VIDEO: ಪುಷ್ಪಾ 2 ಪ್ರೀಮಿಯರ್ ಶೋ ವೇಳೆ ಅನಾಹುತ; ಪೊಲೀಸರಿಂದ ಲಾಠಿ ಚಾರ್ಜ್‌!

author-image
admin
Updated On
VIDEO: ಪುಷ್ಪಾ 2 ಪ್ರೀಮಿಯರ್ ಶೋ ವೇಳೆ ಅನಾಹುತ; ಪೊಲೀಸರಿಂದ ಲಾಠಿ ಚಾರ್ಜ್‌!
Advertisment
  • ರಾತ್ರಿ 9 ಗಂಟೆಗೆ ಶುರುವಾದ ಪುಷ್ಪಾ 2 ಪ್ರೀಮಿಯರ್ ಶೋ
  • ನೂಕುನುಗ್ಗಲು ನಿಯಂತ್ರಿಸಲು ಪೊಲೀಸರಿಂದ ಲಾಠಿಚಾರ್ಜ್
  • ಮಿಡ್‌ ನೈಟ್, ಮಾರ್ನಿಂಗ್ ಶೋಗಳು ಈಗಾಗಲೇ ಹೌಸ್‌ಫುಲ್‌

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪಾ 2 ಸಿನಿಮಾ ಈಗಾಗಲೇ ಬಿಡುಗಡೆಯಾಗಿದೆ. ಅಭಿಮಾನಿಗಳು ಪುಷ್ಪರಾಜ್‌ನ ರೌದ್ರಾವತಾರಕ್ಕೆ ಶಿಳ್ಳೆ, ಚಪ್ಪಾಳೆ ಹಾಕಿದ್ದು, ಥಿಯೇಟರ್‌ಗಳಲ್ಲಿ ನೂಕು ನುಗ್ಗಲು ಉಂಟಾಗಿದೆ.

ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ರಾತ್ರಿ 9 ಗಂಟೆಗೆ ಪ್ರೀಮಿಯರ್ ಶೋ ಆರಂಭವಾಗಿದೆ. ಸಂಧ್ಯಾ ಚಿತ್ರಮಂದಿರಕ್ಕೆ ನಟ ಅಲ್ಲು ಅರ್ಜುನ್ ಕೂಡ ಆಗಮಿಸಿದ್ದು, ಅಭಿಮಾನಿಗಳ ಸೆಲಬ್ರೇಷನ್ ಮುಗಿಲು ಮುಟ್ಟಿತ್ತು.
ಅಲ್ಲು ಅರ್ಜುನ್ ನೋಡಲು ಅಭಿಮಾನಿಗಳು ಜಮಾಯಿಸಿದ್ದು, ಜನ ಜಾತ್ರೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ನೂಕುನುಗ್ಗಲು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದರು ಕಂಟ್ರೋಲ್ ಮಾಡಲು ಸಾಧ್ಯವಿಲ್ಲ. ಪುಷ್ಪಾ 2 ಸೆಲಬ್ರೇಷನ್ ವೇಳೆ ಓರ್ವ ಬಾಲಕ ಗಂಭೀರವಾಗಿ ಗಾಯಗೊಂಡ ಘಟನೆಯೂ ನಡೆದಿದೆ.

ಹೈದರಾಬಾದ್‌ನ ಹಲವೆಡೆ ಪ್ರೀಮಿಯರ್ ಶೋ ಬಳಿಕ ಮಿಡ್‌ ನೈಟ್ ಹಾಗೂ ಮಾರ್ನಿಂಗ್ ಶೋಗಳು ಈಗಾಗಲೇ ಬುಕ್ ಆಗಿವೆ. ಪುಷ್ಪಾ 2 ಸಿನಿಮಾ ನೋಡಲು ಅಭಿಮಾನಿಗಳು ಈಗಾಗಲೇ ಥಿಯೇಟರ್ ಮುಂದೆ ಜಮಾಯಿಸಿದ್ದಾರೆ. ಅಲ್ಲು ಅರ್ಜುನ್ ಸಿನಿಮಾ ನೋಡಲು ಟಿಕೆಟ್‌ಗಾಗಿ ಪರದಾಡುತ್ತಿದ್ದಾರೆ.

publive-image

ಕರ್ನಾಟಕದಲ್ಲೂ ಭರ್ಜರಿ ರೆಸ್ಪಾನ್ಸ್‌!
ಕರ್ನಾಟಕದಲ್ಲಿ ಪುಷ್ಪಾ2 ಮಿಡ್‌ನೈಟ್ ಶೋ ಕ್ಯಾನ್ಸಲ್ ಆಗಿದ್ದರೂ ಫ್ಯಾನ್ಸ್‌ ಪ್ರೀಮಿಯರ್ ಶೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಚಿಕ್ಕಬಳ್ಳಾಪುರ ನಗರದ ಬಾಲಾಜಿ ಚಿತ್ರಮಂದಿರಲ್ಲಿ ರಾತ್ರಿ 9 ಗಂಟೆಗೆ ಶುರುವಾದ ಫ್ಯಾನ್ಸ್ ಶೋ ಹೌಸ್ ಫುಲ್ ಆಗಿದೆ. ಆಂದ್ರಪ್ರದೇಶದ ಗಡಿ ಭಾಗವಾದ ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಚಿಂತಾಮಣಿ ನಗರಗಳಲ್ಲಿ ಪುಷ್ಪಾ 2 ಪ್ರೀಮಿಯರ್ ಶೋ ರಿಲೀಸ್ ಆಗಿದೆ.

ಇದನ್ನೂ ಓದಿ: ಪುಷ್ಪಾ-2 ಫ್ಯಾನ್ಸ್‌ಗೆ ಬಿಗ್ ಶಾಕ್‌.. ಮಿಡ್‌ನೈಟ್ ಶೋ ದಿಢೀರ್‌ ಕ್ಯಾನ್ಸಲ್; ರದ್ದಾದ ಶೋ ದುಡ್ಡು ವಾಪಸ್ ಬರುತ್ತಾ? 

ಪುಷ್ಪ 2 ಸಿನಿಮಾಗೆ ರಾಯಚೂರಲ್ಲೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರ ಲಾಠಿ ಹಿಡಿದು ಸರದಿ ಸಾಲಲ್ಲಿ ನಿಲ್ಲಿಸುತ್ತಿದ್ದಾರೆ. ರಾಯಚೂರು ನಗರದ ಪೂರ್ಣಿಮಾ ಚಿತ್ರಮಂದಿರಲ್ಲಿ ಟಿಕೆಟ್ ಪಡೆಯಲು ಅಭಿಮಾನಿಗಳ ಹರಸಾಹಸ ಪಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment