/newsfirstlive-kannada/media/post_attachments/wp-content/uploads/2025/02/SSLC_EXAM_3.jpg)
ಚಂಡೀಗಡ; ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಸಿ) ಶಾಲೆಗಳು ಸೇರಿದಂತೆ ಇತರೆ ಎಲ್ಲಾ ಖಾಸಗಿ ಶಾಲೆಗಳು ಪಂಜಾಬಿ ಭಾಷೆಯನ್ನು ಕಡ್ಡಾಯ ವಿಷಯವನ್ನಾಗಿ ಪರಿಗಣಿಸಬೇಕು ಎಂದು ಪಂಜಾಬ್ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಒಂದು ವೇಳೆ ಶಾಲೆಗಳು ಇದನ್ನು ಪಾಲನೆ ಮಾಡದಿದ್ದರೇ 2008ರ ಪಂಜಾಬಿ ಹಾಗೂ ಇತರ ಭಾಷೆಗಳ ಕಾಯ್ದೆ ಅಡಿ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
10ನೇ ತರಗತಿ ವಿದ್ಯಾರ್ಥಿಗಳು ಪಂಜಾಬಿ ಭಾಷೆಯನ್ನು ಮುಖ್ಯ ವಿಷಯವನ್ನಾಗಿ ಅಧ್ಯಯನ ಮಾಡದೇ, ಉಳಿದ ವಿಷಯಗಳಲ್ಲಿ ಪಾಸ್ ಆಗಿದ್ದರೇ ಅದನ್ನು ಪರಿಗಣಿಸುವುದಿಲ್ಲ. ಪಂಜಾಬಿಯನ್ನು ಪ್ರಾಥಮಿಕ ವಿಷಯವಾಗಿ ಅಧ್ಯಯನ ಮಾಡಿದ್ದರೇ ಮಾತ್ರ ವಿದ್ಯಾರ್ಥಿಗಳನ್ನು ಉತ್ತೀರ್ಣ ಎಂದು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಹೀಗಾಗಿ ಎಲ್ಲಾ ಶಾಲೆಗಳು ಪಂಜಾಬಿಯನ್ನು ಪ್ರಾಥಮಿಕ ವಿಷಯವಾಗಿ ವಿದ್ಯಾರ್ಥಿಗಳಿಗೆ ಕಲಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ:1,161 ಕಾನ್‌ಸ್ಟೆಬಲ್ ಉದ್ಯೋಗಗಳಿಗೆ ಅರ್ಜಿ ಆಹ್ವಾನ.. SSLC ಪಾಸ್ ಆಗಿದ್ರೆ, ಅಪ್ಲೇ ಮಾಡಿ
ವರ್ಷಕ್ಕೆ 2 ಬಾರಿ ಪರೀಕ್ಷೆ ನಡೆಸುವಲ್ಲಿ ಸಿಬಿಎಸ್ಸಿ ಇಲಾಖೆಯು ಪಂಜಾಬಿಯನ್ನು ವಿಷಯಗಳ ಪಟ್ಟಿಯಿಂದ ಹೊರಗಿಟ್ಟಿದೆ. ಅಲ್ಲದೇ ಸಿಬಿಎಸ್ಸಿ ಕರಡು ಮಾನದಂಡಗಳಲ್ಲೂ ಮಾತೃಭಾಷೆಯನ್ನು ನಿರಾಕರಣೆ ಮಾಡಲಾಗಿದೆ. ಇದೇ ಕಾರಣಕ್ಕೆ ಪಂಜಾಬ್ ಶಿಕ್ಷಣ ಸಚಿವ ಹರ್ಜೋತ್ ಸಿಂಗ್ ಬೈನ್ಸ್ ಅವರು ಇದನ್ನು ಬಲವಾಗಿ ವಿರೋಧಿಸಿದ್ದಾರೆ.
ಮಾತೃ ಭಾಷೆಯನ್ನು ವಿಷಯಗಳ ಪಟ್ಟಿಯಿಂದ ತೆಗೆದು ಹಾಕುವ ಯಾವುದೇ ಆಲೋಚನೆ ಇದ್ದರೇ ಸಹಿಸಲ್ಲ. ತಮ್ಮ ಸರ್ಕಾರ ಇಂತಹ ಕ್ರಮ ಸಹಿಸುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಪಂಜಾಬಿ ಮತ್ತು ಇತರ ಭಾಷೆಗಳ ಶಿಕ್ಷಣ (ತಿದ್ದುಪಡಿ) ಮಸೂದೆ, 2021ರ ಪ್ರಕಾರ 1ನೇ ತರಗತಿಯಿಂದ 10ನೇ ತರಗತಿವರೆಗೆ ಪಂಜಾಬಿಯನ್ನು ಕಡ್ಡಾಯ ವಿಷಯವಾಗಿ ಪರಿಗಣಿಸಬೇಕು ಎಂದು ಇತ್ತೀಚೆಗೆ ಸದನದಲ್ಲಿ ಬಿಲ್ ಪಾಸ್ ಮಾಡಲಾಗಿದೆ. ಸರ್ಕಾರಿ ಕಚೇರಿಗಳಲ್ಲೂ ಪಂಜಾಬಿಯನ್ನು ಕಡ್ಡಾಯಗೊಳಿಸಲಾಗಿದೆ. ಅದರಂತೆ ಮಕ್ಕಳಿಗೆ ಮಾತೃಭಾಷೆ ಕಡ್ಡಾಯವೆಂದು ಹೇಳಿದ್ದಾರೆ.
ಒಂದು ವರ್ಷದಲ್ಲಿ 2 ಬಾರಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ಸಿಬಿಎಸ್‌ಇ ಕರಡು ಮಾನದಂಡಕ್ಕೆ ಅನುಮೋದನೆ ನೀಡಿದೆ. ಇವುಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಈ ಕುರಿತು ಸಲಹೆಗಳಿದ್ದರೇ ತಿಳಿಸಿ ಎಂದು ಪೋಷಕರಿಗೆ ಮಾರ್ಚ್ 9ರ ವರೆಗೆ ಸಮಯ ನೀಡಿದೆ. ಇದರ ಬೆನ್ನಲ್ಲೇ ಪಂಜಾಬ್ ಸರರ್ಕಾರ ಅಧಿಸೂಚನೆಯನ್ನು ಪ್ರಕಟ ಮಾಡಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ