ಬೇಲಿಯೇ ಎದ್ದು ಹೋಲು ಮೇಯುತ್ತಿದೆ.. ಡ್ರಗ್ಸ್​ ಜೊತೆ ಸಿಕ್ಕಿಬಿದ್ದ ಮಹಿಳಾ ಪೊಲೀಸ್​..!

author-image
Gopal Kulkarni
Updated On
ಬೇಲಿಯೇ ಎದ್ದು ಹೋಲು ಮೇಯುತ್ತಿದೆ.. ಡ್ರಗ್ಸ್​ ಜೊತೆ ಸಿಕ್ಕಿಬಿದ್ದ ಮಹಿಳಾ ಪೊಲೀಸ್​..!
Advertisment
  • ಮಹಿಳಾ ಪೊಲೀಸ್ ಅಧಿಕಾರಿಯ ಬಳಿಯೇ ಸಿಕ್ಕಿಬಿತ್ತು ಡ್ರಗ್ಸ್ ಪ್ಯಾಕೆಟ್​
  • ಥಾರ್​ ಕಾರಿನಲ್ಲಿ ಪೋಸ್​ ಕೊಟ್ಟು ವಿಡಿಯೋ ಮಾಡುತ್ತಿದ್ದವಳು ಅಂದರ್​
  • ಸುಳಿವು ದೊರಕಿ ಪೊಲೀಸ್ ಅಧಿಕಾರಿ ಕಾರು ಪರಿಶೀಲಿಸಿದಾಗ ಡ್ರಗ್ಸ್ ಪತ್ತೆ

ಪಂಜಾಬ್​ನಲ್ಲಿ ಡ್ರಗ್ಸ್ ಹಾವಳಿ ಯಾವ ಮಟ್ಟಕ್ಕಿದೆ ಎಂಬುಕ್ಕೆ ಈ ಹಿಂದೆ ಅನೇಕ ನಿದರ್ಶನಗಳು ನಮಗೆ ಕಂಡು ಬಂದಿವೆ. ಇಲ್ಲಿನ ಡ್ರಗ್ಸ್ ಹಾವಳಿಯನ್ನು ತಡೆಯಲು ಯಾವುದೇ ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ. ಈ ಡ್ರಗ್ಸ್​ ದಂಧೆ ರಾಜ್ಯದಲ್ಲಿ ಯಾವ ಮಟ್ಟಿಗೆ ವ್ಯಾಪಿಸಿಕೊಂಡಿದೆ ಎಂಬುದನ್ನು ಸಮಗ್ರವಾಗಿ ಹೇಳಲು ಉಡ್ತಾ ಪಂಜಾಬ್ ಎಂಬ ಹೆಸರಿನ ಸಿನಿಮಾವೇ ಬಂತು. ಇಷ್ಟಾದರೂ ಕೂಡ ಪಂಜಾಬ್​ನಲ್ಲಿ ಡ್ರಗ್ಸ್​ ಹಾವಳಿ ನಿಂತಿದೆಯಾ ಎಂದು ನೋಡಿದರೆ, ಅದ್ಯಾವ ಲಕ್ಷಣಗಳು ಕೂಡ ಕಾಣಿಸುತ್ತಿಲ್ಲ.

ಪಂಜಾಬ್​ನಲ್ಲಿ ಬೇಲಿಯೇ ಎದ್ದು ಹೊಲ ಮೇಯುತ್ತಿದೆ. ಅಂದ್ರೆ ಡ್ರಗ್ಸ್ ಹಾವಳಿಗೆ ಯಾವ ಇಲಾಖೆ ಕಡಿವಾಣ ಹಾಕಲು ಮುಂದಾಬೇಕಿತ್ತೊ? ಅದೇ ಇಲಾಖೆಯ ಮಹಿಳಾ ಅಧಿಕಾರಿ ಬಳಿ ಸುಮಾರು 17.71 ಗ್ರಾಂನಷ್ಟು ಹೆರಾಯಿನ್  ಡ್ರಗ್ಸ್ ಪತ್ತೆಯಾಗಿದೆ. ಪೊಲೀಸ್ ಇಲಾಖೆಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಪೊಲೀಸ್ ಅಧಿಕಾರಿಯ ಬಳಿ ಇದ್ದ ಡ್ರಗ್ಸ್ ವಶಪಡಿಸಿಕೊಂಡು, ಮಹಿಳಾ ಪೇದೆಯನ್ನು ಡಿಸ್ಮಿಸ್ ಮಾಡಲಾಗಿದೆ ಎಂದು ಬಾತಿಂದಾ ಪೊಲೀಸರು ಹೇಳಿದ್ದಾರೆ.

ಈಗಾಗಲೇ ಮಹಿಳಾ ಅಧಿಕಾರಿ ಅಮನ್​ದೀಪ್ ಕೌರ್​ರನ್ನು ಪೊಲೀಸರು ಬಂಧಿಸಿದ್ದಾರೆ.ಈ ಮಹಿಳಾ ಅಧಿಕಾರಿ ಪಂಜಾಬ್​ನ ಆ್ಯಂಟಿ ನಾಕ್ರೊಟಿಕ್ಸ್​ ಟಾಸ್ಕ್​ ಫೋರ್ಸ್​ನ ಸಿಬ್ಬಂದಿಯಾಗಿದ್ದರು ಎಂದು ತಿಳಿದು ಬಂದಿದೆ. ಬಾದಲ್ ಫ್ಲೈ ಓವರ್ ಬಳಿ ಅವರ ಎಸ್​​ಯು ಮಹಿಂದ್ರಾ ಥಾರ್​ನಲ್ಲಿ ಸುಮಾರು 17.7 ಗ್ರಾಂನಷ್ಟು ಮಾದಕದ್ರವ್ಯವನ್ನು ವಶಕ್ಕೆ ಪಡೆಯಲಾಗಿದೆ ಎಂದು ಬತಿಂದಾದ ಡಿಎಸ್​ಪಿ ಹರ್ಬನ್ ಸಿಂಗ್ ಹೇಳಿದ್ದಾರೆ.


">April 3, 2025

ಮಹಿಳಾ ಪೊಲೀಸ್ ಬಳಿ ಮಾದಕದ್ರವ್ಯ ಇರುವ ಸುಳಿವು ಪೊಲೀಸ್ ಇಲಾಖೆಗೆ ದೊರೆತಿದೆ ಈ ವೇಳೆ ತಪಾಸಣೆಗೆ ಇಳಿದ ಪಂಜಾಬ್​ ಪೊಲೀಸರಿಗೆ ಮಹಿಳಾ ಪೊಲೀಸ್ ಪೇದೆಯ ವಾಹನದ ಗೀಯರ್ ಶಿಫ್ಟ್​ನಲ್ಲಿ ಬಾಕ್ಸ್​ ಒಂದು ಪತ್ತೆಯಾಗಿದೆ ಇದನ್ನು ತೆಗೆದು ನೋಡಿದಾಗ ಅದರಲ್ಲಿ ಹೆರಾಯಿನ್​​ ಇದ್ದಿದ್ದು ಪತ್ತೆಯಾಗಿದೆ.
ಐಜಿಪಿ ಸುಖಚೈನ್ ಸಿಂಗ್ ಈ ಬಗ್ಗೆ ಮಾತನಾಡಿದ್ದ ಈಗಾಗಲೇ ಮಹಿಳಾ ಅಧಿಕಾರಿಯನ್ನು ಆಕೆಯ ಸ್ಥಾನದಿಂದ ವಜಾಗೊಳಿಸಲಾಗಿದ್ದು, ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಇನ್ನು ಪಂಜಾಬ್​​ನ ಮುಖ್ಯಮಂತ್ರಿ ಭಗವಂತ್ ಮಾನ್, ಈ ರೀತಿಯಾಗಿ ಅಕ್ರಮ ವ್ಯವಹಾರಗಳ್ಲಿ ತೊಡಗುವ ಯಾವುದೇ ಅಧಿಕಾರಿಗಳಿರಲಿ ಅವರನ್ನು ಸುಮ್ಮನೆ ಬಿಡುವುದಿಲ್ಲ. ಕೂಡಲೇ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.


">April 3, 2025

ಇನ್ನು ಪೊಲೀಸ್ ಅಧಿಕಾರಿ ಸ್ಥಾನದಿಂದ ವಜಾಗೊಂಡಿರುವ ಕೌರ್, ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಆ್ಯಕ್ಟಿವ್ ಇದ್ದರು. ತಮ್ಮ ಎಸ್​ಯುವಿ ಥಾರ್ ಜೊತೆಗೆ ತೆಗೆದುಕೊಂಡಿರುವ ಫೋಟೋ ಮತ್ತು ವಿಡಿಯೋಗಳನ್ನು ಆಗಾಗ ಪೋಸ್ಟ್ ಮಾಡುತ್ತಿದ್ದರು. ಇನ್ನು ಒಂದು ವಿಚಾರವೆಂದರೆ ಆ ಕಾರಿನ ಮೇಲೆ ಪಂಜಾಬ್ ಪೊಲೀಸ್ ಎಂಬ ಸ್ಟಿಕರ್ ಕೂಡ ಇರುತ್ತಿತ್ತು. ಸದ್ಯ ಕೌರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಗಿದೆ. ಯಾರೊಂದಿಗೆ ಅವರು ಡ್ರಗ್ಸ್​ ದಂಧೆಯಲ್ಲಿ ತೊಡಗಿಕೊಂಡಿದ್ದರು. ಅವರ ಆಸ್ತಿ ಎಷ್ಟಿದೆ, ಸಂಪತ್ತಿನ ಮೂಲ ಯಾವುದು ಎಂಬುದನ್ನೆಲ್ಲಾ ಹುಡುಕುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment