/newsfirstlive-kannada/media/post_attachments/wp-content/uploads/2024/12/ALLU_ARJUN_KGF.jpg)
ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್, ರಶ್ಮಿಕಾ ಅಭಿನಯದ ಪುಷ್ಪ-2 ಸಿನಿಮಾಕ್ಕೆ ಫ್ಯಾನ್ಸ್ ಫಿದಾ ಆಗಿದ್ದು, ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಥಿಯೇಟರ್ಗಳಲ್ಲಿ ಸಖತ್ ಕಲೆಕ್ಷನ್ ಮಾಡುತ್ತಿರುವ ಪುಷ್ಪ2 ಸಿನಿಮಾ ಕೆಜಿಎಫ್, ಆರ್ಆರ್ಆರ್ ಸಿನಿಮಾಗಳ ರೆಕಾರ್ಡ್ ಬ್ರೇಕ್ ಮಾಡಿದೆ. ಅತ್ಯಂತ ಹೆಚ್ಚು ಹಣ ಗಳಿಸಿದ ಭಾರತದ ಟಾಪ್ 3 ಸಿನಿಮಾಗಳ ಪಟ್ಟಿಯಲ್ಲಿ ಪುಷ್ಪ-2 ಸಿನಿಮಾ ಸ್ಥಾನ ಪಡೆದುಕೊಂಡಿದೆ.
ಇದನ್ನೂ ಓದಿ:ಮಧ್ಯಪ್ರದೇಶಕ್ಕೆ ನಿರಾಸೆ.. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಎತ್ತಿ ಹಿಡಿದ ಶ್ರೇಯಸ್ ಅಯ್ಯರ್
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ-2 ದಿ ರೂಲ್ ವಿಶ್ವದ್ಯಾಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕೇವಲ 11ನೇ ದಿನಕ್ಕೆ ಈ ಸಿನಿಮಾ ಭಾರತದಲ್ಲಿ 900 ಕೋಟಿಗೂ ಹೆಚ್ಚು ರೂಪಾಯಿಯ ಬಾಕ್ಸ್ ಆಫೀಸ್ ಸೇರಿದೆ. ಮೊದಲ ವಾರದಲ್ಲೇ ಪುಷ್ಪ 725.8 ಕೋಟಿ ರೂಪಾಯಿಗಳನ್ನು ಸಂಗ್ರಹ ಮಾಡಿತ್ತು. ಹಿಂದಿಯಲ್ಲಿ 553.1 ಕೋಟಿ ರೂ, ತೆಲುಗಿನಲ್ಲಿ 279.35 ಕೋಟಿ ರೂ. ತಮಿಳಿನಲ್ಲಿ 50 ಕೋಟಿ ರೂ. ಮಲಯಾಳಂನಲ್ಲಿ 49 ಕೋಟಿ ರೂ ಹಾಗೂ ಕನ್ನಡದಲ್ಲಿ 7 ಕೋಟಿ ರೂಪಾಯಿಗಳನ್ನು ಕಲೆಕ್ಷನ್ ಮಾಡಿತ್ತು. ಈಗಲೂ ಪುಷ್ಪ ಸಿನಿಮಾದ ನಾಗಲೋಟ ಮುಂದುವರೆದಿದೆ.
ಸಿನಿಮಾದ ಅಧಿಕೃತ ಟ್ವೀಟರ್ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು ಪುಷ್ಪಾ 2 ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 1,200 ಕೋಟಿ ರೂಪಾಯಿ ದಾಟಿ ಮುನ್ನುಗ್ಗುತ್ತಿದೆ. ಕೇವಲ 10 ದಿನದಲ್ಲಿ ಸುಮಾರು 1,292 ಕೋಟಿ ರೂಪಾಯಿ ಗಳಿಸಿದೆ. ಭಾರತದ ಸಿನಿಮಾಗಳಲ್ಲಿ ಅತ್ಯಂತ ಹೆಚ್ಚು ಹಣ ಗಳಿಸಿದ ಸಿನಿಮಾಗಳ ಪೈಕಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಹಾಗೂ ಆರ್ಆರ್ಆರ್ ಚಿತ್ರದ ಕಲೆಕ್ಷನ್ ದಾಖಲೆಯನ್ನು ಬ್ರೇಕ್ ಮಾಡಿದೆ. ಈ ಮೂಲಕ 3ನೇ ಸ್ಥಾನಕ್ಕೆ ಪುಷ್ಪ ಸಿನಿಮಾ ಎಂಟ್ರಿಕೊಟ್ಟಿದೆ.
ಅದರಂತೆ ಮೊದಲ ಸ್ಥಾನದಲ್ಲಿ ಅಮೀರ್ ಖಾನ್ ಅಭಿನಯದ ದಂಗಲ್ 2,024 ಕೋಟಿ ರೂಪಾಯಿ, ರಾಜಮೌಳಿ ನಿರ್ದೇಶನದಲ್ಲಿ ಪ್ರಭಾಸ್ ಅಭಿನಯದ ಬಾಹುಬಲಿ-2 ಸಿನಿಮಾ 1,742 ಕೋಟಿ ರೂಪಾಯಿ ಗಳಿಸಿ ದ್ವಿತೀಯ ಸ್ಥಾನದಲ್ಲಿದೆ. ಅಲ್ಲು ಅರ್ಜುನ್ ಮಾಸ್ ಲುಕ್ನಲ್ಲಿ ಆ್ಯಕ್ಟಿಂಗ್, ಪುಷ್ಪ ಅಂದ್ರೆ ಫ್ಲವರ್ ಅನ್ಕೊಂಡ್ಯಾ? ಇದು ಫ್ಲವರ್ ಅಲ್ಲಾ, ವೈಲ್ಡ್ ಫೈಯರ್ ಎನ್ನುವ ಡೈಲಾಗ್ಗೆ ಅಭಿಮಾನಿಗಳೆಲ್ಲ ಕಳೆದು ಹೋಗಿದ್ದಾರೆ. ಹೆಂಡತಿ ಪಾತ್ರದಲ್ಲಿ ನ್ಯಾಷನಲ್ ಕ್ರಷ್ ರಶ್ಮಿಕಾ ಸೂಪರ್ ಆಗಿ ಮಿಂಚಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ