/newsfirstlive-kannada/media/post_attachments/wp-content/uploads/2024/12/PUSPA-1.jpg)
‘Pushpa 2: The Rule’ ಚಿತ್ರ ಬ್ಲಾಕ್ ಬಸ್ಟರ್ ಆಗಿದೆ. ಡಿಸೆಂಬರ್ 05 ರಂದು ಬಿಡುಗಡೆಯಾದ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಕೇವಲ ಮೂರು ದಿನದಲ್ಲಿ 621 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದೀಗ ಸಿನಿ ರಸಿಕರಿಗೆ ಖುಷಿ ಸುದ್ದಿ ಸಿಕ್ಕಿದ್ದು, ಟಿಕೆಟ್ ದರದಲ್ಲಿ ಇಳಿಕೆಯಾಗಿದೆ.
ಇದ್ರಿಂದ ಮತ್ತಷ್ಟು ಸಿನಿ ಪ್ರೇಮಿಗಳು ಥಿಯೇಟರ್ಗೆ ಬರ್ತಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಪ್ರೀಮಿಯರ್ ಶೋಗೆ ಮಾತ್ರ ಟಿಕೆಟ್ ದರವನ್ನು ಹೆಚ್ಚಿಸಲಾಗಿತ್ತು. ಶೀಘ್ರದಲ್ಲೇ ಕಮ್ಮಿ ಬೆಲೆಗೆ ಟಿಕೆಟ್ ದರ ಲಭ್ಯವಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಎರಡು ತೆಲುಗು ರಾಜ್ಯ ಸರ್ಕಾರಗಳು ಪುಷ್ಪ 2 ಟಿಕೆಟ್ ದರ ಹೆಚ್ಚಿಸಲು ಒಪ್ಪಿಕೊಂಡಿದ್ದವು. ಇದರಿಂದ ಡಿಸೆಂಬರ್ 4ರ ವಿಶೇಷ ಪ್ರೀಮಿಯರ್ ಶೋಗೆ ಹೆಚ್ಚುವರಿಯಾಗಿ 800 ರೂಪಾಯಿ ನಿಗದಿಯಾಗಿತ್ತು.
ಇದನ್ನೂ ಓದಿ: Pushpa2: ಪುಷ್ಪ 2 ಮತ್ತೊಂದು ಮೈಲಿಗಲ್ಲು; ಬಾಕ್ಸ್ ಆಫೀಸ್‌ನಲ್ಲಿ ಕಲೆಕ್ಷನ್ ಮಾಡಿದ್ದು ಎಷ್ಟು ಕೋಟಿ?
ನಂತರ ಟಿಕೆಟ್ ದರ ಸಾವಿರ ರೂಪಾಯಿ ದಾಟಿತ್ತು. ಭಾನುವಾರ ಮಲ್ಟಿಪ್ಲೆಕ್ಸ್ನಲ್ಲಿ ‘ಪುಷ್ಪ 2’ ನೋಡಲು 500 ರೂಪಾಯಿ ಹಾಗೂ ಸಿಂಗಲ್ ಸ್ಕ್ರೀನ್ನಲ್ಲಿ 300 ರೂಪಾಯಿಗಿಂತ ಹೆಚ್ಚಿತ್ತು. ಆದರೆ ಈ ವಾರ ಟಿಕೆಟ್ ದರ ಇಳಿಕೆಯಾಗಲಿದೆ. ಡಿಸೆಂಬರ್ 09 ರಿಂದ 16 ರವರೆಗೆ ಸಿಂಗಲ್ ಸ್ಕ್ರೀನ್ ನಲ್ಲಿ ರೂ.105 ಮತ್ತು ಮಲ್ಟಿಪ್ಲೆಕ್ಸ್ ನಲ್ಲಿ ರೂ.150 ಹೆಚ್ಚಳ ಮಾಡಲು ಆಂಧ್ರ, ತೆಲಂಗಾಣ ಸರ್ಕಾರಗಳು ಅನುಮತಿ ನೀಡಿವೆ. ಬೆಂಗಳೂರಲ್ಲಿ ಬಾಲ್ಕನಿಗೆ 200 ರೂಪಾಯಿಂದ ಇದ್ದರೆ, ಮಿಡಲ್ ಕ್ಲಾಸ್ ಟಿಕೆಟ್ 150 ರೂಪಾಯಿಂದ ಟಿಕೆಟ್ ಸಿಗ್ತಿದೆ. ಮಲ್ಟಿಪ್ಲೆಕ್ಸ್ಗಳಲ್ಲಿ 210 ರೂಪಾಯಿಯಿಂದ ಟಿಕೆಟ್ ಲಭ್ಯವಿದೆ.
ಇದನ್ನೂ ಓದಿ:ಪುಷ್ಪ 2 ಸಿನಿಮಾದ ಮೂರು ನಿಮಿಷದ ಹಾಡಿಗೆ 2 ಕೋಟಿ ಸಂಭಾವನೆ ಪಡೆದ ಕನ್ನಡತಿ..!
Attention🚨 - Nizam ticket price reduction from Monday onwards #Pushpa2
Multiplex - 395/-
Single screen - 200/-
Book your tickets Now 🙂 pic.twitter.com/pgpT2NLoiR— The Vibe Hub Telugu (@thevibe_reviews) December 8, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ