/newsfirstlive-kannada/media/post_attachments/wp-content/uploads/2024/11/ALLU_ARJUN_RASHMIKA.jpg)
ತೆಲುಗು ಸೂಪರ್ ಸ್ಟಾರ್ ನಟನೆಯ ಬಹುನಿರೀಕ್ಷಿತ ಪುಷ್ಪ- 2 ಸಿನಿಮಾದ ಟ್ರೇಲರ್ ಪಾಟ್ನಾದಲ್ಲಿ ರಿಲೀಸ್ ಮಾಡಲಾಗಿದೆ. ನಿರೀಕ್ಷೆಯಂತೆ ಟ್ರೇಲರ್ ಅಭಿಮಾನಿಗಳ ಕಿಕ್ಕೇರಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೈಯರ್ ಕ್ರಿಯೇಟ್ ಮಾಡಿದೆ. ಅಲ್ಲು ಅರ್ಜುನ್ ಆ್ಯಕ್ಷನ್ಗೆ, ಶ್ರೀವಲ್ಲಿಯ ಆ್ಯಕ್ಟಿಂಗ್ ಫ್ಯಾನ್ಸ್ ಫಿದಾ ಆಗಿದ್ದು, ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.
ಪುಷ್ಪ ಅಂದ್ರೆ ಫ್ಲವರ್ ಅನ್ಕೊಂಡ್ಯಾ? ಇದು ಫ್ಲವರ್ ಅಲ್ಲಾ, ವೈಲ್ಡ್ ಫೈಯರ್. ಮಾಸ್ ಲುಕ್ನಲ್ಲಿ ಅಲ್ಲು ಅರ್ಜುನ್ ಆ್ಯಕ್ಟಿಂಗ್ ಸಖತ್ ಆಗಿದೆ. ವೈಫ್ ರೋಲ್ನಲ್ಲಿ ರಶ್ಮಿಕಾ ಸೂಪರ್ ಆಗಿ ಮಿಂಚಿದ್ದಾರೆ. ಟ್ರೇಲರ್ನಲ್ಲಿ ಆ್ಯಕ್ಷನ್ ಜೊತೆ ಮಾಸ್ ಡೈಲಾಗ್ಗಳು ಅಭಿಮಾನಿಗಳಿಗೆ ಮನರಂಜನ ನೀಡುವುದು ಪಕ್ಕಾ. ಸಸ್ಪೆನ್ಸ್ ಜೊತೆ ಆಗಾಗ ಫೈಟಿಂಗ್ಗಳು. ಅಲ್ಲಲ್ಲಿ ಶ್ರೀವಲ್ಲಿ ಜೊತೆಗಿನ ರೊಮ್ಯಾನ್ಸ್.. ಅಬ್ಬಬ್ಬಾ ಏನಿಲ್ಲ ಹೇಳಿ, ಈ ಟ್ರೇಲರ್ನಲ್ಲಿ.
ಪಾಟ್ನಾದಲ್ಲಿ ಅದ್ಧೂರಿಯಾಗಿ ಪುಷ್ಪಾ 2 ಟ್ರೇಲರ್ ರಿಲೀಸ್
ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ಕನ್ನಡದ ಕಿರಿಕ್ ರಾಣಿ ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ2 ಸಿನಿಮಾದ ಟ್ರೇಲರ್ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆದ ಗ್ರ್ಯಾಂಡ್ ಈವೆಂಟ್‌ನಲ್ಲಿ ಪುಷ್ಪ2 ಟ್ರೇಲರ್ ಬಿಡುಗಡೆಯಾಗಿದ್ದು, ನಿರೀಕ್ಷೆಯಂತೆ ಟ್ರೇಲರ್ ಅದ್ಭುತವಾಗಿ ಮೂಡಿ ಬಂದಿದೆ.
ಅಲ್ಲು & ರಶ್ಮಿಕಾ ಮಂದಣ್ಣ ನೋಡಲು ಕಿಕ್ಕಿರಿದು ಸೇರಿದ್ದ ಫ್ಯಾನ್ಸ್..!
ಕಾರ್ಯಕ್ರಮದಲ್ಲಿ ಎಲ್ಲಿ ನೋಡಿದರೂ ಜನವೋ ಜನ, ಎಲ್ಲೆಲ್ಲೂ ಜನ. ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನೋಡಲು ಗಾಂಧಿ ಮೈದಾನದಲ್ಲಿ ಲಕ್ಷಾಂತರ ಜನ ಕಿಕ್ಕಿರಿದು ಸೇರಿದ್ರು. ತಮ್ಮ ನೆಚ್ಚಿನ ನಟರನ್ನ ನೋಡೋಕೆ ನೂರಾರು ಜನ ಟವರ್ ಏರಿದ್ದ ಪ್ರಸಂಗ ಕೂಡ ನಡೀತು. ಒಂದು ಕಡೆ, ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದ್ರೆ, ಜನದಟ್ಟಣೆ ಹೆಚ್ಚಾಗಿದ್ದರಿಂದ ಜನರು ಚಪ್ಪಲಿ, ಕಲ್ಲು ತೂರಿದರು.
ಪುಷ್ಪ ಪ್ರೀಕ್ವೆಲ್ಗಿಂತ ಪಾರ್ಟ್-2ಗೆ ಡಬಲ್ ಹೈಪ್ ಕ್ರಿಯೇಟ್ ಆಗಿದ್ದು, ಸಿನಿಮಾ ರಿಲೀಸ್ ಆಗೋ ಮುಂಚೆನೇ 1,000 ಕೋಟಿ ಬಿಸಿನೆಸ್ ಮಾಡಿದೆ ಅನ್ನೋ ಟಾಕ್ ಇದೆ. ಈ ಟ್ರೇಲರ್ ನೋಡಿದ್ರೆ, ಪುಷ್ಪರಾಜ್ ಗ್ಯಾಂಗ್ಸ್ಟರ್ ಆದ ನಂತರದ ಹವಾ. ಜೊತೆಗೆ ದುಡ್ಡು ಮಾಡಬೇಕು ಅನ್ನೋ ಆಸೆ.
ಇದನ್ನೂ ಓದಿ:ಹಾವೇರಿಯಲ್ಲಿ ಹೋರಿ ಬೆದರಿಸುವ ವೇಳೆ ಅನಾಹುತ; ಕಿತ್ತು ಬಂತು ಓರ್ವನ ಕಣ್ಣು.. 30 ಮಂದಿಗೆ ಗಾಯ
ಇನ್ನು, ಕಳೆದ ಬಾರಿ ಲವರ್ಸ್ ಆಗಿ ಕಾಣಿಸಿಕೊಂಡಿದ್ದ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಈಗ ಗಂಡ ಹೆಂಡತಿಯಾಗಿದ್ದಾರೆ. ಅವರ ಕೋಳಿ ಜಗಳ ಪಾರ್ಟ್-2ನಲ್ಲೂ ಮತ್ತಷ್ಟು ಮನೋರಂಜನೆ ಕೊಡೋದ್ರಲ್ಲಿ ಡೌಟ್ ಇಲ್ಲ. ಪುಷ್ಪ 2 ಟ್ರೇಲರ್ ಕೆಲವೇ ಗಂಟೆಗಳಲ್ಲಿ ಹಿಂದಿಯಲ್ಲಿ 12 ಮಿಲಿಯನ್ ಹಾಗೂ ತೆಲುಗಿನಲ್ಲಿ 25 ಮಿಲಿಯನ್ಗೂ ಹೆಚ್ಚು ವೀವ್ಸ್ ಪಡೆದಿದೆ. ಆದ್ರೆ ಈ ಟ್ರೇಲರ್ನ ನೋಡಿದ ಜನ ಮಾತ್ರ ಡಿಸೆಂಬರ್ 5ರವರೆಗೂ ಹೇಗಪ್ಪಾ ವೇಟ್ ಮಾಡೋದು ಅಂತ ಚಡಪಡಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ