Advertisment

ಪುಷ್ಪಾ-2 ಫ್ಯಾನ್ಸ್‌ಗೆ ಬಿಗ್ ಶಾಕ್‌.. ಮಿಡ್‌ನೈಟ್ ಶೋ ದಿಢೀರ್‌ ಕ್ಯಾನ್ಸಲ್; ರದ್ದಾದ ಶೋ ದುಡ್ಡು ವಾಪಸ್ ಬರುತ್ತಾ?

author-image
admin
Updated On
VIDEO: ಪುಷ್ಪಾ 2 ಪ್ರೀಮಿಯರ್ ಶೋ ವೇಳೆ ಅನಾಹುತ; ಪೊಲೀಸರಿಂದ ಲಾಠಿ ಚಾರ್ಜ್‌!
Advertisment
  • ಪುಷ್ಪಾ 2 ಕ್ರೇಜ್ ಹೆಚ್ಚಾಗಿರುವಾಗಲೇ ಪೊಲೀಸರ ಖಡಕ್ ಎಚ್ಚರಿಕೆ
  • ಮಿಡ್ ನೈಟ್ ಹಾಗೂ ಮುಂಜಾನೆ 3 ಗಂಟೆಯ ಶೋ ಕ್ಯಾನ್ಸಲ್
  • ಬೆಂಗಳೂರು ಚಿತ್ರಮಂದಿರದ ಮಾಲೀಕರಿಗೆ ಖಡಕ್ ವಾರ್ನಿಂಗ್

ಬೆಂಗಳೂರು: ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪಾ 2 ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಹೈಬಜೆಟ್‌ ಸಿನಿಮಾಗೆ ಜಗತ್ತಿನಾದ್ಯಂತ ಅಭಿಮಾನಿಗಳು ಕಾಯುತ್ತಾ ಇದ್ದು, ಪುಷ್ಪಾ 2 ಕಣ್ತುಂಬಿಕೊಳ್ಳಲು ಸಜ್ಜಾಗಿದ್ದಾರೆ. ಪುಷ್ಪಾ 2 ಕ್ರೇಜ್ ಹೆಚ್ಚಾಗಿರುವಾಗಲೇ ಫ್ಯಾನ್ಸ್‌ಗೆ ಬೆಂಗಳೂರು ಪೊಲೀಸರು ಸಡನ್ ಶಾಕ್ ಕೊಟ್ಟಿದ್ದಾರೆ.

Advertisment

ಇದನ್ನೂ ಓದಿ: ಪುಷ್ಪಾ 2 ರಿಲೀಸ್​ಗೆ ಮುನ್ನವೇ ಅಲ್ಲು ಅರ್ಜುನ್​ಗೆ ಬಿಗ್​ ಶಾಕ್​​; ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ 

ನಾಳೆ ಪುಷ್ಪಾ 2 ಸಿನಿಮಾ ಬಿಡುಗಡೆಯ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇಂದು ಮಧ್ಯರಾತ್ರಿ 12 ಗಂಟೆ ಹಾಗೂ ಬೆಳಗ್ಗೆ 3 ಗಂಟೆೆಗೆ ಸ್ಪೆಷಲ್ ಫ್ಯಾನ್ಸ್‌ ಶೋ ಆಯೋಜಿಸಲಾಗಿತ್ತು. ಬೆಂಗಳೂರು ನಗರ ಪೊಲೀಸ್ ಆಯುಕ್ತರು ಈ ಮಿಡ್ ನೈಟ್ ಹಾಗೂ ಮುಂಜಾನೆ 3 ಗಂಟೆಯ ಶೋ ಕ್ಯಾನ್ಸಲ್ ಮಾಡಲು ಸೂಚನೆ ನೀಡಿದ್ದಾರೆ. ನಿಗದಿಯಂತೆ ರಾತ್ರಿ 9.30ಕ್ಕೆ ಫ್ಯಾನ್ ಶೋ ನಡೆದಿದ್ದು, ಅಭಿಮಾನಿಗಳು ಥಿಯೇಟರ್ ಮುಂದೆ ಜಮಾಯಿಸಿದ್ದಾರೆ.

publive-image

ನಗರದ ಪೊಲೀಸ್ ಠಾಣಾಧಿಕಾರಿಗಳಿಗೆ ಹಿರಿಯ ಅಧಿಕಾರಿಗಳಿಂದ ಆದೇಶ ನೀಡಲಾಗಿದೆ. ತಮ್ಮ ವ್ಯಾಪ್ತಿಯ ಚಿತ್ರಮಂದಿರಗಳಲ್ಲಿ ಅವಧಿಗೂ ಮುನ್ನ ಚಿತ್ರಪ್ರದರ್ಶನ ಮಾಡದಂತೆ ಕಡಿವಾಣ ಹಾಕಲು ಸೂಚನೆ ನೀಡಲಾಗಿದೆ. ಠಾಣಾಧಿಕಾರಿಗಳ ಜೊತೆ ಸಭೆ ನಡೆಸಿದ ಹಿರಿಯ ಅಧಿಕಾರಿಗಳು ಪುಷ್ಪಾ 2 ಫ್ಯಾನ್ಸ್ ಶೋ ನಿಗದಿಯಾಗಿದ್ದ ಚಿತ್ರಮಂದಿರದ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ನಿಯಮ ಮೀರಿ ಚಿತ್ರ ಪ್ರದರ್ಶನ ಮಾಡಿದ್ರೆ ಕಠಿಣ ಕ್ರಮದ ಎಚ್ಚರಿಕೆಯನ್ನು ನೀಡಿದ್ದಾರೆ.

Advertisment

publive-image

ರದ್ದಾದ ಶೋಗಳ ದುಡ್ಡು ವಾಪಸ್!
ಕರ್ನಾಟಕದಲ್ಲಿ ಪುಷ್ಪಾ-2 ಸಿನಿಮಾದ ಮಧ್ಯರಾತ್ರಿ 12 ಗಂಟೆ ಹಾಗೂ ಬೆಳಗ್ಗೆ 3 ಗಂಟೆ ಶೋ ಕ್ಯಾನ್ಸಲ್ ಆಗಿದೆ. ಈ ಬಗ್ಗೆ ಪುಷ್ಪಾ ಸಿನಿಮಾ ತಂಡದಿಂದ ಅಧಿಕೃತ ಮಾಹಿತಿ ನೀಡಲಾಗಿದೆ. ಜಿಲ್ಲಾಧಿಕಾರಿ ಆದೇಶದಂತೆ ಮಿಡ್ ನೈಟ್ ಹಾಗೂ ಮಾರ್ನಿಂಗ್ ಶೋ ಕ್ಯಾನ್ಸಲ್ ಮಾಡಲಾಗಿದೆ. ಪುಷ್ಪಾ-2 ಪ್ರದರ್ಶನ ರದ್ದು ಮಾಡಿರುವ ಚಿತ್ರಮಂದಿರಗಳಲ್ಲಿ ಬೆಳಗ್ಗೆ 6 ಗಂಟೆಗೆ ಪುಷ್ಪಾ-2 ಸಿನಿಮಾ ಪ್ರದರ್ಶನ ನಡೆಯಲಿದೆ. ಅಭಿಮಾನಿಗಳು ರದ್ದಾಗಿರುವ ಶೋಗಳ ದುಡ್ಡು ವಾಪಸ್ ಪಡೆಯಬಹುದು. ಇಲ್ಲವೇ ಮುಂದಿನ ಶೋಗೂ ಅದೇ ದುಡ್ಡನ್ನ ಕಂಟಿನ್ಯೂ ಮಾಡಬಹುದು ಎಂದು ಪುಷ್ಪಾ2 ಚಿತ್ರ ತಂಡ ತಿಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment