/newsfirstlive-kannada/media/post_attachments/wp-content/uploads/2025/03/GT-vsPBKS.jpg)
ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಿನ್ನೆ ರನ್​ ಹೊಳೆ ಹರಿಯತು. ಬೌಂಡರಿ, ಸಿಕ್ಸರ್​ಗಳ ಭೋರ್ಗೆರತವೇ ಸೃಷ್ಟಿಯಾಯ್ತು. ಅಂತಿಮ ಐದು ಓವರ್​​ಗಳಲ್ಲಿ ಬೌಲರ್​ಗಳ ದರ್ಬಾರ್​ ನಡೀತು. ಅದ್ರಲ್ಲೂ ಕನ್ನಡಿಗ ವೈಶಾಕ್​ ವಿಜಯ್​​ ಕುಮಾರ್​​ ಮ್ಯಾಜಿಕಲ್​ ಸ್ಪೆಲ್​ನಿಂದ ಪಂದ್ಯದ ಗತಿಯನ್ನೇ ಬದಲಿಸಿಬಿಟ್ರು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ಗಿಳಿದ ಪಂಜಾಬ್​ಗೆ ಆರಂಭಿಕ ಪ್ರಭ್​ಸಿಮ್ರನ್​ ಕೈ ಕೊಟ್ರು. ಇನ್ನೋರ್ವ ಓಪನರ್​ ಪ್ರಿಯಾಂಶ್​ ಆರ್ಯ ಸಿಡಿದು ನಿಂತ್ರು. ಡೆಬ್ಯೂ ಪಂದ್ಯದಲ್ಲೇ ಸ್ಪೋಟಕ ಬ್ಯಾಟಿಂಗ್​ ನಡೆಸಿದ ಪ್ರಿಯಾಂಶ್​​ 7 ಬೌಂಡರಿ, 2 ಸಿಕ್ಸರ್​ ಸಿಡಿಸಿದ್ರು. 23 ಎಸೆತಗಳಲ್ಲೇ 47 ರನ್​ ಚಚ್ಚಿದ್ರು.
ಪಂಜಾಬ್​ ಕ್ಯಾಪ್ಟನ್​ ಶ್ರೇಯಸ್ ಅಯ್ಯರ್​ ಮೊದಲ ಪಂದ್ಯದಲ್ಲೇ ಆರ್ಭಟಿಸಿದ್ರು.​​ ನಮೋ ಮೈದಾನದಲ್ಲಿ ಗುಜರಾತ್​​ ಬೌಲರ್​ಗಳನ್ನ ಅಕ್ಷರಶಃ ಅಟ್ಟಾಡಿಸಿದ್ರು. ಸಿಕ್ಸರ್​​​ ಮೇಲೆ ಸಿಕ್ಸರ್​ ಸಿಡಿಸಿ , ಬೌಂಡರಿ ಮೇಲೆ ಬೌಂಡರಿ ಬಾರಿಸಿ ಘರ್ಜಿಸಿದ್ರು. ಶ್ರೇಯಸ್​ ಅಯ್ಯರ್​ ಅಬ್ಬರದ ನಡುವೆ ಗುಜರಾತ್​ ಸ್ಪಿನ್ನರ್​​ ಸಾಯಿ ಕಿಶೋರ್​ ಮ್ಯಾಜಿಕ್​ ಮಾಡಿ 3 ವಿಕೆಟ್​ ಉರುಳಿಸಿದ್ರು. ಅಝಮತ್ತುಲ್ಲಾ ಝಝಾಯಿ ಕ್ಯಾಚ್​ ನೀಡಿ ನಿರ್ಗಮಿಸಿದ್ರೆ, ಗ್ಲೇನ್​ ಮ್ಯಾಕ್ಸ್​ವೆಲ್​ ಸೊನ್ನೆ ಸುತ್ತಿದ್ರು. ಮಾರ್ಕಸ್​ ಸ್ಟೋಯ್ನಿನಿಸ್​ ಆಟ 20 ರನ್​ಗಳಿಗೆ ಅಂತ್ಯವಾಯ್ತು.
ಇದನ್ನೂ ಓದಿ: ಗುಜರಾತ್ ಟೈಟನ್ಸ್​ಗೆ ವಿರೋಚಿತ ಸೋಲು; ಪಂಜಾಬ್ ಗೆಲುವಿಗೆ ಇಂಪ್ಯಾಕ್ಟ್ ಮಾಡಿದ ಕನ್ನಡಿಗ ವೈಶಾಕ್
/newsfirstlive-kannada/media/post_attachments/wp-content/uploads/2025/03/VYSHAK-VIJAYAKUMAR.jpg)
ವಿಕೆಟ್​ ಉರುಳಿದ್ರೂ ಶ್ರೇಯಸ್ ಅಬ್ಬರ ಮಾತ್ರ ಕಡಿಮೆಯಾಗಲಿಲ್ಲ. 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಶಾಂಕ್​ ಸಿಂಗ್​, ಶ್ರೇಯಸ್​ರಂಥೆ ಸ್ಪೋಟಕ ಇನ್ನಿಂಗ್ಸ್​ ಕಟ್ಟಿದ್ರು. 16 ಎಸೆತ ಎದುರಿಸಿದ ಶಶಾಂಕ್​ 6 ಬೌಂಡರಿ, 2 ಸಿಕ್ಸರ್​ ಚಚ್ಚಿ ಅಜೇಯ 44 ರನ್​ಗಳಿಸಿದ್ರು. 42 ಎಸೆತಗಳನ್ನ ಎದುರಿಸಿದ ಶ್ರೇಯಸ್​ ಅಯ್ಯರ್​ ಅಜೇಯ 97 ರನ್​​ಗಳಿಸಿದ್ರು. 20 ಓವರ್​ ಅಂತ್ಯಕ್ಕೆ 5 ವಿಕೆಟ್​ ಕಳೆದುಕೊಂಡ ಪಂಜಾಬ್​​ 243 ರನ್​ಗಳ ಬಿಗ್​ ಸ್ಕೋರ್​ ಕಲೆ ಹಾಕಿತು.
ಬಿಗ್​ ಟಾರ್ಗೆಟ್​​ ಬೆನ್ನತ್ತಿದ ಗುಜರಾತ್​ ಗುಡ್​ ಸ್ಟಾರ್ಟ್​ ಪಡೆದುಕೊಳ್ತು. ಕ್ಯಾಪ್ಟನ್ ಶುಭ್​ಮನ್​ ಗಿಲ್​ ಬಿಗ್​ ಸ್ಕೋರ್​ ಕಲೆ ಹಾಕುವಲ್ಲಿ ಫೇಲ್​ ಆದ್ರು. 14 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್​ ಸಹಿತ 33 ರನ್​ ಗಳಿಸಿ ಗಿಲ್​ ನಿರ್ಗಮಿಸಿದ್ರು. ಬಳಿಕ ಜೊತೆಯಾದ ಸಾಯಿ ಸುದರ್ಶನ್-ಜೋಸ್​ ಬಟ್ಲರ್​​ ಅಬ್ಬರ ಮುಂದುವರೆಸಿದ್ರು. ಪಂಜಾಬ್​ ಬೌಲರ್​ಗಳ ಮೇಲೆ ಸವಾರಿ ಮಾಡಿದ ಸಾಯಿ​ ಸುದರ್ಶನ್​ 180ರ ಸ್ಟ್ರೈಕ್​ರೇಟ್​ನಲ್ಲಿ ಆರ್ಭಟಿಸಿದ್ರು. 5 ಬೌಂಡರಿ, 6 ಸಿಕ್ಸರ್​ ಚಚ್ಚಿದ ಸುದರ್ಶನ್​ 41 ಎಸೆತಗಳಲ್ಲಿ 74 ರನ್​ಗಳಿಸಿದ್ರು.
ಇದನ್ನೂ ಓದಿ: RCB ಬಗ್ಗೆ ಭವಿಷ್ಯ ನುಡಿದ ದಿಗ್ಗಜ.. ಈ ಸ್ಟಾರ್​ನ ಖರೀದಿಸಿ ಒಳ್ಳೆ ಕೆಲಸ ಮಾಡಿದೆ ಎಂದು ಬಣ್ಣನೆ
74 ರನ್​ಗಳಿಸಿ ಸಾಯಿ ಸುದರ್ಶನ್​​ ನಿರ್ಗಮಿಸಿದ್ರೆ, ಜೋಸ್​ ಬಟ್ಲರ್ ಆರ್ಭಟ ಮುಂದುವರೆಯಿತು. ಇನ್ನು, ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಕಣಕ್ಕಿಳಿದ ಶಫ್ರೆನ್​​ ರುದರ್​​ಫೋರ್ಡ್​​​ ಬಿರುಸಿನ ಆಟವಾಡಿದ್ರು. 14ನೇ ಓವರ್​​ ಒಂದರಲ್ಲೇ 17 ರನ್​​ ಚಚ್ಚಿದ್ರು. ಗುಜರಾತ್​ನ ರನ್​ ಆರ್ಭಟಕ್ಕೆ ಕನ್ನಡಿಗ ವೈಶಾಕ್​ ವಿಜಯ್​ ಕುಮಾರ್​​ 15ನೇ ಓವರ್​ನಲ್ಲಿ ಬ್ರೇಕ್​ ಹಾಕಿದ್ರು. 15ನೇ ಓವರ್​ನಲ್ಲಿ ಜಸ್ಟ್​ 5 ರನ್​ ಬಿಟ್ಟು ಕೊಟ್ರು. ಎಕಾನಮಿಕಲ್​ ಸ್ಪೆಲ್​ ಹಾಕಿದ ವೈಶಾಕ್​ ಪಂಜಾಬ್​ ತಂಡವನ್ನ ಗೆಲುವಿನ ಟ್ರ್ಯಾಕ್​​ಗೆ ಮರಳಿಸಿದ್ರು.
ಅರ್ಧಶತಕ ಸಿಡಿಸಿದ ಬಟ್ಲರ್​ 54 ರನ್​ಗಳಿಸಿ ಔಟಾದ್ರೆ ರುದರ್​ ಫೋರ್ಡ್​​ ತಂಡವನ್ನ ಗೆಲುವಿನ ದಡ ಸೇರಿಸುವಲ್ಲಿ ಫೇಲ್​ ಆದ್ರು. 20 ಓವರ್​​ಗಳ ಅಂತ್ಯಕ್ಕೆ ಗುಜರಾತ್​​ 5 ವಿಕೆಟ್​​​ ಕಳೆದುಕೊಂಡು 232 ರನ್​ಗಳಿಸಿತು. 11 ರನ್​ಗಳ ಅಂತರದ ಜಯ ಸಾಧಿಸಿದ ಪಂಜಾಬ್​ ತಂಡ ಟೂರ್ನಿಯಲ್ಲಿ ಶುಭಾರಂಭ ಮಾಡಿತು.
ಇದನ್ನೂ ಓದಿ: Saugat-e-Modi: ದೇಶದ 32 ಲಕ್ಷ ಬಡ ಮುಸ್ಲಿಮರ ಕುಟುಂಬಗಳಿಗೆ ಮೋದಿ ರಂಜಾನ್ ಕಿಟ್..!
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us