/newsfirstlive-kannada/media/post_attachments/wp-content/uploads/2024/12/Pushpa-2-Fans-1.jpg)
ಪುಷ್ಪಾ-2 ಸಿನಿಮಾ ತೆರೆ ಕಾಣುವ ಮುನ್ನವೇ ನಿರೀಕ್ಷೆಗಳ ಮಹಾಪೂರವನ್ನು ಸೃಷ್ಟಿಸಿತ್ತು. ಅಲ್ಲು ಅರ್ಜುನ್ ಅವರ ಒಂದೊಂದು ಅವತಾರ. ಒಂದೊಂದು ಪೋಸ್ ಕೂಡ ಹೈಪ್ ಕ್ರಿಯೇಟ್ ಮಾಡಿದ್ದವು. ಸಿನಿಮಾದ ಟ್ರೇಲರ್ ಬಿಡಗಡೆಯಾದ ಮೇಲೆ ಸಿನಿಮಾದ ಮೇಲಿದ್ದ ಕ್ರೇಜ್ ಮತ್ತೊಂದು ಹಂತಕ್ಕೆ ಹೋಯ್ತು. ಸದ್ಯ ಸಿನಿಮಾ ರಿಲೀಸ್ ಆಗಿದೆ. ಮಧ್ಯರಾತ್ರಿಯಿಂದಲೇ ಅನೇಕ ಕಡೆ ಷೋಗಳನ್ನು ನಡೆಸಲಾಗಿದೆ. ಸಿನಿಮಾ ನೋಡಿ ಆಚೆ ಬಂದ ಅಭಿಮಾನಿ ಫುಲ್ ಖುಷ್ ಆಗಿದ್ದಾನೆ. ಇದು ಅಲ್ಲು ಅರ್ಜುನ್ ಅವರ ಭರ್ಜರಿ ಕಮ್ಬ್ಯಾಕ್ ಎಂದೇ ಹಾಡಿ ಹೊಗಳುತ್ತಿದ್ದಾನೆ ಅಭಿಮಾನಿ.
ಇದನ್ನೂ ಓದಿ:ಪುಷ್ಪ 2 ರಿಲೀಸ್ ಸಂಭ್ರಮದಲ್ಲಿ ಅನಾಹುತ; ಉಸಿರು ನಿಲ್ಲಿಸಿದ ಮಹಿಳೆ, ಆಕೆಯ ಮಗ ಗಂಭೀರ
ಈಗಾಗಲೇ ಸೋಷಿಯಲ್ ಮೀಡಿಯಾಗಳಲ್ಲಿ ಸಿನಿಮಾದ ಬಗ್ಗೆ ಪರ ವಿರೋಧದ ಚರ್ಚೆಗಳು ಹುಟ್ಟಿಕೊಂಡಿವೆ. ಸಿನಿಮಾ ನೋಡಿ ಆಚೆ ಬಂದ ಅಭಿಮಾನಿಗಳು ಸಿನಿಮಾದ ಬಗ್ಗೆ ಒನ್ ಲೈನ್ ರಿವ್ಯೂ ಬರೆಯುತ್ತಿದ್ದಾನೆ. ಇಡೀ ಸಿನಿಮಾವನ್ನೇ ಅಲ್ಲು ಅರ್ಜುನ್ ತಮ್ಮ ರಾ ಹಾಗೂ ಖಡಕ್ ಲುಕ್ ಮತ್ತು ನಟನೆಯೊಂದಿಗೆ ಆಕ್ರಮಿಸಿಕೊಂಡುಬಿಟ್ಟಿದ್ದಾರೆ. ಇದು ಸುಕುಮಾರ್ ಅವರ ಮತ್ತೊಂದು ಸೂಪರ್ ಹಿಟ್ ಸಿನಿಮಾದ ಸಾಲಿನಲ್ಲಿ ಸೇರಿಕೊಳ್ಳಲಿದೆ ಎಂದು ಅಭಿಮಾನಿಯೊಬ್ಬ ತನ್ನ ಒಂದು ವಾಕ್ಯದ ವಿಮರ್ಶೆಯನ್ನು ಬರೆದಿಟ್ಟಿದ್ದಾರೆ. ಇನ್ನೂ ಫಹಾದ್ ಫಾಸಿಲ್ ನಟನೆಯ ಬಗ್ಗೆಯೂ ಕೂಡ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇನ್ನು ತರನ್ ಆದರ್ಶ್ ಎಂಬುವವರು ಕೂಡ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ. ಇದೊಂದು ಕಾಡ್ಗಿಚ್ಚಿನಂತಹ ಮನರಂಜನೆ. ಅಲ್ಲು ಅರ್ಜುನ್ ನಟನೆಗೆ ಎಲ್ಲಾ ಗೌರವ ಹಾಗೂ ಪ್ರಶಸ್ತಿಗಳು ಸಲ್ಲಬೇಕು. ಇವರ ನಟನೆ ಅದ್ಭುದಾಚೆಗೆ ಇದೆ ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ನಿರ್ದೇಶಕ ಸುಕುಮಾರ್ ಬಗ್ಗೆಯೂ ಹಾಡಿ ಹೊಗಳಿರುವ ತರನ್ ಆದರ್ಶ, ಸುಕುಮಾರ್ ಒಬ್ಬ ಮಾಂತ್ರಿಕ , ಬಾಕ್ಸ್ ಆಫೀಸ್ನಲ್ಲಿ ಸದ್ಯದಲ್ಲಿಯೇ ಬಿರುಗಾಳಿ ಏಳುವುದು ನಿಶ್ಚಿತ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಪುಷ್ಪ 2 ರಿಲೀಸ್ ವೇಳೆ ಅಭಿಮಾನಿಗಳ ಹುಚ್ಚಾಟ; ಬೆಂಕಿ ಹಚ್ಚಿ ಕುಣಿದಾಡಿದ ಫ್ಯಾನ್ಸ್! ಆಮೇಲೆ ಆಗಿದ್ದೇನು?
ಇನ್ನು ಸಿನಿಮಾ ಮೊದಲಾರ್ಧ ಎವರೆಜ್ಗಿಂತ ಸಾಧಾರಣ ಎನಿಸುವುದಕ್ಕಿಂತ ಕೊಂಚ ಉತ್ತಮವಿದೆ. ಎರಡು ಹಾಡುಗಳು ಅಧ್ಭುತ. ಇದು ಅಲ್ಲು ಅರ್ಜುನ್ ಅವರ ಒನ್ ಮ್ಯಾನ್ ಶೋ ಸಿನಿಮಾ. ಸಿನಿಮಾ ದೀರ್ಘವಾಗಿರುವುದು ಒಂದೇ ಇದರಲ್ಲಿ ಹಿನ್ನಡೆ ಅನಿಸುತ್ತದೆ. ರಶ್ಮಿಕಾ ಮಂದಣ್ಣ ಎಂದಿನಂತೆ ಸೊಬಗು ತುಂಬಿದ್ದಾರೆ. ಫಹಾದ್ ಫಾಸಿಲ್ ಅವರ ನಟನೆ ಎಲ್ಲರನ್ನೂ ಎಂದಿನಂತೆ ಮಂತ್ರಮುದ್ಧಗೊಳಿಸುತ್ತದೆ. ಇದೊಂದು ಪಕ್ಕಾ ಕಮರ್ಷಿಯಲ್ ಎಂಟೆಟೈನರ್ ಎಂದು ಪುಷ್ಪಾ-2 ಸಿನಿಮಾವನ್ನು ಹೊಗಳುತ್ತಿದ್ದಾರೆ ನೆಟ್ಟಿಗರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ