18 ತಿಂಗಳಲ್ಲಿ 11 ಜೀವ ತೆಗೆದ ನೀಚ; ಕೆಲಸ ಮುಗಿಸಿದ ನಂತರ ಬೆನ್ನ ಮೇಲೆ ಏನು ಬರೆದು ಹೋಗುತ್ತಿದ್ದ?

author-image
Gopal Kulkarni
Updated On
18 ತಿಂಗಳಲ್ಲಿ 11 ಜೀವ ತೆಗೆದ ನೀಚ; ಕೆಲಸ ಮುಗಿಸಿದ ನಂತರ ಬೆನ್ನ ಮೇಲೆ ಏನು ಬರೆದು ಹೋಗುತ್ತಿದ್ದ?
Advertisment
  • ಲಿಫ್ಟ್​ ಕೊಟ್ಟವರ ಜೀವ ತೆಗೆದು ದೋಚುತ್ತಿದ್ದ ನೀಚ ಕೊನೆಗೂ ಅರೆಸ್ಟ್
  • ಜೀವ ಕಳೆದ ಬಳಿಕೆ ಶವದ ಬೆನ್ನಮೇಲೆ ಈತ ಬರೆಯುತ್ತಿದ್ದದ್ದು ಏನು ಗೊತ್ತಾ?
  • ಕೊಲೆ ಕೇಸ್​ನಲ್ಲಿ ಬಂಧನವಾದವ ಮಾಡಿದ ಕೃತ್ಯ ಕೇಳಿ ಪೊಲೀಸರೇ ಶಾಕ್​

ಕಳೆದ 18 ತಿಂಗಳಲ್ಲಿ 11 ಜೀವಗಳನ್ನು ತೆಗೆದ ಖತರ್ನಾಕ್ ಹಂತಕನ್ನು ಪಂಜಾಬ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತನನ್ನು ರಾಮ್ ಸ್ವರೂಪ್ ಅಲಿಯಾಸ್​ ಸೂಧಿ ಎಂದು ಗುರುತಿಸಲಾಗಿದೆ. ಈತನ ಹೊಶಿಯಾರ್​ಪುರ್​ನ ಚೌರಾ ಗ್ರಾಮದವನು ಎಂದು ತಿಳಿದು ಬಂದಿದೆ. 31 ವರ್ಷದ ರಾಮ್ ಸ್ವರೂಪ್​ ಎಂಬ ಈ ಸರಣಿ ಹಂತಕ ಒಟ್ಟು 11 ಕೊಲೆಗಳನ್ನು ಮಾಡಿದ್ದಾನೆ.

ಈ ಕೊಲೆಗಾರನ ಪ್ರಮುಖ ಗುರಿಯೇ ಪುರುಷರು ಆಗಿರುತ್ತಿದ್ದರು. ಲಿಫ್ಟ್ ಕೇಳುವ ಮೂಲಕ ಇಲ್ಲವೇ ಲೈಂಗಿಕವಾಗಿ ಅವರನ್ನು ಬಳಸುವಾಗ ಈತ ಅವರನ್ನು ಕುತ್ತು ಹಿಸುಕಿ ಇಲ್ಲವೇ ಇಟ್ಟಿಗೆಯಿಂದ ಹೊಡೆದು ಜೀವ ತೆಗೆಯುತ್ತಿದ್ದ ಎಂದು ಪೊಲೀಸರ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಕೊಲೆಯ ಹಿಂದೆ ಅಡಗಿರುವ ಅಸಲಿ ಕಥೆ ಅಂದ್ರೆ ಕೊಲೆಯಾದವರು ದುಡ್ಡು ಕೊಡಲು ಹಿಂದೆ ಮುಂದೆ ನೋಡಿದಾಗ ಕೊಲೆ ಮಾಡುತ್ತಿದ್ದ ಎಂಬುದು ಬಯಲಿಗೆ ಬಂದಿದೆ. ಕೊಲೆಯ ನಂತರ ಅವರ ಬಳಿ ಇದ್ದ ದುಡ್ಡು ಹಾಗೂ ಆಭರಣಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಎಂದು ತಿಳಿದು ಬಂದಿದೆ.
ಇನ್ನು ಒಂದು ಹತ್ಯೆಯಲ್ಲಂತೂ ಈ ನೀಚ ಒಬ್ಬನನ್ನು ಕೊಂದು ಆತನ ಬೆನ್ನ ಮೇಲೆ ದೋಖೆಭಾಜ್ ಎಂದು ಬರೆದಿದ್ದನಂತೆ. ದೋಖೆಬಾಜ್ ಅಂದ್ರೆ ಮೋಸಗಾರ ಅಂತ ಅರ್ಥ. ಹೀಗೆ ಕೊಲೆಯಾದ ವ್ಯಕ್ತಿಯನ್ನು ಭಾರತೀಯ ಸೇನೆಯ ಮಾಜಿ ಸೈನಿಕ ಸೆಕ್ಯೂರಿಟಿಗಾರ್ಡ್​ ಆಗಿ ಕೆಲಸ ಮಾಡುತ್ತಿದ್ದ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಆಯತಪ್ಪಿ ಕಂದಕಕ್ಕೆ ಬಿದ್ದ ಸೇನೆಯ ಟ್ರಕ್​; ಚಿಕ್ಕೋಡಿ ಮೂಲದ ಸೈನಿಕ ಧರ್ಮರಾಜ್ ಹುತಾತ್ಮ!

ಇನ್ನು ಉಳಿದ ಪ್ರಕರಣಗಳಲ್ಲಿ ಬಹುತೇಕ ಈತ ಒಂದು ಚಿಕ್ಕ ಬಟ್ಟೆ ತುಂಡಿನಿಂದ ಕತ್ತು ಬಿಗಿದು ಸಾಯಿಸುತ್ತಿದ್ದ ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ. ಉಳಿದ ಕೆಲವು ಕೇಸ್​ಗಳಲ್ಲಿ ಈತ ಇಟ್ಟಿಗೆಯಿಂದ ತಲೆಗೆ ಹೊಡೆದು ಸಾಯಿಸುತ್ತಿದ್ದ ಎಂದು ಎಸ್​ಪಿ ನವನೀತ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ನಟ ಅಲ್ಲು ಅರ್ಜುನ್‌ಗೆ ಮತ್ತೊಂದು ಸಂಕಷ್ಟ; ಪೊಲೀಸರಿಂದ 10 ಖಡಕ್ ಪ್ರಶ್ನೆಗಳು; ಏನವು?

ಇನ್ನು ಈ ಆರೋಪಿಗೆ ಮದುವೆಯಾಗಿದ್ದು ಮೂರು ಜನ ಮಕ್ಕಳು ಇದ್ದರಂತೆ. ಈತನ ಸಲಿಂಗಕಾಮದ ಅತಿರೇಕವನ್ನು ಕಂಡು ಎರಡು ವರ್ಷದ ಹಿಂದೆಯೇ ಈತನನ್ನು ತೊರೆದು ಹೋಗಿದ್ದಾರಂತೆ. ಹೀಗಾಗಿಯೇ ಈತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು. ಹೆಚ್​​ಐವಿ ಏನಾದರೂ ಈತನಿಗೆ ಅಂಟಿದೆಯಾಎಂಬ ವಿಷಯವನ್ನು ತಿಳಿದುಕೊಳ್ಳಲು ಪೊಲೀಸರು ಮುಂದಾಗಿದ್ದಾರೆ.

ರಾಮ್ ಸ್ವರೂಪನನ್ನು ಕರ್ತಾಪುರ್ ಸಾಹೀಬ್​ನಲ್ಲಿ ನಡೆದ ಒಂದು ಹತ್ಯೆಯ ಪ್ರಕರಣದಲ್ಲಿ ಬಂಧಿಸಲಾಗಿತ್ತು. ವಿಚಾರಣೆ ವೇಳೆ ಈತ ಉಳಿದ 10ಕೊಲೆಗಳ ವಿಚಾರವನ್ನು ಬಾಯಿಬಿಟ್ಟಿದ್ದಾನೆ. ರುಪ್ನಾನಗರ್, ಫತೇಹ್​ಗರ್ ಸಾಹಿಬ್ ಹಗೂ ಹೊಶಿಯಾರ್​ಪುರನಲ್ಲಿ ಈತ ಕಳೆದ 18 ತಿಂಗಳಲ್ಲಿ 11 ಕೊಲೆಗಳನ್ನು ಮಾಡಿದ್ದಾನೆ. ಕರ್ತಾಪುರ ಸಾಹೀಬ್​ನಲ್ಲಿ ಈತ ಹೆದ್ದಾರಿ ಟೊಲ್​ಫ್ಲಾಜಾ ಬಳಿ ಟೀ ಮಾರುತ್ತಿದ್ದ ವ್ಯಕ್ತಿಯನ್ನು ಹತ್ಯೆ ಮಾಡಿದ್ದಾನೆ. ಈತ ಒಪ್ಪಿಕೊಂಡ ಕೊಲೆಗಳ ಪೈಕಿ ಐದು ಕೊಲೆಗಳು ನಡೆದಿದ್ದು ಕನ್ಫರ್ಮ್​ ಆಗಿದ್ದು ಉಳಿದ ಕೊಲೆಗಳು ಸತ್ಯಾಸತ್ಯತೆಯನ್ನು ತಿಳಿಯಲು ಪೊಲೀಸರು ತನಿಖೆಯನ್ನು ಪೊಲೀಸರು ಜಾರಿಯಿಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment