OTT ಅಲ್ಲೂ ವಿವಾದ ಎಬ್ಬಿಸಿದ ಪುಷ್ಪ 2 ರೀಲೋಡೆಡ್‌; ಕನ್ನಡಿಗರಿಂದ ಭಾರೀ ಆಕ್ರೋಶ

author-image
admin
Updated On
ರಶ್ಮಿಕಾ ಡ್ಯಾನ್ಸ್​​ ಕಿಕ್.. ರಿಲೀಸ್​​ಗೂ ಮೊದಲೇ ಪುಷ್ಪಾ-2ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್; ದಾಖಲೆಗಳು ಧೂಳೀಪಟ!
Advertisment
  • 275 ಕೋಟಿಗೆ ನೆಟ್‌ಫ್ಲಿಕ್ಸ್‌ಗೆ ಮಾರಾಟವಾದ ಪುಷ್ಪ 2 ರೀಲೋಡೆಡ್‌?
  • ಥಿಯೇಟರ್​ನಲ್ಲಿ ನೋಡಿರದ 23 ನಿಮಿಷದ ದೃಶ್ಯಗಳು ಬಿಡುಗಡೆ
  • 1831 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ದಾಖಲೆ ಮಾಡಿರುವ ಪುಷ್ಪ 2

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹದ್ ಫಾಸಿಲ್ ಅಭಿನಯದ ಪುಷ್ಪ 2 ಥಿಯೇಟರ್‌ನಲ್ಲಿ ದಾಖಲೆ ನಿರ್ಮಿಸಿದ್ದಾಯ್ತು. ಇದೀಗ OTT ಅಲ್ಲೂ ಪುಷ್ಪ 2 ಸಿನಿಮಾ ಧೂಳೆಬ್ಬಿಸಲು ಆರಂಭಿಸಿದೆ. OTT ಅಲ್ಲಿ ಪುಷ್ಪ 2 ರೀಲೋಡೆಡ್‌ ಸಿನಿಮಾ ರಿಲೀಸ್ ಆಗಿದ್ದು, ಥಿಯೇಟರ್​ನಲ್ಲಿ ನೋಡಿರದ 23 ನಿಮಿಷದ ದೃಶ್ಯಗಳು ರಿಲೀಸ್‌ ಆಗಿದೆ.

ನೆಟ್‌ಫ್ಲಿಕ್ಸ್‌ನಲ್ಲಿ ಪುಷ್ಪ 2 ರೀಲೋಡೆಡ್‌ ಸಿನಿಮಾ ರಿಲೀಸ್ ಆಗಿದ್ದು, ಅಲ್ಲು ಅರ್ಜುನ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಕಳೆದ ಡಿಸೆಂಬರ್ 5ರಂದು ಪುಷ್ಪ 2 ಸಿನಿಮಾ ಪ್ಯಾನ್ ಇಂಡಿಯಾದಲ್ಲಿ ಬಿಡುಗಡೆ ಆಗಿತ್ತು. ದೇಶ, ವಿದೇಶದಲ್ಲೂ ಭರ್ಜರಿ ಪ್ರದರ್ಶನ ಕಂಡ ಅಲ್ಲು ಅರ್ಜುನ್ ಸಿನಿಮಾ 1831 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ದಾಖಲೆ ಮಾಡಿದೆ. OTT ಅಲ್ಲಿ ಪುಷ್ಪ 2 ಸಿನಿಮಾ 275 ಕೋಟಿ ರೂಪಾಯಿ ಮಾರಾಟ ಮಾಡಿರುವ ಬಗ್ಗೆ ವರದಿಯಾಗಿದೆ.

publive-image

ವರ್ಲ್ಡ್‌ ವೈಡ್‌ ಪುಷ್ಪ 2 ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕ ಮೇಲೆ OTT ಅಲ್ಲಿ ಯಾವಾಗ ರಿಲೀಸ್ ಆಗುತ್ತೆ ಅನ್ನೋ ನಿರೀಕ್ಷೆ ಇತ್ತು. ಪುಷ್ಪ-2 ನಿರ್ಮಾಪಕರು ಪುಷ್ಪ-2 ಚಿತ್ರಮಂದಿರಗಳಲ್ಲಿ 56 ದಿನಗಳು ಪೂರೈಸಿದ ನಂತರ OTT ಅಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿದ್ದರು. ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ಪುಷ್ಪ 2 ಹೆಚ್ಚುವರಿ 23 ನಿಮಿಷದ ದೃಶ್ಯಗಳೊಂದಿಗೆ ರಿಲೀಸ್‌ ಆಗಿದೆ.

ಇದನ್ನೂ ಓದಿ: OTTನಲ್ಲಿ ಪುಷ್ಪ 2; ಥಿಯೇಟರ್​ನಲ್ಲಿ ನೋಡಿರದ 20 ನಿಮಿಷದ ದೃಶ್ಯ ಕೂಡ ಇದೆ..! 

ಥಿಯೇಟರ್‌ನಲ್ಲಿ ರಿಲೀಸ್ ಆದ ಪುಷ್ಪ 2 ಸಿನಿಮಾ 3 ಗಂಟೆ 20 ನಿಮಿಷ ಇತ್ತು. ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆದ ಪುಷ್ಪ 2 ಬರೋಬ್ಬರಿ 3 ಗಂಟೆ 43 ನಿಮಿಷಗಳನ್ನು ಹೊಂದಿದೆ. ಸದ್ಯ ನೆಟ್‌ಫ್ಲಿಕ್ಸ್‌ನಲ್ಲಿ ಪುಷ್ಪ 2 ಸಿನಿಮಾವನ್ನು ತೆಲುಗು, ಹಿಂದಿ, ತಮಿಳು, ಮಲೆಯಾಳಂ ಭಾಷೆಯಲ್ಲಿ ವೀಕ್ಷಿಸಬಹುದಾಗಿದೆ.

publive-image

ನೆಟ್‌ಫ್ಲಿಕ್ಸ್ ಮೇಲೆ ಕನ್ನಡಿಗರಿಂದ ಆಕ್ರೋಶ!
ತೆಲುಗು, ಹಿಂದಿ, ತಮಿಳು, ಮಲೆಯಾಳಂ ಭಾಷೆಯಲ್ಲಿ ಪುಷ್ಪ 2 ರಿಲೀಸ್ ಮಾಡಿರುವ ನೆಟ್‌ಫ್ಲಿಕ್ಸ್ ಕನ್ನಡಕ್ಕೆ ಕಮಿಂಗ್ ಸೂನ್ ಅಂತ ಹೇಳಿದೆ. ಮೊದಲಿಗೆ ಕನ್ನಡ ಭಾಷೆಯಲ್ಲಿ ಬಿಡುಗಡೆ ಮಾಡದ ನೆಟ್‌ಫ್ಲಿಕ್ಸ್ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೆಟ್‌ಫ್ಲಿಕ್ಸ್ ಕನ್ನಡ ಭಾಷೆಯನ್ನು ಕಡೆಗಣಿಸಿದೆ. ಕನ್ನಡ ಭಾಷೆಗೆ ತೆಲುಗು, ತಮಿಳಿನಷ್ಟೇ ಪ್ರಾಧಾನ್ಯತೆ ನೀಡಿಲ್ಲ ಅನ್ನೋ ಮಾತು ಕೇಳಿ ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment