OTTನಲ್ಲಿ ಪುಷ್ಪ 2; ಥಿಯೇಟರ್​ನಲ್ಲಿ ನೋಡಿರದ 20 ನಿಮಿಷದ ದೃಶ್ಯ ಕೂಡ ಇದೆ..!

author-image
Ganesh
Updated On
OTTನಲ್ಲಿ ಪುಷ್ಪ 2; ಥಿಯೇಟರ್​ನಲ್ಲಿ ನೋಡಿರದ 20 ನಿಮಿಷದ ದೃಶ್ಯ ಕೂಡ ಇದೆ..!
Advertisment
  • ಈ ದಿನದಿಂದ ಪುಷ್ಪ 2 ಹೊಸ ಸಂಚಲನ ಸೃಷ್ಟಿಸಲಿದೆ
  • ಡಿಸೆಂಬರ್ 5 ರಂದು ಥಿಯೇಟರ್​​ಗೆ ಬಂದಿದ್ದ ಸಿನಿಮಾ
  • 1800ಕ್ಕೂ ಹೆಚ್ಚು ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವ ಚಿತ್ರ

ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2: ದಿ ರೂಲ್’ ಡಿಸೆಂಬರ್ 5 ರಂದು ರಿಲೀಸ್ ಆಗಿತ್ತು. ಬಿಡುಗಡೆಯಾಗಿ 53 ದಿನ ಕಳೆದರೂ ಇನ್ನೂ ಸದ್ದು ಮಾಡುತ್ತಿದೆ. ಇದೀಗ ‘ಪುಷ್ಪ 2: ದಿ ರೂಲ್’ OTT ಕಾದು ಕೂತವರಿಗೆ ಗುಡ್​ನ್ಯೂಸ್ ಸಿಕ್ಕಿದೆ.

ಯಾವುದರಲ್ಲಿ ರಿಲೀಸ್..?

‘ಪುಷ್ಪ 2’ ಜನವರಿ 30 ಮತ್ತು 31ರ ನಡುವೆ OTT ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಚಿತ್ರದ ಥಿಯೇಟರ್​  ನಂತರದ ಡಿಜಿಟಲ್ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಭಾರೀ ಬೆಲೆಗೆ ಖರೀದಿಸಿದೆ. 56 ದಿನಗಳು ಪೂರೈಸಿದ ನಂತರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಪುಷ್ಪ-2 ತಯಾರಕರು ಹಿಂದೆ ಹೇಳಿದ್ದರು.

ಇದೀಗ ಚಿತ್ರವು ಈ ವಿಂಡೋ ಪೂರ್ಣಗೊಳಿಸಿದೆ. ಹೀಗಾಗಿ OTTನಲ್ಲಿ ಬಿಡುಗಡೆಯ ಸಾಧ್ಯತೆ ಹೆಚ್ಚಾಗಿದೆ. ನೆಟ್‌ಫ್ಲಿಕ್ಸ್ ಪುಷ್ಪಾ 2 ರ ವಿಶೇಷ ವಿಸ್ತೃತ ಕಟ್ ಬಿಡುಗಡೆ ಆಗಲಿದೆ ಎಂಬ ವರದಿಗಳಿವೆ. ಅಂದರೆ ಇದು 20 ನಿಮಿಷಗಳ ನೋಡದ ತುಣುಕನ್ನು ಸಹ ಒಳಗೊಂಡಿರುತ್ತದೆ.

ಬಾಕ್ಸ್ ಆಫೀಸ್ ಕಲೆಕ್ಷನ್

‘ಪುಷ್ಪ 2’ ದೇಶದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿದೆ. ಬಿಡುಗಡೆಯಾದ 53 ದಿನಗಳಲ್ಲಿ ಭಾರತೀಯ ಬಾಕ್ಸ್ ಆಫೀಸ್​ನಲ್ಲಿ 1232.30 ಕೋಟಿ ಗಳಿಸಿದೆ. ವಿಶ್ವದಾದ್ಯಂತ 1800 ಕೋಟಿಗೂ ಹೆಚ್ಚು ಹಣ ಗಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment