/newsfirstlive-kannada/media/post_attachments/wp-content/uploads/2024/12/PUSHPA-2.jpg)
ಪುಷ್ಪ ಸಿನಿಮಾ ಇಂದು ಬೆಳಗ್ಗಿನಿಂದಲೇ ದೇಶಾದ್ಯಂತ ದೊಡ್ಡ ಹೈಪ್ ಕ್ರಿಯೇಟ್ ಮಾಡಿದೆ. ಸೂರ್ಯ ಮೂಡುವ ಮೊದಲೇ ಅಭಿಮಾನಿಗಳು ಸಿನಿಮಾ ಮಂದಿರಕ್ಕೆ ಲಗ್ಗೆಯಿಟ್ಟಿದ್ದಾರೆ. ಕೆಲವು ಕಡೆ ಹುಚ್ಚೆದ್ದ ಅಭಿಮಾನಿಗಳಿಂದ ಇಲ್ಲದ ತೊಂದರೆಗಳು ಕೂಡ ಆಗುತ್ತಿವೆ. ಬೆಂಗಳೂರಿನ ಉರ್ವಶಿ ಚಿತ್ರಮಂದಿರದಲ್ಲಿಯೂ ಕೂಡ ಅಂತಹುದೇ ಒಂದು ಘಟನೆ ನಡೆದಿದೆ.
ಇದನ್ನೂ ಓದಿ:ಪುಷ್ಪಾ-2 ವಿಶ್ವದಾದ್ಯಂತ ರಿಲೀಸ್.. ಫಸ್ಟ್ ಡೇ, ಫಸ್ಟ್ ಶೋ ನೋಡಿ ಅಭಿಮಾನಿಗಳು ಥ್ರಿಲ್..!
ಪುಷ್ಪಾ 2 ರಿಲೀಸ್ ಸಮಯದಲ್ಲಿ ಬೆಳಗಿನ ಶೋ ನೋಡಲು ಈಗಾಗಲೇ ಅಭಿಮಾನಿಗಳು ಸಾಗರದಂತೆ ಹರಿದು ಬಂದಿದ್ದಾರೆ. ಚಿತ್ರಮಂದಿರಕ್ಕೆ ಆಗಮಿಸಿದವರಿಗೆ ಟಿಕೆಟ್ ಖರೀದಿಗೂ ಅವಕಾಶ ನೀಡಲಾಗಿದೆ. ಮೊದಲ ಷೋ ನೋಡುವ ಕಾತುರದ ಜೊತೆಗೆ ಕಾವೇರಿದ ಅಭಿಮಾನ ಹಲವು ಹುಚ್ಚಾಟಗಳಿಗೆ ಸಾಕ್ಷಿಯಾಗಿದೆ.
ಉರ್ವಶಿ ಚಿತ್ರಮಂದಿರದಲ್ಲಿ ಪುಷ್ಪ ಚಿತ್ರ ಹಾಡು ಬರುತ್ತಿದ್ದಂತೆ ಚಿತ್ರಮಂದಿರದ ಸ್ಕ್ರೀನ್ ಮುಂದೆ ಬೆಂಕಿ ಹಚ್ಚಿ ಕುಣಿದಾಡಿ ಹುಚ್ಚು ಅಭಿಮಾನ ಮೆರೆದಿದ್ದಾರೆ ಅಭಿಮಾನಿಗಳು. ಅಭಿಮಾನಿಗಳು ಹಾಗು ಚಿತ್ರಮಂದಿರದ ಸಿಬ್ಬಂದಿ ನಡುವೆ ಈ ವಿಚಾರವಾಗಿ ವಾಗ್ವಾದ ನಡೆದಿದೆ. ಕೂಡಲೇ ಚಿತ್ರಮಂದಿರದ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು ಹುಚ್ಚಾಟ ಮೆರೆದ ಅಭಿಮಾನಿಗಳನ್ನು ವಶಕ್ಕೆ ಪಡೆಯಲಾಗಿದೆ.ನಿನ್ನೆ ರಾತ್ರಿ ಷೋ ವೇಳೆ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಇದರ ನಡುವೆಯೂ ಉರ್ವಶಿ ಚಿತ್ರಮಂದಿರಕ್ಕೆ ಸಿನಿ ಪ್ರಿಯರು ದಂಡಿ ದಂಡಿಯಾಗಿ ನುಗ್ಗುತ್ತಿದ್ದಾರೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ