/newsfirstlive-kannada/media/post_attachments/wp-content/uploads/2024/12/PUSPA.jpg)
ಈ ವರ್ಷದ ಬಹು ನಿರೀಕ್ಷಿತ ಚಿತ್ರ ‘ಪುಷ್ಪ 2: ದಿ ರೂಲ್’ (Pushpa 2: The Rule) ನಾಳೆ ರಿಲೀಸ್ ಆಗ್ತಿದೆ. ಅಲ್ಲು ಅರ್ಜುನ್ ಸೇರಿ ಇಡೀ ತಾರಾಗಣ ಚಿತ್ರದ ಬಗ್ಗೆ ಭರ್ಜರಿ ಪ್ರಚಾರ ಮಾಡುತ್ತಿದೆ. ಆ ಮೂಲಕ ಚಿತ್ರತಂಡ ಅಭಿಮಾನಿಗಳಲ್ಲಿ ಸಿನಿಮಾದ ಬಜ್ ಹೆಚ್ಚಿಸಿಕೊಳ್ತಿದೆ.
ಮುಂಗಡ ಬುಕಿಂಗ್‌ನಲ್ಲಿ ಬಂಪರ್ ಗಳಿಕೆ
‘ಪುಷ್ಪ 2: ದಿ ರೂಲ್’ ಟಿಕೆಟ್‌ಗಳು ದುಬಾರಿಯಾಗಿದ್ದರೂ ಅಡ್ವಾನ್ಸ್ ಬುಕ್ಕಿಂಗ್ ನಿರೀಕ್ಷೆಗೂ ಮೀರಿದೆ. ಮಂಗಳವಾರ ಮಧ್ಯಾಹ್ನ 3 ಗಂಟೆಯವರೆಗೆ 13 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಸೋಲ್ಡ್ ಆಗಿವೆ. ಕೇವಲ ಮುಂಗಡ ಬುಕ್ಕಿಂಗ್ ಒಂದರಲ್ಲೇ 41 ಕೋಟಿ ರೂಪಾಯಿ ಹಣ ಗಳಿಸಿದೆ.
ಇದನ್ನೂ ಓದಿ:ಅಲ್ಲು ಅರ್ಜುನ್‌ಗೆ ಎದುರಾಯ್ತು ಕಾನೂನು ಸಂಕಷ್ಟ.. ಪುಷ್ಪಾ 2 ಪ್ರಮೋಷನ್ ವೇಳೆ ದೊಡ್ಡ ಯಡವಟ್ಟು!
ತೆಲಂಗಾಣದಲ್ಲಿ ಹೆಚ್ಚು ಟಿಕೆಟ್‌ಗಳು ಖರೀದಿ ಆಗಿವೆ. ತೆಲಂಗಾಣ ಒಂದರಲ್ಲೇ ಮುಂಗಡ ಬುಕಿಂಗ್‌ನಿಂದ 18.53 ರೂಪಾಯಿ ಗಳಿಸಿದ್ರೆ, ಕರ್ನಾಟಕದಲ್ಲಿ 8.14 ಕೋಟಿ ರೂಪಾಯಿ ಹಣ ಗಳಿಸಿದೆ. ಆ ಮೂಲಕ ಪುಷ್ಪಾ-2 ಬುಕ್ಕಿಂಗ್ನಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದು, ಪುಷ್ಪಾ-2. ತೆಲುಗಿನಲ್ಲಿ ಟಿಕೆಟ್ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಗೋಲ್ಡ್ ಕ್ಲಾಸ್ಗೆ 1800 ರೂಪಾಯಿ ಇದೆ. ಮುಂಬೈ ಮತ್ತು ಬೆಂಗಳೂರಲ್ಲಿ ಒಂದು ಟಿಕೆಟ್ಗೆ 1,600 ಮತ್ತು ರೂ 1,000 ರೂಪಾಯಿ ಇದೆ.
ಸಿಂಗಲ್ ಸ್ಕ್ರೀನ್ ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ದರವನ್ನು ಹೆಚ್ಚಿಸಲು ತಯಾರಕರು ಆಂಧ್ರಪ್ರದೇಶ ಸರ್ಕಾರದಿಂದ ಅನುಮತಿ ಪಡೆದಿದ್ದಾರೆ. ಸಿಂಗಲ್ ಸ್ಕ್ರೀನ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ‘ಪುಷ್ಪ 2’ ಆರು ಪ್ರದರ್ಶನ ಮಾಡಲು ಅಲ್ಲಿನ ಸರ್ಕಾರ ಅನುಮತಿ ನೀಡಿದೆ. ಅವುಗಳ ಬೆಲೆಯೂ ನಿಗದಿಯಾಗಿದೆ. ಸಿಂಗಲ್ ಸ್ಕ್ರೀನ್ ನಲ್ಲಿ ₹ 324.50 ಮತ್ತು ಮಲ್ಟಿಪ್ಲೆಕ್ಸ್ ನಲ್ಲಿ ₹ 413 ಟಿಕೆಟ್ ದರ ಇರಲಿದೆ. ಮುಂದಿನ 12 ದಿನಗಳವರೆಗೆ ಅಂದರೆ ಡಿಸೆಂಬರ್ 6 ರಿಂದ 17 ರವರೆಗೆ ಒಂದೇ ಟಿಕೆಟ್ ದರದಲ್ಲಿ ಪ್ರದರ್ಶನ ಕಾಣಲಿದೆ.
ಇದನ್ನೂ ಓದಿ:ರಶ್ಮಿಕಾ ಡ್ಯಾನ್ಸ್ ಕಿಕ್.. ರಿಲೀಸ್ಗೂ ಮೊದಲೇ ಪುಷ್ಪಾ-2ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್; ದಾಖಲೆಗಳು ಧೂಳೀಪಟ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ