ರಹಸ್ಯಗಳ ಹೊತ್ತು ನಿಂತ ಪೂರಿ ಜಗನ್ನಾಥ..! ಲೆಕ್ಕವೇ ಮಾಡಲಾಗದಷ್ಟು ರತ್ನ ಭಂಡಾರ ನೀಡಿದ್ದು ಯಾರು ಗೊತ್ತೇ..?

author-image
Ganesh
Updated On
4 ದಶಕಗಳ ಬಳಿಕ ತೆರೆದ ಪುರಿ ಜಗನ್ನಾಥನ ಭಂಡಾರ.. ಆ 3 ರಹಸ್ಯ ಕೋಣೆಗಳಲ್ಲಿ ಏನಿದೆ?
Advertisment
  • ಅಂದು ನಡೆದಿತ್ತು 72 ದಿನಗಳ ಕಾಲ ಲೆಕ್ಕಾಚಾರ..!
  • ಯಾವತ್ತು ತೆರೆ ಬೀಳುತ್ತೆ ಪೂರಿ ಜಗನ್ನಾಥನ ಆಸ್ತಿ ಮೌಲ್ಯ?
  • ಪೂರಿ ಜಗನ್ನಾಥನ ದೇಗುಲ ನಿರ್ಮಿಸಿದ್ದು ಯಾರು?

ಓಡಿಸ್ಸಾದ ಪೂರಿ ಜಗನ್ನಾಥ ದೇವಾಲಯದ ರತ್ನ ಭಂಡಾರದ ಕೋಣೆಯ ಬಾಗಿಲು ತೆರೆಯುವ ಪ್ರಕ್ರಿಯೆಗಳು ಶುರುವಾಗಿವೆ. ಬರೋಬ್ಬರಿ 46 ವರ್ಷಗಳ ನಂತರ ದೇವಾಲಯದ ಆಡಳಿತ ಸಮಿತಿ ರತ್ನ ಖಚಿತ ಭಂಡಾರದ ಕೋಣೆಯ ಬಾಗಿಲುಗಳನ್ನು ತೆಗೆಯಲು ಮುಂದಾಗಿದ್ದು, ತೀವ್ರ ಕುತೂಹಲ ಮೂಡಿಸಿದೆ!!

ಆ ಮೂಲಕ ಹಲವು ವರ್ಷಗಳಿಂದ ಭಕ್ತರಲ್ಲಿ ಹಾಗೂ ದೇಗುಲದ ನಿಗೂಢ ಕೋಣೆಯಲ್ಲಿ ಅಡಗಿರುವ ಕುತೂಹಲಗಳಿಗೆ ತೆರೆ ಬೀಳಲಿವೆ. ಕೇರಳದ ಅನಂತ ಪದ್ಮನಾಭನ ಸಂಪತ್ತಿನ ರೀತಿಯಲ್ಲೇ ಪುರಿ ಜಗನ್ನಾಥ ದೇವಸ್ಥಾನದ ಸಂಪತ್ತು ಇದೆ ಎಂಬ ಮಾತಿದೆ. ಸೀಕ್ರೆಟ್ ಕೋಣೆಯಲ್ಲಿ ಸಾವಿರಾರು ಕೆಜಿ ಚಿನ್ನಾಭರಣ, ಮುತ್ತು, ರತ್ನ, ಹವಳ ಮತ್ತು ಬೆಳ್ಳಿ ಸಾಮಗ್ರಿಗಳಿವೆ.

ಇದನ್ನೂ ಓದಿ:ಮದ್ವೆಗೆ ಬಂದಿದ್ದ ಸಿನಿಮಾ ಮಂದಿಗೆ ಅಂಬಾನಿ ಭರ್ಜರಿ ಗಿಫ್ಟ್​.. 2 ಕೋಟಿ ಬೆಲೆಯ ವಾಚ್​ ಯಾರಿಗೆಲ್ಲ ಕೊಟ್ಟಿದ್ದಾರೆ..?

publive-image

ಅಂದು ಏನಾಗಿತ್ತು..?
1979ರಲ್ಲಿ ಬರೋಬ್ಬರಿ 70 ದಿನಗಳ ಕಾಲ ಸಂಪತ್ತಿನ ಮೌಲ್ಯವನ್ನು ಸಮಿತಿ ಲೆಕ್ಕ ಹಾಕಿತ್ತು. ಆದರೆ ಅದರ ಪೂರ್ತಿ ಮಾಹಿತಿಯನ್ನು ಸರ್ಕಾರ ಸಾರ್ವಜನಿಕಗೊಳಿಸಿರಲಿಲ್ಲ. ಈ ವಿಚಾರ ಕೋರ್ಟ್​ ಮೆಟ್ಟಿಲೇರಿತ್ತು. 2018ರಲ್ಲಿ ಒಡಿಶಾ ಸರ್ಕಾರಕ್ಕೆ ದೇವಸ್ಥಾನದ ರತ್ನ ಭಂಡಾರದ ಕೋಣೆಯ ಬಾಗಿಲು ತೆರೆದು ನಿಧಿಯ ಮೌಲ್ಯ ಮಾಪನ ಮಾಡುವಂತೆ ಹೈಕೋರ್ಟ್​ ಸೂಚನೆ ನೀಡಿತ್ತು. ಆಗ ಸಮಿತಿಗೆ ತಮ್ಮ ಬಳಿ ಇರೋದು ನಕಲಿ ಕೀಲಿ ಅನ್ನುವುದು ಗೊತ್ತಾಗಿ ಕೊಠಡಿ ಒಳಗೆ ಹೋಗಲು ಸಾಧ್ಯವಾಗಿರಲಿಲ್ಲ. ಇದರಿಂದ ಭಕ್ತಾದಿಗಳಲ್ಲಿ ಆತಂಕದ ಮನೆ ಮಾಡಿತ್ತು.

ತುಂಬಾನೇ ನಿಗೂಢ ರಹಸ್ಯಗಳನ್ನೇ ಹೊದ್ದು ನಿಂತಿರುವ ಪೂರಿ ಜಗನ್ನಾಥ ದೇವಾಲಯವನ್ನು ಕಟ್ಟಿಸಿದ್ದು ಯಾರು? ಆಭರಣಗಳನ್ನು ಕೊಟ್ಟವರು ಯಾರು ಅನ್ನೋದನ್ನು ನೋಡೋದಾದ್ರೆ, ಕ್ರಿಸ್ತ ಶಕ 1150ರಲ್ಲಿ ಒಡಿಶಾದ ಸುತ್ತಲಿನ ಪ್ರದೇಶವು ಗಂಗ ರಾಜವಂಶದ ಆಳ್ವಿಕೆಯಲ್ಲಿತ್ತು. ಗಂಗರ ರಾಜನಾಗಿದ್ದ ಅನಂತ ವರ್ಮನ್‌ ಚೋಡಗಂಗದೇವ ಈ ದೇಗುಲ ನಿರ್ಮಿಸಿದ್ದ. ಕ್ರಿಸ್ತಶಕ 1161ರಲ್ಲಿ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಂಡಿತ್ತು.

ಇದನ್ನೂ ಓದಿ:ಪಾಕ್ ಸೋಲಿಸಿ WCL ಕಪ್​​ಗೆ ಮುತ್ತಿಟ್ಟ ಭಾರತ.. ಯುವಿ ನೇತೃತ್ವದ ಇಂಡಿಯಾ ಚಾಂಪಿಯನ್ಸ್​ಗೆ ಭರ್ಜರಿ ಗೆಲುವು..!

ಅನಂಗಭೀಮ ದೇವ ಕ್ರಿಶ 1238ರವರೆಗೆ ಒಡಿಶಾ ಪ್ರದೇಶದ ರಾಜನಾಗಿದ್ದ. ಈತನ ಅಧಿಕಾರದ ಅವಧಿಯಲ್ಲಿ ಪುರಿ ದೇವಾಲಯಕ್ಕೆ 1.25 ಲಕ್ಷ ತೊಲ ಚಿನ್ನವನ್ನು ದಾನವಾಗಿ ನೀಡಿದ್ದ ಎಂಬ ಇತಿಹಾಸ ಇದೆ. 1465ರಲ್ಲಿ ರಾಜ ಕಪಿಲೇಂದ್ರ ದೇವ್‌ ಕೂಡ ಸಾಕಷ್ಟು ಚಿನ್ನವನ್ನು ದಾನ ಮಾಡಿರುವ ಬಗ್ಗೆ ಉಲ್ಲೇಖ ಇದೆ.

ಇದನ್ನೂ ಓದಿ:ಚಿನ್ನ ಖರೀದಿಸಲು ಸುವರ್ಣಾವಕಾಶ ಬಂದರೂ ಅಚ್ಚರಿ ಇಲ್ಲ.. ಕೇಂದ್ರದಿಂದ ಮಹತ್ವದ ನಿರ್ಧಾರ ಸಾಧ್ಯತೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment