newsfirstkannada.com

100, 200 ಕೋಟಿ ಅಲ್ಲ.. ದಾಖಲೆ ಮೊತ್ತಕ್ಕೆ ಪುಷ್ಪ-2 ಡಿಜಿಟಲ್ ಹಕ್ಕು ಮಾರಾಟ; ಆಲ್‌ ರೆಕಾರ್ಡ್‌ ಬ್ರೇಕ್‌!

Share :

Published April 18, 2024 at 9:47pm

    ಪುಷ್ಪ-2 ಚಿತ್ರತಂಡಕ್ಕೆ ಬಂಪರ್ ಆಫರ್ ಕೊಟ್ಟ ನೆಟ್‌ಫ್ಲಿಕ್ಸ್ ಒಪ್ಪಂದ

    ರಾಜಮೌಳಿ RRR ಸಿನಿಮಾದ ಡಿಜಿಟಲ್ ಹಕ್ಕು 170 ಕೋಟಿ ರೂಪಾಯಿ

    ರಿಲೀಸ್‌ಗೂ ಮೊದಲೇ 200 ಕೋಟಿ ರೂಪಾಯಿ ಬಾಕ್ಸ್‌ ಆಫೀಸ್ ಕ್ಲಬ್!

ಟಾಲಿವುಡ್‌ನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ-2 ರಿಲೀಸ್‌ ಮುನ್ನವೇ ಎಲ್ಲಾ ರೆಕಾರ್ಡ್‌ಗಳನ್ನು ಬ್ರೇಕ್ ಮಾಡುವ ಸಾಧ್ಯತೆ. ಇತ್ತೀಚೆಗೆ ಪುಷ್ಪ-2 ಚಿತ್ರದ ಮೊದಲ ಟೀಸರ್ ಬಿಡುಗಡೆಯಾಗಿದ್ದು, ವೀವ್ಸ್‌ನಲ್ಲಿ ದಾಖಲೆ ಬರೆದಿದೆ. ಶೀಘ್ರವೇ ಪುಷ್ಪ-2 ಚಿತ್ರದ ಎರಡನೇ ಟೀಸರ್ ಕೂಡ ರಿಲೀಸ್‌ಗೆ ಚಿತ್ರತಂಡ ತಯಾರಿ ನಡೆಸಿದೆ.

ಪುಷ್ಪ-2 ಪ್ಯಾನ್ ಇಂಡಿಯಾ ಸಿನಿಮಾ 2024ರ ಬಹು ನಿರೀಕ್ಷಿತ ಸಿನಿಮಾ ಆಗಿದೆ. ಈ ಸಿನಿಮಾದ ಡಿಜಿಟಲ್ ಹಕ್ಕು ದಾಖಲೆಯ ಬೆಲೆಗೆ ಮಾರಾಟವಾಗುವ ವರದಿಯಾಗಿದೆ. ಪುಷ್ಪ-2 ಸಿನಿಮಾದ ಡಿಜಿಟಲ್ ಹಕ್ಕನ್ನು ನೆಟ್‌ಫ್ಲೆಕ್ಸ್ ಬರೋಬ್ಬರಿ 275 ಕೋಟಿ ರೂಪಾಯಿಗೆ ಖರೀದಿಸಲು ಮುಂದಾಗಿದೆ.

ಪುಷ್ಪ-2 ನಿರ್ಮಾಪಕರಿಗೆ ನೆಟ್‌ಫ್ಲಿಕ್ಸ್ ಮತ್ತೊಂದು ಬಂಪರ್ ಆಫರ್ ಅನ್ನು ಕೊಟ್ಟಿದೆ. ಪುಷ್ಪ-2 ಸಿನಿಮಾದ ಡಿಜಿಟಲ್ ಹಕ್ಕಿನ ಮೂಲ ಬೆಲೆ 250 ಕೋಟಿ ರೂಪಾಯಿಗೆ ಖರೀದಿಸಲಾಗಿದೆ. ಸಿನಿಮಾ ರಿಲೀಸ್ ಆದ ಬಳಿಕ ಬಾಕ್ಸ್ ಆಫೀಸ್‌ನಲ್ಲಿ ಪುಷ್ಪ-2 ಭರ್ಜರಿ ಕಲೆಕ್ಷನ್ ಮಾಡಿದ್ರೆ ಡಿಜಿಟಲ್ ಹಕ್ಕಿನ ಮೂಲ ಬೆಲೆಯನ್ನು 300 ಕೋಟಿ ರೂಪಾಯಿಗೆ ವಿಸ್ತರಿಸುವ ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ರಜನಿ, ಪ್ರಭಾಸನ್ನೇ ಮೀರಿಸಿದ ಅಲ್ಲು ಅರ್ಜುನ್​; ಅಬ್ಬಬ್ಬಾ! ಪುಷ್ಪಾ-2ಗೆ ಇಷ್ಟು ಕೋಟಿ ತಗೊಂಡ್ರಾ?

ಬಾಹುಬಲಿ-2, ಕೆಜಿಎಫ್-2 ಬಳಿಕ ಭಾರತೀಯ ಸಿನಿಮಾದಲ್ಲಿ ಬಹುನಿರೀಕ್ಷಿತ ಸಿನಿಮಾ ಅಂದ್ರೆ ಅದು ಪುಷ್ಪ-2 ಆಗಿದೆ. ಈ ಹಿಂದೆ RRR ಸಿನಿಮಾದ ಡಿಜಿಟಲ್ ಹಕ್ಕು 170 ಕೋಟಿ ರೂಪಾಯಿಗೆ ಮಾರಾಟವಾಗಿತ್ತು. ಇದೀಗ ಪುಷ್ಪ-2 ಸಿನಿಮಾದ ರೈಟ್ಸ್ 250 ಕೋಟಿ ರೂಪಾಯಿಗೆ ಮಾರಾಟವಾದ್ರೆ ಎಲ್ಲಾ ಭಾಷೆಯ ಸಿನಿಮಾಗಳ ದಾಖಲೆಯನ್ನು ಬ್ರೇಕ್‌ ಮಾಡಲಿದೆ.

ಸುಕುಮಾರ್ ನಿರ್ದೇಶನದ ಪುಷ್ಪ-2 ಸಿನಿಮಾದಲ್ಲಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ. ಪುಷ್ಪ2 ಆಗಸ್ಟ್ 15ರಂದು ಬೆಳ್ಳಿತೆರೆಯಲ್ಲಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ರಿಲೀಸ್‌ಗೂ ಮೊದಲೇ 200 ಕೋಟಿ ರೂಪಾಯಿ ಬಾಕ್ಸ್‌ ಆಫೀಸ್ ಕ್ಲಬ್ ಸೇರುವ ಸಾಧ್ಯತೆಗಳಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

100, 200 ಕೋಟಿ ಅಲ್ಲ.. ದಾಖಲೆ ಮೊತ್ತಕ್ಕೆ ಪುಷ್ಪ-2 ಡಿಜಿಟಲ್ ಹಕ್ಕು ಮಾರಾಟ; ಆಲ್‌ ರೆಕಾರ್ಡ್‌ ಬ್ರೇಕ್‌!

https://newsfirstlive.com/wp-content/uploads/2024/04/Pushpa-2-1.jpg

Load More