ಪುಷ್ಪಾ-2 ವಿಶ್ವದಾದ್ಯಂತ ರಿಲೀಸ್.. ಫಸ್ಟ್​ ಡೇ, ಫಸ್ಟ್​ ಶೋ ನೋಡಿ ಅಭಿಮಾನಿಗಳು ಥ್ರಿಲ್..!

author-image
Ganesh
Updated On
ಪುಷ್ಪಾ-2 ಚಿತ್ರದ ವಿರುದ್ಧ ಕನ್ನಡಿಗರು ಆಕ್ರೋಶ; ಅಲ್ಲು ಅರ್ಜುನ್ ಹೀಗೆ ಮಾಡಿದ್ದು ಸರಿಯೇ..?
Advertisment
  • ಥಿಯೇಟರ್​​ಗಳಲ್ಲಿ ಈಗಾಗ್ಲೇ ‘ಪುಷ್ಪಾ ದಿ ರೂಲ್​’ ಅಬ್ಬರ ಶುರು!
  • ಬೆಂಗಳೂರಲ್ಲಿ ಪುಷ್ಪಾ-2 ರಾತ್ರಿ ಫ್ಯಾನ್ಸ್ ಶೋ ರದ್ದು, ದುಡ್ಡು ವಾಪಸ್
  • ಫ್ರೀ ಬುಕಿಂಗ್​​​ನಲ್ಲೇ 100 ಕೋಟಿಗೂ ಹೆಚ್ಚು ಕಲೆಕ್ಷನ್

ಬಿಡುಗಡೆಗೂ ಮುನ್ನವೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿರುವ ಪುಷ್ಪಾ-2 ವಿಶ್ವದಲ್ಲೇ ಹಲ್​ಚಲ್ ಸೃಷ್ಟಿಸುವ ಸೂಚನೆ ನೀಡಿದೆ. ಈಗಾಗಲೇ ಪುಷ್ಪಾ-2 ರಿಲೀಸ್ ಆಗಿದ್ದು, ಅಭಿಮಾನಿಗಳು ಫಸ್ಟ್​ ಡೇ ಫಸ್ಟ್​ ಶೋ ಅನ್ನ ನೋಡಿ ಥ್ರಿಲ್ ಆಗಿದ್ದಾರೆ.

ಪುಷ್ಪ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ. ಬಹುನಿರೀಕ್ಷಿತ ಪುಷ್ಪ-2 ಇವತ್ತು ವಿಶ್ವದಾದ್ಯಂತ ಬಿಗ್​ ಸ್ಕ್ರೀನ್​ ಮೇಲೆ ಎಂಟ್ರಿ ಕೊಟ್ಟಿದೆ. ರಿಲೀಸ್​​ಗೂ ಮುನ್ನವೇ ಫ್ರೀ ಬುಕಿಂಗ್​​​ನಲ್ಲೇ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದು, ಮೊದಲ ದಿನವೇ ಪುಷ್ಪಾ-2 ಧೂಳೆಬ್ಬಿಸುವುದು ಕನ್ಫರ್ಮ್​ ಆಗಿದೆ.

ಕರ್ನಾಟಕಲ್ಲೂ ಪುಷ್ಪ-2 ಸಿನಿಮಾ ಅದ್ಧೂರಿಯಾಗಿ ಬಿಡುಗಡೆ ಆಗಿದೆ. ರಾಜಧಾನಿ ಬೆಂಗಳೂರಿನ ಥಿಯೇಟರ್​ಗಳಲ್ಲಿ ಹೊಸ ರಂಗು ಮೂಡಿದೆ. ಬೆಂಗಳೂರಿನಲ್ಲಿ ರಾತ್ರಿ ಫ್ಯಾನ್​ ಶೋ ಪ್ರದರ್ಶನಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿತ್ತು.

ಪುಷ್ಪಾ-2 ರಾತ್ರಿ ಫ್ಯಾನ್ಸ್ ಶೋ ರದ್ದು, ದುಡ್ಡು ವಾಪಸ್!
ಸಿನಿಮಾ ತಂಡ ಪರ್ಮಿಷನ್ ತಗೊಂಡಿರೋದು.. ಬೆಳಗಿನ ಜಾವ 6.30 ರಿಂದ ಶೋ ಶುರು ಮಾಡ್ತೀವಿ ಎಂದಾಗಿತ್ತು. ಆದ್ರೆ ರಾಜ್ಯದಲ್ಲಿ ರಾತ್ರಿ 12 ಕ್ಕೆ.. ಹಾಗೇ 3.30ಕ್ಕೆ ಅಂತಾ ಎರಡು ಶೋಗಳನ್ನ ಪ್ಲಾನ್​ ಮಾಡಿಕೊಂಡಿದ್ದರು. ಇದು ಕಾನೂನು ಬಾಹಿರ ಅನ್ನೋ ವಿಷಯ ಪರಿಗಣಿಸಿದ ಬೆಂಗಳೂರು ಡಿಸಿ ಮಧ್ಯರಾತ್ರಿ 12 ಗಂಟೆ ಹಾಗೂ ಬೆಳಗ್ಗೆ 3 ಗಂಟೆ ಶೋ ಕ್ಯಾನ್ಸಲ್ ಮಾಡಿ ಶಾಕ್​ ಕೊಟ್ಟಿದ್ದಾರೆ.

ಇದನ್ನೂ ಓದಿ:ಪುಷ್ಪಾ-2 ಫ್ಯಾನ್ಸ್‌ಗೆ ಬಿಗ್ ಶಾಕ್‌.. ಮಿಡ್‌ನೈಟ್ ಶೋ ದಿಢೀರ್‌ ಕ್ಯಾನ್ಸಲ್; ರದ್ದಾದ ಶೋ ದುಡ್ಡು ವಾಪಸ್ ಬರುತ್ತಾ?

ಜಿಲ್ಲಾಧಿಕಾರಿಗಳ ಆದೇಶದ ಬೆನ್ನಲ್ಲೇ ಪುಷ್ಪ-2 ಪ್ರದರ್ಶನವನ್ನ ಚಿತ್ರಮಂದಿರಗಳು ರದ್ದು ಮಾಡಿವೆ. ಬೆಳಗ್ಗೆ ಆರು ಗಂಟೆ ಪುಷ್ಪ-2 ಸಿನಿಮಾ ಪ್ರದರ್ಶನ ಮಾತ್ರ ಎಂದಿನಂತೆ ಇರಲಿದೆ. ರದ್ದಾಗಿರುವ ಶೋಗಳ ಅಮೌಂಟ್ ರೀಫಂಡ್ ಮಾಡಬಹುದು. ಇಲ್ಲ ಮುಂದಿನ ಶೋಗೂ ಕಂಟಿನ್ಯೂ ಮಾಡಬಹುದು ಅಂತಾ ಹೇಳಲಾಗಿದೆ. ಬಿಡುಗಡೆಗೂ ಮುನ್ನವೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿರುವ ಪುಷ್ಪಾ-2 ವಿಶ್ವದಲ್ಲೇ ಹಲ್​ಚಲ್ ಸೃಷ್ಟಿಸುವ ಸೂಚನೆ ನೀಡಿದೆ. ಈಗಾಗಲೇ ಪುಷ್ಪಾ-2 ರಿಲೀಸ್ ಆಗಿದ್ದು, ಅಭಿಮಾನಿಗಳು ಫಸ್ಟ್​ ಡೇ ಫಸ್ಟ್​ ಶೋ ಅನ್ನ ನೋಡಿ ಥ್ರಿಲ್ ಆಗಿದ್ದಾರೆ.

ಇದನ್ನೂ ಓದಿ:VIDEO: ಪುಷ್ಪಾ 2 ಪ್ರೀಮಿಯರ್ ಶೋ ವೇಳೆ ಅನಾಹುತ; ಪೊಲೀಸರಿಂದ ಲಾಠಿ ಚಾರ್ಜ್‌!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment