ಪುಷ್ಪ-2 ಕ್ಲೈಮ್ಯಾಕ್ಸ್​​ ಲೀಕ್​.. ವೈರಲ್​ ವಿಡಿಯೋದಲ್ಲಿ ಅಲ್ಲು ಅರ್ಜುನ್​ ಲುಕ್​ ಹೇಗಿದೆ ಗೊತ್ತಾ?​

author-image
Bheemappa
ಪುಷ್ಪ-2 ಕ್ಲೈಮ್ಯಾಕ್ಸ್​​ ಲೀಕ್​.. ವೈರಲ್​ ವಿಡಿಯೋದಲ್ಲಿ ಅಲ್ಲು ಅರ್ಜುನ್​ ಲುಕ್​ ಹೇಗಿದೆ ಗೊತ್ತಾ?​
Advertisment
  • ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ-2 ದಿ ರೂಲ್
  • ಬಾಕಿ ಇರುವ ಕ್ಲೈಮ್ಯಾಕ್ಸ್​ ಶೂಟಿಂಗ್​ ಮಾಡುವಾಗ ವಿಡಿಯೋ ಲೀಕ್
  • ಮೊಬೈಲ್ ನಿಷೇಧ ಇದ್ದರೂ ವಿಡಿಯೋ ಮಾಡಿರುವುದು ಹೇಗೆ..?

ಐಕಾನ್ ಸ್ಟಾರ್​ ಅಲ್ಲು ಅರ್ಜುನ್​ ನ್ಯಾಷನಲ್​ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ಫಹಾದ್ ಫಾಸಿಲ್ ಅಭಿನಯದ ಪುಷ್ಪ-2 ದೀ ರೂಲ್ ಮೂವಿ ಡಿಸೆಂಬರ್​ನಲ್ಲಿ ತೆರೆಗೆ ಅಪ್ಪಳಿಸಲಿದೆ ಎನ್ನಲಾಗಿದೆ. ಸದ್ಯ ಕ್ಲೈಮ್ಯಾಕ್ಸ್​ ಶೂಟಿಂಗ್​ ಇನ್ನಷ್ಟು ಬಾಕಿ ಇದ್ದು ಚಿತ್ರತಂಡ ಅದರಲ್ಲಿ ಬ್ಯುಸಿ ಆಗಿದೆ. ಇದರ ಬೆನ್ನಲ್ಲೇ ಪುಷ್ಪ-2 ಸಿನಿಮಾದ ಕ್ಲೈಮ್ಯಾಕ್ಸ್​ ಸೀನ್​ಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿವೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಕೇರಳ ಭೂಕುಸಿತ, 300 ಜನ ಸಾವನ್ನಪ್ಪಿದ್ದಾರಾ..? ಬೆಚ್ಚಿ ಬೀಳಿಸೋ ಸತ್ಯ ಬಿಚ್ಚಿಟ್ಟ ಸ್ಥಳೀಯ ನಿವಾಸಿ

ಸುಕುಮಾರ್ ನಿರ್ದೇಶನದ ಪುಷ್ಪ-2 ಚಿತ್ರತಂಡ ಕ್ಲೈಮ್ಯಾಕ್ಸ್ ಶೂಟಿಂಗ್​ ನಡೆಸುತ್ತಿತ್ತು. ಇದರಲ್ಲಿ ಸ್ಟೈಲಿಶ್ ಸ್ಟಾರ್​ ಅಲ್ಲು ಅರ್ಜುನ್ ಅವರ ಫೈಟಿಂಗ್ ಸೀನ್​ಗಳನ್ನ ಶೂಟ್ ಮಾಡಲಾಗುತ್ತಿತ್ತು. ಕೊನೆ ಹಂತದ ಶೂಟಿಂಗ್​ಗಾಗಿ ಹಳೆ ಕಟ್ಟಡದಂತ ಬೃಹತ್​ ಸೆಟ್ , ದೊಡ್ಡ ಕ್ರೇನ್​, ಬೈಕ್, ಫೈಟರ್ಸ್​ ಇತ್ಯಾದಿಗಳನ್ನು ಬಳಸಿಕೊಳ್ಳಲಾಗಿತ್ತು. ಇವೆಲ್ಲ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಸಿನಿಮಾ ಶೂಟಿಂಗ್ ವೇಳೆ ಮೊಬೈಲ್​ ಫೋನ್​ ನಿಷೇಧವಿದ್ದರೂ ಹೇಗೆ ಸೆಟ್​ ಒಳಗೆ ವಿಡಿಯೋ ಮಾಡಲಾಗಿದೆ ಎಂಬುದು ಗೊತ್ತಾಗಿಲ್ಲ. ಹೀಗಾಗಿ ನಿರ್ದೇಶಕ ಸುಕುಮಾರ್ ಸೇರಿದಂತೆ ಚಿತ್ರತಂಡ ತೀವ್ರ ಬೇಸರ ವ್ಯಕ್ತಪಡಿಸಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಕೇರಳದ ಬೆನ್ನಲ್ಲೇ ಬೆಂಗಳೂರಲ್ಲೂ ಭರ್ಜರಿ ಮಳೆ.. ಮನೆಯಿಂದ ಹೊರಬರೋ ಮುನ್ನ ಯೋಚಿಸಿ


">July 30, 2024

ಕ್ಲೈಮ್ಯಾಕ್ಸ್ ಶೂಟ್​ನಲ್ಲಿ ಅಲ್ಲು ಅರ್ಜುನ್ ಅವರು ಇದ್ದು ರಕ್ತಸಿಕ್ತವಾದ ದೃಶ್ಯದಲ್ಲಿ ಫೈಟಿಂಗ್ ಸ್ಕ್ಯಾನ್​ ಇರುವುದು ಲೀಕ್​ ಆದ ವಿಡಿಯೋದಿಂದ ಗೊತ್ತಾಗುತ್ತದೆ. ಇಂತಹ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಸಿನಿಮಾಕ್ಕೆ ದೊಡ್ಡ ಹೊಡೆತ ಎನ್ನಲಾಗ್ತಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ಕಾರಣ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದೆ. ನಟಿ ರಶ್ಮಿಕಾ ಮಂದಣ್ಣ ಶ್ರೀವಲ್ಲಿಯಾಗಿ ಅಭಿನಯ ಮಾಡುತ್ತಿದ್ದು ಅಲ್ಲು ಅರ್ಜುನ್ ಪುಷ್ಪ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಕ್ಲೈಮ್ಯಾಕ್ಸ್ ಸೀನ್​ ಲೀಕ್ ಆಗಿರುವುದನ್ನು ಕ್ರಮ ತೆಗೆದುಕೊಳ್ಳಬೇಕು ಎಂದು ನಿರ್ಮಾಪಕರಿಗೆ ಅಲ್ಲು ಅರ್ಜುನ್​ ಅಭಿಮಾನಿಗಳು ಒತ್ತಾಯ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment