newsfirstkannada.com

ಪುಷ್ಪ ಪುಷ್ಪ ಅಂತ ಬಂದೇ ಬಿಟ್ರು ಪುಷ್ಪರಾಜ್; ಅಲ್ಲು ಅರ್ಜುನ್‌ ಸ್ಟೆಪ್‌ಗೆ ಕಳೆದೋದ ಫ್ಯಾನ್ಸ್‌; ಪಾರ್ಟ್‌-2 ಖದರ್‌ ಹೀಗಿದೆ!

Share :

Published May 1, 2024 at 6:40pm

Update May 1, 2024 at 6:41pm

  ಅಬ್ಬಬ್ಬಾ ರಿಲೀಸ್​ ಆಗಿರೋ ಮೊದಲ ಹಾಡಿನಲ್ಲಿ ರಗಡ್​ ಲುಕ್​ನಲ್ಲಿ ಐಕಾನ್ ಸ್ಟಾರ್

  ಕೊನೆಗೂ ಬಿಡುಗಡೆ​ ಆಯ್ತು ಬಹುನಿರೀಕ್ಷಿತ ಪುಷ್ಪ 2 ಸಿನಿಮಾದ ಮೊದಲ ಸಾಂಗ್​

  ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ ಪುಷ್ಪ 2 ಚಿತ್ರದ ಹೊಸ ಹಾಡು

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರ ಬಹುನಿರೀಕ್ಷಿತ ಪುಷ್ಪ 2: ದಿ ರೂಲ್​ ಸಿನಿಮಾದ ಮೊದಲ ಹಾಡು ಇದೀಗ ರಿಲೀಸ್​ ಆಗಿದೆ. ಅಬ್ಬಬ್ಬಾ ರಿಲೀಸ್​ ಆಗಿರೋ ಪುಷ್ಪ 2 ಸಿನಿಮಾದ ಮೊದಲ ಹಾಡಿನಲ್ಲೇ ಅಲ್ಲು ಅರ್ಜುನ್ ಫ್ಯಾನ್ಸ್​ಗೆ ಕಿಕ್ ಕೊಟ್ಟಿದ್ದಾರೆ. ಹೌದು, ಮತ್ತೊಮ್ಮೆ ಬಾಕ್ಸ್‌ಆಫೀಸ್ ಉಡೀಸ್​ ಮಾಡೋದಕ್ಕೆ ಭರ್ಜರಿಯಾಗಿ ತಯಾರಿ ನಡೆಸುತ್ತಿದ್ದ ಪುಷ್ಪ 2 ಚಿತ್ರತಂಡ ಹೊಸ ಹಾಡನ್ನು ರಿಲೀಸ್​ ಮಾಡಿ ಅಭಿಮಾನಿಗಳ ಗಮನ ತನ್ನತ್ತ ಸೆಳೆಯುತ್ತಿದ್ದಾರೆ.

ಇದನ್ನೂ ಓದಿ: PushpaPushpa: ಪುಷ್ಪ 2 ಫ್ಯಾನ್ಸ್‌ಗೆ ಬಿಗ್ ಅಪ್ಡೇಟ್‌.. ಮೊದಲ‌ ಹಾಡು ರಿಲೀಸ್ ಯಾವಾಗ?

ಹೌದು, ಇಷ್ಟು ದಿನ ಪುಷ್ಪ ಸಿನಿಮಾದ ಅಪ್​ಡೇಟ್ಸ್​ಗಾಗಿ ಕಾಯುತ್ತಿದ್ದ ಅಭಿಮಾನಿಗಳು ಮೊದಲ ಹಾಡನ್ನು ಕೇಳಿ ಫುಲ್​ ಖುಷ್​ ಆಗಿದ್ದಾರೆ. ಮೊನ್ನೆಯಷ್ಟೇ ಈ ಸಿನಿಮಾದ ಟೀಸರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ್ದ ಚಿತ್ರತಂಡ ಇದೀಗ ಪುಷ್ಪ ಪುಷ್ಪ ಪುಷ್ಪರಾಜ್ ಫುಲ್ ಸಾಂಗ್ ಬಿಡುಗಡೆಯಾಗಿದೆ. ಹೊಸ ಸಾಂಗ್​ನಲ್ಲಿ ಐಕಾನ್ ಸ್ಟಾರ್ ಖಡಕ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಮೊದ ಮೊದಲು ಕೆಂಪು ಬಣ್ಣದ ಕಾರಿನಿಂದ ಇಳಿದ ಅಲ್ಲು ಅರ್ಜುನ್ ರಗಡ್​ ಆಗಿ ಬರುತ್ತಿರುತ್ತಾರೆ.

ಆಗ ನೋಡಿ ಬರೋದೇ ಪುಷ್ಪ ಪುಷ್ಪ ಪುಷ್ಪ ಪುಷ್ಪ ಪುಷ್ಪರಾಜ್ ಎಂದು ಶುರುವಾದ ಹಾಡು ನೀ ಗಡ್ಡ ಹಂಗೆ ಸವರುತ್ತಿದ್ರೆ ದೇಶವೇ ಹೆದರುತ್ತಿತ್ತಂತೆ, ನೀ ಬುಜವ ಎತ್ತಿ ನಡೆಯುತ್ತಿದ್ರೆ ಹುಲಿಯೇ ಬೆದರುತ್ತಿತ್ತಂತೆ ಎಂಬ ಟ್ರಾಕ್​ ಸಖತ್​ ಹವಾ ಕ್ರಿಯೇಟ್​ ಮಾಡುತ್ತಿದೆ. ಈ ಹಾಡಿನಲ್ಲಿ ನಟನ ಶೂ ಬಹಳ ವಿಶೇಷವಾಗಿದೆ. ಪುಷ್ಪ 1ರಲ್ಲಿ ನಟ ಚಪ್ಪಲಿ ಹಾಕಿಕೊಂಡು ತನ್ನದೇಯಾದ ಸ್ಟೈಲ್​ನಲ್ಲಿ ಹೆಚ್ಚೆ ಹಾಕಿದ್ದರು. ಇದೀಗ ರಿಲೀಸ್​ ಆಗಿರೋ ಸಾಂಗ್​​ನಲ್ಲಿ ಪುಷ್ಪರಾಜ್​ ಸಖತ್​ ಆಗಿರೋ ಶೂಗಳನ್ನು ಧರಿಸಿದ್ದಾರೆ. ಜೊತೆಗೆ ಪುಷ್ಪರಾಜ್​ನ ಸ್ಟೆಪ್‌ಗೆ ಅಭಿಮಾನಿಗಳು ಕಳೆದುಹೋಗಿದ್ದಾರೆ. ಈ ಹಾಡಂತೂ ದೊಡ್ಡ ಹೈಪ್​ ಕ್ರಿಯೇಟ್​ ಮಾಡುವುದರಲ್ಲಿ ಯಾವುದೇ ಅನುಮಾನವೇ ಇಲ್ಲ.

ಸದ್ಯ ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈ ವಿಡಿಯೋ ನೋಡಿದ ಅಭಿಮಾನಿಗಳಲ್ಲಿ ಪುಷ್ಪ 2 ಸಿನಿಮಾದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಸದ್ಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪುಪ್ಪ 2 ಸಿನಿಮಾ ಆಗಸ್ಟ್ 15ರಂದು ತೆರೆಗೆ ಬರಲಿದೆ. ಈ ಬಹುನೀರಿಕ್ಷಿತ ಸಿನಿಮಾದಲ್ಲಿ ಅಲ್ಲು ಅರ್ಜುನ್​ಗೆ ಜೋಡಿಯಾಗಿ ನ್ಯಾಷನಲ್​ ಕ್ರಷ್ ರಶ್ಮಿಕಾ ಮಂದಣ್ಣ ಸೇರಿದಂತೆ ಧನಂಜಯ, ಫಹಾದ್ ಫಾಸಿಲ್, ಜಗದೀಶ್ ಪ್ರತಾಪ್ ಭಂಡಾರಿ, ಜಗಪತಿ ಬಾಬು, ರಾವ್ ರಮೇಶ್, ಅಜಯ್, ಮೈಮ್ ಗೋಪಿ, ಸುನಿಲ್, ಅನಸೂಯಾ ಭಾರದ್ವಾಜ್, ಶ್ರೀತೇಜ್, ಬ್ರಹ್ಮಾಜಿ ಮುಂತಾದವರು ನಟಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪುಷ್ಪ ಪುಷ್ಪ ಅಂತ ಬಂದೇ ಬಿಟ್ರು ಪುಷ್ಪರಾಜ್; ಅಲ್ಲು ಅರ್ಜುನ್‌ ಸ್ಟೆಪ್‌ಗೆ ಕಳೆದೋದ ಫ್ಯಾನ್ಸ್‌; ಪಾರ್ಟ್‌-2 ಖದರ್‌ ಹೀಗಿದೆ!

https://newsfirstlive.com/wp-content/uploads/2024/05/pushapa1.jpg

Load More