/newsfirstlive-kannada/media/post_attachments/wp-content/uploads/2024/12/PUSPA-4.jpg)
‘ಪುಷ್ಪ 2: ದಿ ರೂಲ್’ ಪ್ರಪಂಚದಾದ್ಯಂತ ಸದ್ದು ಮಾಡ್ತಿದೆ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಚಿತ್ರವು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಜೊತೆಗೆ ಬಾಕ್ಸ್ ಆಫೀಸ್‌ನಲ್ಲಿಯೂ ಸಖತ್ ಸೌಂಡ್ ಮಾಡ್ತಿದೆ.
ಅಭಿಮಾನಿಗಳು ತುಂಬಾ ದಿನಗಳಿಂದ ‘ಪುಷ್ಪ 2: ದಿ ರೂಲ್’ ಸಿನಿಮಾಗೆ ಕಾಯುತ್ತಿದ್ದರು. ಡಿಸೆಂಬರ್ 5 ರಂದು ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಿದ್ದು, ವಿಶ್ವದಾಖಲೆಯತ್ತ ಮುನ್ನುಗ್ಗುತ್ತಿದೆ. ವಿಶೇಷ ಅಂದರೆ ಬಿಡುಗಡೆಯಾದ ಎರಡೇ ದಿನಕ್ಕೆ ಚಿತ್ರಕ್ಕೆ ಹೂಡಿರುವ ಬಂಡವಾಳವನ್ನು ಕ್ಲೀಯರ್ ಮಾಡುವ ಹತ್ತಿರದಲ್ಲಿದೆ.
ಇದನ್ನೂ ಓದಿ:ಅಲ್ಲು ಅರ್ಜುನ್ to ಶ್ರೀಲಿಲಾ! ಪುಷ್ಪ 2 ಸಿನಿಮಾಗೆ ಯಾವ ನಟರು ಎಷ್ಟು ಕೋಟಿ ಸಂಭಾವನೆ ಪಡೆದರು?
ಸ್ಯಾಕ್‌ನಿಲ್ಕ್ (Sacnilk) ವರದಿಯ ಪ್ರಕಾರ, ‘ಪುಷ್ಪಾ 2: ದಿ ರೂಲ್’ ಎರಡು ದಿನಗಳಲ್ಲಿ ವಿಶ್ವದಾದ್ಯಂತ ಒಟ್ಟು 400 ಕೋಟಿ ರೂಪಾಯಿ ಗಳಿಸಿದೆ. ಚಿತ್ರದ ನಿರ್ಮಾಣ ಸಂಸ್ಥೆ ಮೈತ್ರಿ (Mythri Movie Maker) ಅಧಿಕೃತ ಮಾಹಿತಿ ಪ್ರಕಾರ, ಮೊದಲ ದಿನದಲ್ಲಿ ವಿಶ್ವದಾದ್ಯಂತ 294 ಕೋಟಿ ರೂಪಾಯಿಗಳ ಅದ್ಭುತ ಕಲೆಕ್ಷನ್ ಮಾಡಿದೆ ಎಂದು ಹೇಳಿದೆ.
ಭಾರತದಲ್ಲಿ 2ನೇ ದಿನ 90.1 ಕೋಟಿ
400 ಕೋಟಿ ಕ್ಲಬ್‌ಗೆ ಪ್ರವೇಶಿಸುವ ಮೂಲಕ 'ಪುಷ್ಪ 2: ದಿ ರೂಲ್' ಅನೇಕ ಬ್ಲಾಕ್‌ಬಸ್ಟರ್ ಚಲನಚಿತ್ರಗಳನ್ನು ಸೋಲಿಸಿದೆ. ‘ಭೂಲ್ ಭುಲೈಯಾ 3’ (388.9 ಕೋಟಿ), ‘ಸಿಂಗಮ್ ಎಗೇನ್’ (372.30 ಕೋಟಿ), ‘ಸಿಂಬಾ’ (390 ಕೋಟಿ) ಮತ್ತು ‘ಕಬೀರ್ ಸಿಂಗ್’ (377 ಕೋಟಿ) ಚಿತ್ರಗಳನ್ನು ಸೋಲಿಸಿದೆ.
ಇದನ್ನೂ ಓದಿ:ಪುಷ್ಪಾ-2 ನೋಡಲು ಹೋಗಿ ಮೂವರು ದುರಂತ ಅಂತ್ಯ; 25 ಲಕ್ಷ ಪರಿಹಾರ ಘೋಷಿಸಿದ ಅಲ್ಲು ಅರ್ಜುನ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ