ಕಾಲ್ತುಳಿತ ದುರಂತಕ್ಕೆ ಮರುಗಿದ ಪುಷ್ಪರಾಜ್; ಜೀವ ಕಳೆದುಕೊಂಡ ಕುಟುಂಬಕ್ಕೆ ಎಷ್ಟು ಹಣ ಕೊಟ್ರು?

author-image
Ganesh
Updated On
ಒಂದು ರಾತ್ರಿ ಜೈಲಿನಲ್ಲಿ ಕಳೆದ ಅಲ್ಲು ಅರ್ಜುನ್; ಬೆಳ್ಳಂಬೆಳಗ್ಗೆ ಅಭಿಮಾನಿಗಳಿಗೆ ಗುಡ್​​ನ್ಯೂಸ್​..!
Advertisment
  • ಹೈದರಾಬಾದ್ ಸಂಧ್ಯಾ ಥಿಯೇಟರ್​ನಲ್ಲಿ ಭಾರೀ ದುರಂತ
  • ಸಂತ್ರಸ್ತ ಕುಟುಂಬಕ್ಕೆ ಎಲ್ಲಾ ರೀತಿಯ ನೆರವು ನೀಡುವ ಭರವಸೆ
  • ಶೀಘ್ರದಲ್ಲೇ ನೊಂದ ಕುಟುಂಬವನ್ನು ಭೇಟಿ ಮಾಡ್ತೀನಿ ಎಂದ ಬನ್ನಿ

ಟಾಲಿವುಡ್ ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಸಿನಿಮಾ ಡಿಸೆಂಬರ್ 05 ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಆದ್ರೆ ಹೈದರಾಬಾದ್‌ನ RTC ಕ್ರಾಸ್ ರೋಡ್​ನಲ್ಲಿರೋ ಸಂಧ್ಯಾ ಥಿಯೇಟರ್​ನಲ್ಲಿ ಕಾಲ್ತುಳಿತಕ್ಕೆ ಸಿಲುಕಿ ರೇವತಿ ಎಂಬ ಮಹಿಳೆ ಜೀವ ಕಳೆದುಕೊಂಡಿದ್ದಾರೆ.

ಮಹಿಳೆ ಸಾವಿನ ಬಗ್ಗೆ ನಟ ಅಲ್ಲು ಅರ್ಜುನ್ ವಿಡಿಯೋ ಮೂಲಕ ಪ್ರತ್ರಿಕ್ರಿಯಿಸಿದ್ದು, ಮಹಿಳೆಯ ಕುಟುಂಬಕ್ಕೆ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ರೇವತಿ ಅವರ ಸಾವಿಗೆ ನಾನು ಸಂತಾಪ ಸೂಚಿಸುತ್ತೇನೆ. ನನ್ನ ಪರವಾಗಿ ರೇವತಿ ಅವರ ಕುಟುಂಬಕ್ಕೆ 25 ಲಕ್ಷ ರೂಪಾಯಿ ನೀಡುವೆ.

ಇದನ್ನೂ ಓದಿ: ಪುಷ್ಪಾ-2 ನೋಡಲು ಹೋಗಿ ದುರಂತ ಅಂತ್ಯ ಕಂಡ ರೇವತಿ.. ಪತ್ನಿ ತ್ಯಾಗದ ಕಥೆಯನ್ನು ಹೇಳಿ ಕಣ್ಣೀರಿಟ್ಟ ಪತಿ

ನಮ್ಮ ತಂಡದಿಂದ ಯಾವುದೇ ಸಹಾಯವನ್ನು ನೀಡಲು ನಾವು ಸಿದ್ಧರಿದ್ದೇವೆ. ಅವರಿಗೆ ನನ್ನ ಕೈಲಾದಷ್ಟು ಸಹಾಯ ಮಾಡುತ್ತೇನೆ. ಶೀಘ್ರದಲ್ಲೇ ರೇವತಿ ಕುಟುಂಬವನ್ನು ಖುದ್ದಾಗಿ ಭೇಟಿ ಮಾಡುವುದಾಗಿ ಬನ್ನಿ ಭರವಸೆ ನೀಡಿದ್ದಾರೆ. ಫ್ಯಾನ್ಸ್​ ಜೊತೆ ಸಿನಿಮಾ ವೀಕ್ಷಣೆಗೆ ನಟ ಅಲ್ಲು ಅರ್ಜುನ್,​ ಪತ್ನಿ-ಮಕ್ಕಳೊಂದಿಗೆ ಬಂದಿದ್ರು. ತಮ್ಮ ನೆಚ್ಚಿನ ನಟನನ್ನು ನೋಡಲು ಫ್ಯಾನ್ಸ್​ ಕಿಕ್ಕಿರಿದು ತುಂಬಿದ್ರು. ಈ ವೇಳೆ ಥಿಯೇಟರ್​ನ ಆವರಣದಲ್ಲಿ ಉಂಟಾದ ಕಾಲ್ತುಳಿತ ಸಂಭವಿಸಿತ್ತು.

ಅಲ್ಲು ಅರ್ಜುನ್ ವಿರುದ್ಧ ಕೇಸ್
ಅಲ್ಲು ಅರ್ಜುನ್ ಆಗಮನದ ಬಗ್ಗೆ ಪೊಲೀಸರಿಗೆ ಮಾಹಿತಿ ಇರಲಿಲ್ಲ. ಅಲ್ಲು ಅರ್ಜುನ್ ತಮ್ಮ ಖಾಸಗಿ ಭದ್ರತೆಯೊಂದಿಗೆ ಥಿಯೇಟರ್ ಆವರಣವನ್ನ ಪ್ರವೇಶಿಸುತ್ತಿದ್ದಂತೆ ಕಾಲ್ತುಳಿತ ಸಂಭವಿಸಿದೆ. ಅವರ ವೈಯಕ್ತಿಕ ಭದ್ರತಾ ಸಿಬ್ಬಂದಿ ತಳ್ಳಾಟದಿಂದ ನೂಕು ನುಗ್ಗಲು ಇನ್ನಷ್ಟು ಉಲ್ಬಣವಾಗಿದೆ ಎಂಬ ಆರೋಪ ಇದೆ. BNS ಕಾಯಿದೆಯ U/s 105 ಮತ್ತು 118(1) ಹಾಗೂ r/w 3(5)ರಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ತಗ್ಗೋದೇ ಇಲ್ಲ.. ಇತಿಹಾಸದಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಪುಷ್ಪ 2; ಎಷ್ಟು ಕೋಟಿ ಗೊತ್ತಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment