ಶ್ರೇಯಸ್​ ಅಯ್ಯರ್​​ಗೆ ಮತ್ತೊಂದು ಗೆಲುವು, ಆದರೂ ಪ್ಲೇ-ಆಫ್ ಎಂಟ್ರಿ ಖಚಿತವಾಗಿಲ್ಲ..!

author-image
Ganesh
Updated On
ಅಂತಿಮ ಹಂತ ತಲುಪಿದ್ದರೂ ಪ್ಲೇ-ಆಫ್​ ಬಗ್ಗೆ ಕ್ಲಾರಿಟಿನೇ ಇಲ್ಲ.. 5 ತಂಡ, 4 ಸ್ಥಾನ..! RCB ಕತೆ..?
Advertisment
  • ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂಜಾಬ್​ಗೆ ಗೆಲುವು
  • 10 ರನ್​ಗಳಿಂದ ಗೆದ್ದು ಬೀಗಿದ ಅಯ್ಯರ್ ತಂಡ
  • ಪಾಯಿಂಟ್ಸ್ ಪಟ್ಟಿಯಲ್ಲಿ 2ನೇ ಸ್ಥಾನ, ಪ್ಲೇ-ಆಫ್..?

ಪ್ಲೇ-ಆಫ್​​ಗಾಗಿ ಐಪಿಎಲ್ ತಂಡಗಳ ಹೋರಾಟ ತೀವ್ರಗೊಂಡಿದೆ. ಜೈಪುರದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 10 ರನ್​ಗಳ ಜಯ ಸಾಧಿಸಿದೆ.

ಮೊದಲು ಬ್ಯಾಟ್ ಮಾಡಿದ್ದ ಪಂಜಾಬ್ ಕಿಂಗ್ಸ್​ ಐದು ವಿಕೆಟ್ ಕಳೆದುಕೊಂಡು 219 ರನ್ ಬಾರಿಸಿತ್ತು. 220 ರನ್​ಗಳ ಗುರಿಯನ್ನ ಇಟ್ಕೊಂಡು ಬ್ಯಾಟಿಂಗ್​ಗೆ ಬಂದ ರಾಜಸ್ಥಾನ್ ರಾಯಲ್ ಆರಂಭದಲ್ಲಿ ಗೆಲ್ಲುವ ಉತ್ಸಾಹ ತೋರಿಸಿತು.

ಇದನ್ನೂ ಓದಿ: ಯೂಟ್ಯೂಬರ್ ಆಗುವ ಮೊದಲು ಜ್ಯೋತಿ ಮಲ್ಹೋತ್ರ ಹೇಗಿದ್ದಳು..? ಈಕೆ ಭಲೇ ಕಿಡಿಗೇಡಿ ಲೇಡಿ..!

ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ ಅದ್ಭುತ ಬ್ಯಾಟಿಂಗ್ ಆಡಿದರು. ಜೈಸ್ವಾಲ್ 25 ಬಾಲ್​ನಲ್ಲಿ 50 ರನ್​ಗಳಿಸಿದ್ರೆ, ವೈಭವ್ 15 ಬಾಲ್​ನಲ್ಲಿ 40 ರನ್​ಗಳಿಸಿ ಔಟ್ ಆದರು. ನಂತರ ಬಂದ ಬ್ಯಾಟ್ಸ್​​ಮನ್​ಗಳು ರನ್​ಗಳಿಸುವಲ್ಲಿ ವಿಫಲರಾದರು. ಅಂತಿಮವಾಗಿ ರಾಜಸ್ಥಾನ್ ರಾಯಲ್ಸ್, 7 ವಿಕೆಟ್ ಕಳೆದುಕೊಂಡು 209 ರನ್​ಗಳಿಸಿ ಸೋಲಿಗೆ ಶರಣಾಯ್ತು.

ನಂಬರ್ 2 ಸ್ಥಾನ

ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆದ್ದ ಪಂಜಾಬ್ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದೆ. ಒಟ್ಟು 12 ಪಂದ್ಯಗಳನ್ನು ಆಡಿರುವ ಪಂಜಾಬ್ 8 ಪಂದ್ಯಗಳನ್ನು ಗೆದ್ದು ನೆಟ್​ ರನ್​​ ರೇಟ್ ಆಧಾರದ ಮೇಲೆ 17 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೇರಿದೆ. ಇನ್ನು ಪಂಜಾಬ್ ತಂಡಕ್ಕೆ ಒಟ್ಟು 2 ಪಂದ್ಯಗಳಿದ್ದು, ಒಂದು ಪಂದ್ಯ ಗೆದ್ದರೆ ಪ್ಲೇ-ಆಫ್ ಹಾದಿ ಖಚಿತವಾಗಲಿದೆ.

ಇದನ್ನೂ ಓದಿ: ಆ ತಾಯಿ ಮಕ್ಕಳನ್ನು ಬಿಗಿಯಾಗಿ ಹಿಡಿದುಕೊಂಡಿದ್ದಳು.. ಸ್ಥಳೀಯರ ಕಾಡಿದ 17 ಜನರ ಜೀವ ತೆಗೆದ ದೃಶ್ಯ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment