ಅಲ್ಲು ಅರ್ಜುನ್ ಅರೆಸ್ಟ್; ನಿನ್ನೆಯೂ ಪುಷ್ಪ -2 ಕಮಾಲ್.. 8 ದಿನದ ಕಲೆಕ್ಷನ್ ಎಷ್ಟು ಕೋಟಿ..?

author-image
Ganesh
Updated On
ಅಲ್ಲು ಅರ್ಜುನ್ ಅರೆಸ್ಟ್; ನಿನ್ನೆಯೂ ಪುಷ್ಪ -2 ಕಮಾಲ್.. 8 ದಿನದ ಕಲೆಕ್ಷನ್ ಎಷ್ಟು ಕೋಟಿ..?
Advertisment
  • ಹೈದರಾಬಾದ್​ ಪೊಲೀಸರಿಂದ ಅಲ್ಲು ಅರ್ಜುನ್ ಅರೆಸ್ಟ್
  • ಕಾಲ್ತುಳಿತದಲ್ಲಿ ರೇವತಿ ಎಂಬ ಮಹಿಳೆ ಪ್ರಾಣ ಹೋಗಿತ್ತು
  • ಈ ಸಂಬಂಧ ಕೇಸ್​ ದಾಖಲಿಸಿಕೊಂಡಿದ್ದ ಪೊಲೀಸರು

ಪುಷ್ಪ-2 ಪ್ರೀಮಿಯರ್ ಶೋ ವೇಳೆ ನಡೆದ ದುರಂತ ಪ್ರಕರಣದಲ್ಲಿ ತೆಲುಗು ಬಿಗ್​ ಸ್ಟಾರ್ ಅಲ್ಲು ಅರ್ಜುನ್ ಅವರನ್ನು ಚಿಕ್ಕಡಪಲ್ಲಿ ಪೊಲೀಸರು ಬಂಧಿಸಿದ್ದಾರೆ.

ಡಿಸೆಂಬರ್ 4 ರಂದು ಪುಷ್ಪ-2 ಪ್ರಿಮಿಯರ್ ಶೋ ಇತ್ತು. ಅಂತೆಯೇ ಹೈದರಾಬಾದ್​ನ ಸಂಧ್ಯಾ ಥಿಯೇಟರ್​ನಲ್ಲಿ ಅಭಿಮಾನಿಗಳ ಜೊತೆ ಚಿತ್ರ ವೀಕ್ಷಣೆಗೆ ಅಲ್ಲು ಅರ್ಜುನ್ ಬಂದಿದ್ದರು. ಈ ವೇಳೆ ಅಭಿಮಾನಿಗಳು ಅಲ್ಲು ಅರ್ಜುನ್ ಅವರನ್ನು ನೋಡಲು ಮುಗಿಬಿದ್ದಿದ್ದರು. ಆಗ ಕಾಲ್ತುಳಿತ ಸಂಭವಿಸಿ ರೇವತಿ ಎಂಬ ಮಹಿಳೆ ಪ್ರಾಣ ಕಳೆದುಕೊಂಡಿದ್ದರು. ಈ ಸಂಬಂಧ ಅಲ್ಲು ಅರ್ಜುನ್ ವಿರುದ್ಧ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ:Breaking: ಐಕಾನ್ ಸ್ಟಾರ್​ ಅಲ್ಲು ಅರ್ಜುನ್ ಅರೆಸ್ಟ್; ಹೈದ್ರಾಬಾದ್ ಪೊಲೀಸರಿಂದ ಬಂಧನ

ಚಿತ್ರ ಬಿಡುಗಡೆ ವೇಳೆ ನಡೆದ ಅಹಿತಕರ ಘಟನೆಗಳ ನಡುವೆಯೂ ಚಿತ್ರಕ್ಕೆ ಬಿಗ್​ ಸಕ್ಸಸ್ ಸಿಕ್ಕಿದೆ. ಈಗಾಗಲೇ ಚಿತ್ರವೂ ಸಾವಿರ ಕೋಟಿ ರೂಪಾಯಿ ಗಳಿಸಿ ಮುನ್ನುಗ್ಗುತ್ತಿದೆ. ಡಿಸೆಂಬರ್ 5 ರಂದು ವಿಶ್ವದಾದ್ಯಂತ ಚಿತ್ರ ತೆರೆಕಂಡು ಸಕ್ಸಸ್​​ ಕಂಡಿದೆ. Sacnilk.com ಪ್ರಕಾರ ನಿನ್ನೆಯ ದಿನ 37.9 ಕೋಟಿ ಹಣವನ್ನು ಗಳಿಸಿದೆ. ಅಂದರೆ ಚಿತ್ರ ರಿಲೀಸ್ ಆಗಿ 8 ದಿನದಲ್ಲಿ ಭಾರತ ಒಂದರಲ್ಲೇ ಬರೋಬ್ಬರಿ 726.25 ಕೋಟಿ ಹಣವನ್ನು ಗಳಿಸಿದೆ. ವಿಶ್ವದಾದ್ಯಂತ ಒಟ್ಟು 1067 ರೂಪಾಯಿ ಗಳಿಸಿದೆ ಎಂದು ಚಿತ್ರತಂಡ ಘೋಷಣೆ ಮಾಡಿದೆ.

ಇದನ್ನೂ ಓದಿ:ಅಲ್ಲು ಅರ್ಜುನ್ ಅರೆಸ್ಟ್; ಐಕಾನ್ ಸ್ಟಾರ್​ ವಿರುದ್ಧ ಇರುವ ಆರೋಪ ಏನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment