/newsfirstlive-kannada/media/post_attachments/wp-content/uploads/2025/05/RCB_PBKS_NEW.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೊನೆಯ ಲೀಗ್ ಪಂದ್ಯದಿಂದ ಪ್ಲೇ ಆಫ್ ಪಂದ್ಯಗಳು ನಿರ್ಧಾವಾಗಿವೆ. ಆರ್ಸಿಬಿ ಹಾಗೂ ಎಲ್ಎಸ್ಜಿ ನಡುವಿನ ಕೊನೆ ಪಂದ್ಯದ ಫಲಿತಾಂಶ ಬಂದ ಬಳಿಕ ಗುಜರಾತ್ ಟೈಟನ್ಸ್, ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ಮುಂದಿನ ಪಂದ್ಯದ ಬಗ್ಗೆ ಮಾಹಿತಿ ಹೊರ ಬಿದ್ದಿದೆ. ಲಕ್ನೋ ವಿರುದ್ಧ ಜಯಭೇರಿ ಬಾರಿಸಿರುವ ಆರ್ಸಿಬಿ ಮುಂದಿನ ಪಂದ್ಯವನ್ನು ಪಂಜಾಬ್ ಕಿಂಗ್ಸ್ ವಿರುದ್ಧ ಹೋರಾಡಲಿದೆ.
ಲಕ್ನೋ ತಂಡದ ವಿರುದ್ಧ ಆರ್ಸಿಬಿ 228 ರನ್ಗಳನ್ನು ಚೇಸ್ ಮಾಡಿ ಗೆಲ್ಲುವ ಮೂಲಕ 19 ಪಾಯಿಂಟ್ಗಳಿಂದ ಟೇಬಲ್ನಲ್ಲಿ 2ನೇ ಸ್ಥಾನ ಪಡೆದಿದೆ. ಇದರಿಂದ ಮುಂದಿನ ಪಂದ್ಯವನ್ನು ಮೇ 29 ಅಂದರೆ ನಾಳೆಯೇ ಪಂಜಾಬ್ ಕಿಂಗ್ಸ್ ವಿರುದ್ಧ ಕದನಕ್ಕೆ ಇಳಿಯಲಿದೆ. ಕ್ವಾಲಿಫೈಯರ್- 1 ಪಂದ್ಯದಲ್ಲಿ ಆರ್ಸಿಬಿ ಹಾಗೂ ಪಂಜಾಬ್ ತಂಡ ಆಡಲಿವೆ. ಈ ಪಂದ್ಯದಲ್ಲಿ ಗೆಲ್ಲುವ ಟೀಮ್ ನೇರವಾಗಿ ಫೈನಲ್ಗೆ ಎಂಟ್ರಿ ಕೊಡಲಿದೆ.
ಮೇ 30 ರಂದು ಎಲಿಮಿನೇಟರ್ ಪಂದ್ಯ ನಡೆಯಲಿದೆ. ಈ ಎಲಿಮಿನೇಟರ್ನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟನ್ಸ್ ನಡುವೆ ಹೈವೋಲ್ಟೇಜ್ ಮ್ಯಾಚ್ ನಡೆಯುತ್ತದೆ. ಈ ಎರಡರಲ್ಲಿ ಗೆದ್ದಂತಹ ತಂಡ ಕ್ವಾಲಿಫೈಯರ್- 2ಗೆ ಎಂಟ್ರಿ ಆಗುತ್ತದೆ.
ಕ್ವಾಲಿಫೈಯರ್- 1ರಲ್ಲಿ ಆರ್ಸಿಬಿ ಹಾಗೂ ಪಂಜಾಬ್ ಈ ಎರಡರಲ್ಲಿ ಸೋತ ತಂಡ ಇನ್ನೊಂದು ಪಂದ್ಯವನ್ನು ಎಲಿಮಿನೇಟರ್ ಜೊತೆ ಆಡುವ ಅವಕಾಶ ಇರುತ್ತದೆ. ಮುಂಬೈ ಇಂಡಿಯನ್ಸ್ ಅಥವಾ ಗುಜರಾತ್ ವಿರುದ್ಧ ಕ್ವಾಲಿಫೈಯರ್- 2 ಪಂದ್ಯ ಇರುತ್ತದೆ. ಕ್ವಾಲಿಫೈಯರ್- 2 ಪಂದ್ಯ ಜೂನ್ 01 ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಫೈನಲ್ ಮ್ಯಾಚ್ ಕೂಡ ಇದೇ ಸ್ಟೇಡಿಯಂನಲ್ಲಿ ನಡೆಯುತ್ತದೆ.
ಇದನ್ನೂ ಓದಿ: RCB ಗೆಲುವಿಗೆ ಇವರನ್ನು ಮರೆಯುವಂತಿಲ್ಲ.. ಪಂದ್ಯ ಮುಗಿದ ಬಳಿಕ ಕನ್ನಡಿಗ ಮಯಾಂಕ್ ಏನಂದ್ರು..?
- ಕ್ವಾಲಿಫೈಯರ್- 1 ಪಂದ್ಯ ನಡೆಯುವ ಸ್ಥಳ- ಮುಲ್ಲನಪುರ, ನ್ಯೂ ಪಿಸಿಎ ಸ್ಟೇಡಿಯಂ, ನ್ಯೂ ಚಂಡೀಗಢ
- ಲಿಮಿನೇಟರ್ ಪಂದ್ಯ ನಡೆಯುವ ಸ್ಥಳ- ಮುಲ್ಲನಪುರ, ನ್ಯೂ ಪಿಸಿಎ ಸ್ಟೇಡಿಯಂ, ನ್ಯೂ ಚಂಡೀಗಢ
- ಕ್ವಾಲಿಫೈಯರ್- 2 ಪಂದ್ಯ ನಡೆಯುವ ಸ್ಥಳ- ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್
- ಫೈನಲ್ ಪಂದ್ಯ- ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ