/newsfirstlive-kannada/media/post_attachments/wp-content/uploads/2025/04/Bhuvana-Murali.jpg)
ಹೆಣ್ಣು ಮಾಡದೇ ಇರೋ ಕೆಲಸ ಯಾವುದಾದರೂ ಇದ್ಯಾ ಹೇಳಿ? ಈಗಂತೂ ಪುರುಷರಿಗಂತ ಹೆಚ್ಚು ಮಹಿಳೆಯರು ಭಿನ್ನ ವಿಭಿನ್ನ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಪುರುಷರಿಗೆ ಸಮನಾಗಿ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಅದರಲ್ಲೂ ಸೀರಿಯಲ್ ನಟ ನಟಿಯರು ಕೂಡ ಬರೀ ನಟನೆ ಮಾತ್ರವಲ್ಲದೇ ಬೇರೆ ಬೇರೆ ಕೆಲಸಕ್ಕೆ ಕೈ ಹಾಕುತ್ತಿದ್ದಾರೆ. ಹೊಸ ಸ್ಟುಡಿಯೋ ಸಲೂನ್, ಮೇಕಪ್ ಹೀಗೆ ಸಾಲು ಸಾಲು ಕೆಲಸದಲ್ಲಿ ಭಾಗಿಯಾಗುತ್ತಿದ್ದಾರೆ.
ಇದನ್ನೂ ಓದಿ:ಯಶ್, ರಾಧಿಕಾ ಪಂಡಿತ್ ನಟಿಸಿದ್ದ ಸೂಪರ್ ಹಿಟ್ ಧಾರಾವಾಹಿ ಮತ್ತೆ ತೆರೆಗೆ..! ಯಾವುದು ಆ ಹೊಸ ಕಥೆ?
ಅದರಂತೆ ಕನ್ನಡ ಕಿರುತೆರೆ ನಟಿ ನಟನೆಯ ಜೊತೆ ಜೊತೆಗೆ ಕೌಶಲ್ಯವೊಂದನ್ನು ಬೆಳೆಸಿಕೊಂಡಿದ್ದಾರೆ. ಪುಣ್ಯವತಿ ಸೀರಿಯಲ್ ಮೂಲಕ ಸಖತ್ ಫೇಮಸ್ ಆಗಿದ್ದರು ಪೂರ್ವಿ. ಇದೇ ಪೂರ್ವಿ ಪಾತ್ರದಲ್ಲಿ ಅಭಿನಯಿಸಿದ್ದ ಭುವನಾ ಮುರಳಿ ತಮಗಾಗಿ ಡ್ರೆಸ್ ಸ್ಟಿಚ್ ಮಾಡಿಕೊಂಡಿದ್ದಾರೆ.
ಹೌದು, ಪುಣ್ಯವತಿ ಸೀರಿಯಲ್ನಲ್ಲಿ ಪದ್ಮನಿ ತಂಗಿ ಪಾತ್ರದಲ್ಲಿ ನಟಿಸುತ್ತಿದ್ದರು ಭುವನಾ. ಪುಣ್ಯವತಿ ಪಾತ್ರವಲ್ಲದೇ ದೊರೆಸಾನಿ ಧಾರಾವಾಹಿಯಲ್ಲಿ ಅಭಿನಯಿಸಿದ್ದರು. ನಟಿ ಭುವನಾ ಅವರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಌಕ್ಟೀವ್ ಆಗಿದ್ದಾರೆ. ಹೊಸ ಹೊಸ ಫೋಟೋಶೂಟ್, ರೀಲ್ಸ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಇದರ ಮಧ್ಯೆ ನಟಿ ಭುವನಾ ಇನ್ಸ್ಟಾ ಖಾತೆಯಲ್ಲಿ ಹೊಸ ರೀಲ್ಸ್ ಶೇರ್ ಮಾಡಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ನಟಿ ಭುವನಾ ತಮ್ಮ ತಾಯಿಯ ಸೀರೆಯಿಂದ ತಮಗೆ ತಾವೇ ಚೂಡಿದಾರ್ ಕಟಿಂಗ್ ಮಾಡಿಕೊಂಡು ಹೋಲಿದುಕೊಂಡಿದ್ದಾರೆ. ಮತ್ತೆ ಇನ್ನೊಂದು ಸೀರೆಯಿಂದ ಮಾಡ್ರನ್ ಡ್ರೆಸ್ ಕೂಡ ಮಾಡಿಕೊಂಡಿದ್ದಾರೆ. ಇದೇ ವಿಡಿಯೋ ನೋಡಿದವರು ನಟಿಯ ಕೌಶಲ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
View this post on Instagram
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ