/newsfirstlive-kannada/media/post_attachments/wp-content/uploads/2024/04/ALLU_ARJUN-1.jpg)
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ ಸಿನಿಮಾ ಪುಷ್ಪ 2 ರಿಲೀಸ್‌ಗೆ ರೆಡಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈಗ ಎಲ್ಲಿ ನೋಡಿದ್ರೂ ಪುಷ್ಪನದ್ದೇ ದರ್ಬಾರ್​. ಫ್ಲವರ್​ ಅಲ್ಲ ಫೈರ್ ಅನ್ಕೊಂಡು ಬಂದಿದ್ದ ಪುಷ್ಪ ಮೊದಲ ಭಾಗ ಬ್ಲಾಕ್ ​ಬಸ್ಟರ್ ಹಿಟ್​ ಆಗಿತ್ತು. ಗಂಧದ ಮರಗಳ್ಳತನ ಮಾಡೋ ನೆಗೆಟಿವ್​ ಶೇಡ್​ನಲ್ಲಿ ಬಾಕ್ಸ್​ ಆಫೀಸ್​ನ್ನ ಕೊಳ್ಳೆ ಹೊಡೆದಿದ್ರು. ಈಗ ಪುಷ್ಪ - 2 ರಿಲೀಸ್​ ಆಗ್ತಿದೆ. ಆದ್ರೆ ಸಿನಿಮಾ ರಿಲೀಸ್ ಸುದ್ದಿಗಿಂತ ಅಲ್ಲು ಅರ್ಜುನ್ ಪಡೆದ ಸಂಭಾವನೆಯೇ ಭಾರೀ ದೊಡ್ಡ ಸುದ್ದಿಯಾಗಿದೆ.
/newsfirstlive-kannada/media/post_attachments/wp-content/uploads/2024/11/Allu-Arjun-Pushpa-2.jpg)
ಭಾರತದ ಎಲ್ಲಾ ಹೀರೋಗಳ ದಾಖಲೆ ಮುರಿದ ಅಲ್ಲು ಅರ್ಜುನ್​
ಐಕಾನ್ ಸ್ಟಾರ್​ ಅಲ್ಲು ಅರ್ಜುನ್​ ಭಾರತೀಯ ಸಿನಿಮಾ ರಂಗಕ್ಕೆ ಶಾಕ್ ಕೊಟ್ಟಿದ್ದಾರೆ. ಮಾತ್ರವಲ್ಲದೇ ಬಾಲಿವುಡ್​ನ ಖಾನ್​ತ್ರಯರನ್ನೇ ದಂಗಾಗುವಂತೆ ಮಾಡಿದ್ದಾರೆ. ಭಾರತದ ಎಲ್ಲಾ ಹೀರೋಗಳ ದಾಖಲೆ ಮುರಿದಿದ್ದಾರೆ. ಈಗಾಗಲೇ ತಮಿಳು ನಟರು 200 ಕೋಟಿಗೂ ಅಧಿಕ ಸಂಭಾವನೆ ಪಡೆಯುತ್ತಿದ್ದಾರೆ. ಇವರನ್ನ ಮೀರಿಸಿ ಪುಷ್ಪ-2 ಚಿತ್ರಕ್ಕೆ ನಟ ಅಲ್ಲು ಅರ್ಜುನ್​ಗೆ ₹300 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಈ ಮೂಲಕ ಭಾರತದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆದ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶಾರುಖ್ ಖಾನ್, ಪ್ರಭಾಸ್​ರನ್ನೇ ಹಿಂದಿಕ್ಕಿದ್ದಾರೆ.
/newsfirstlive-kannada/media/post_attachments/wp-content/uploads/2023/09/pushpa.jpg)
ಯಾವೆಲ್ಲ ನಟರು ಎಷ್ಟು ಸಂಭಾವನೆ ಪಡೆಯುತ್ತಾರೆ?
ಕೂಲಿ ಸಿನಿಮಾಗೆ 280 ಕೋಟಿ ರೂಪಾಯಿ ಸಂಭಾವನೆ ಪಡೆದ ರಜನಿಕಾಂತ್
ದಳಪತಿ ವಿಜಯ್ ತಮ್ಮ 69ನೇ ಸಿನಿಮಾಗೆ 275 ಕೋಟಿ ಸಂಭಾವನೆ
ಪ್ರಭಾಸ್ ಹೊಂಬಾಳೆ ಫಿಲ್ಮ್ಸ್ ಜೊತೆ 3 ಸಿನಿಮಾಗೆ 600 ಕೋಟಿಗೆ ಒಪ್ಪಂದ
ಪುಷ್ಪ 2 ಸಿನಿಮಾದಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್, ಫಹಾದ್ ಫಾಸಿಲ್ ಕೂಡ ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ಒಟ್ಟಾರೆ 300 ಕೋಟಿ ಸಂಭಾವನೆ ಪಡೆಯುವ ಮೂಲಕ ಅಲ್ಲು ಅರ್ಜುನ್ ಭಾರೀ ಸುದ್ದಿಯಲ್ಲಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಸಂಸ್ಥೆ ಪುಷ್ಪ 2 ಸಿನಿಮಾ ನಿರ್ಮಿಸಿದ್ದು ಪ್ರಚಾರವನ್ನು ಕೂಡ ಅದ್ದೂರಿಯಾಗಿ ಮಾಡುತ್ತಿದೆ. ಇದನ್ನೆಲ್ಲ ನೋಡ್ತಿದ್ರೆ ಪುಷ್ಪ 2 ಕೂಡ ಭರ್ಜರಿಯಾಗಿ ಕಲೆಕ್ಷನ್ ಮಾಡುವ ನಿರೀಕ್ಷೆ ಹುಟ್ಟುಹಾಕಿದೆ.
/newsfirstlive-kannada/media/post_attachments/wp-content/uploads/2024/05/pushpa-1.jpg)
ಪುಷ್ಪ - 2 ಪ್ಲಾನ್ ಏನು?
ಅಲ್ಲು ಅರ್ಜುನ್ ನಟನೆಯ ಪುಷ್ಪ - 2 ಇದೇ ಡಿ.5ಕ್ಕೆ ರಿಲೀಸ್
ನಿರ್ದೇಶಕ ಸುಕುಮಾರ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ
ಪುಷ್ಪ - 2 ಟ್ರೈಲರ್ ಇದೇ ಭಾನುವಾರ ಸಂಜೆ 6:03ಕ್ಕೆ ರಿಲೀಸ್
ಬಿಹಾರದ ಪಾಟ್ನಾದಲ್ಲಿ ಟ್ರೈಲರ್ ರಿಲೀಸ್ ಮಾಡಲಿರುವ ಚಿತ್ರತಂಡ
ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿರುವ ಅಲ್ಲು ಅರ್ಜುನ್
ದಕ್ಷಿಣ ಭಾರತದಲ್ಲಿ ಸಹಜವಾಗಿಯೇ ಚಿತ್ರ ಉತ್ತಮ ಗಳಿಕೆ ನಿರೀಕ್ಷೆ
ಉತ್ತರ ಭಾರತದಲ್ಲೂ ಉತ್ತಮ ಗಳಿಕೆ ಆಗಲೆಂದು ಬಿಹಾರ ಆಯ್ಕೆ
IMDB ಪ್ರಕಾರ ಪುಷ್ಪ ಮೊದಲ ಭಾಗ 360 ಕೋಟಿ ಗಳಿಕೆ
ಪುಷ್ಪ - 2 ಸಿನೆಮಾ ಸಾವಿರ ಕೋಟಿ ರೂಪಾಯಿ ಗಳಿಕೆ ನಿರೀಕ್ಷೆ
ಅದಕ್ಕೆ ತಕ್ಕಂತೆ ಅಲ್ಲು ಅರ್ಜುನ್ ಸಂಭಾವನೆಯಲ್ಲೂ ಭಾರೀ ಏರಿಕೆ
ಅಲ್ಲು ಅರ್ಜುನ್‌ಗೆ 300 ಕೋಟಿ ಸಂಭಾವನೆ ನೀಡಿರುವುದಾಗಿ ಮಾಹಿತಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us