನ್ನು ಬರುತ್ತಿದ್ದರಿಂದ ಟಾಸ್ ಹಾಕಿಲ್ಲ. ಇದಕ್ಕಾಗಿ ಎಲ್ಲರೂ ಕಾಯಬೇಕಾಗಿದೆ.
ಪಂಜಾಬ್ ಹಾಗೂ ಡೆಲ್ಲಿ ಎರಡು ತಂಡಕ್ಕೂ ಈ ಪಂದ್ಯ ಅತ್ಯಂತ ಮುಖ್ಯವಾಗಿದೆ. ಏಕೆಂದರೆ ಪ್ಲೇ ಆಫ್ ಹಂತಕ್ಕೆ ಹೋಗಬೇಕು ಎಂದರೆ ಎರಡು ತಂಡಗಳಿಗೆ ಇಂದಿನ ಪಂದ್ಯ ಅತ್ಯಂತ ನಿರ್ಣಾಯಕವಾಗಿದೆ. 15 ಅಂಕಗಳಿಂದ ಪಂಜಾಬ್ 3ನೇ ಸ್ಥಾನದಲ್ಲಿದ್ರೆ, 13 ಅಂಕ ಪಡೆದು ಡೆಲ್ಲಿ ಕ್ಯಾಪಿಟಲ್ಸ್ 5ನೇ ಸ್ಥಾನದಲ್ಲಿದೆ. ಒಂದು ವೇಳೆ ಮಳೆಯಿಂದ ಎರಡಕ್ಕೂ ಪಾಯಿಂಟ್ ಹಂಚಿದ್ರೆ ಡೆಲ್ಲಿಗೆ ನಷ್ಟವಾಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ