/newsfirstlive-kannada/media/post_attachments/wp-content/uploads/2024/11/PUTIN-DOG.jpg)
ಸದ್ಯ ಜಾಗತಿಕ ಮಟ್ಟದಲ್ಲಿ 2007ರಲ್ಲಿ ನಡೆದ ಒಂದು ಘಟನೆ ದೊಡ್ಡದಾಗಿ ಸುದ್ದಿ ಮಾಡುತ್ತಿದೆ. ಅಂದು ನಡೆದ ಘಟನೆಗೆ ಇಂದು ರಷ್ಯಾ ಅಧ್ಯಕ್ಷ ವ್ಲಾಡಮೀರ್ ಪುಟಿನ್ ಕ್ಷಮಾಪಣೆಯನ್ನು ಕೇಳುತ್ತಿದ್ದಾರೆ. ಅಸಲಿಗೆ ಆಗಿದ್ದೇನು ಎಂಬುದನ್ನು ನೋಡಿದರೆ ಈ ಎಲ್ಲಾ ಬೆಳವಣಿಗೆಗಳಿಗೆ ಕಾರಣ ಪುಟಿನ್ ಅವರ ನೆಚ್ಚಿನ ಶ್ವಾನ.
2007ರಲ್ಲಿ ಜರ್ಮನ್ನ ಅಂದಿನ ಚಾನ್ಸಲರ್ ಎಂಜೆಲಾ ಮಾರ್ಕೆಲ್ ರಷ್ಯಾಗೆ ಭೇಟಿ ನೀಡಿದ್ದರು. ಅವರ ಭೇಟಿಯ ಸಮಯದಲ್ಲಿ ವ್ಲಾಡಮಿರ್ ಪುಟಿನ್ ಅವರ ಶ್ವಾನ ಎಂಜೆಲಾ ಮಾರ್ಕೆಲ್ ಅವರ ಬಳಿ ಕುಳಿತುಕೊಂಡಿತ್ತು. ಮೊದಲೇ ಪ್ರಾಣಿಗಳೆಂದರೆ ಬೆಚ್ಚಿ ಬೀಳುವ ಎಂಜೆಲಾ ಮಾರ್ಕೆಲ್ ವ್ಲಾಡಮಿರ್ ಪುಟಿನ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು. ವ್ಲಾಡಮಿರ್ ಪುಟಿನ್ ಅಂದು ತಮ್ಮ ಅಧಿಕಾರದ ಪ್ರದರ್ಶನ ಮಾಡಿದ್ದರು ಎಂದು ಹೇಳಿ ವಿವಾದವನ್ನು ಸೃಷ್ಟಿಸಿದ್ದರು.
ಇದನ್ನೂ ಓದಿ: 16 ವರ್ಷದ ಒಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್.. ಮಸೂದೆ ಅಂಗೀಕರಿಸಿದ ಪಾರ್ಲಿಮೆಂಟ್
ಕ್ಷಮೆ ಯಾಚಿಸಿದ ವ್ಲಾಡಮಿರ್ ಪುಟಿನ್
ಈ ಬಗ್ಗೆ ಮಾತನಾಡಿರುವ ರಷ್ಯಾದ ಅಧ್ಯಕ್ಷ ವ್ಲಾಡಮಿರ್ ಪುಟಿನ್ ಈ ಮಾಧ್ಯಮಗಳ ಮೂಲಕ ನಾನು ಎಂಜೆಲಾ ಮಾರ್ಕೆಲಗೆ ಕ್ಷಮೆಯನ್ನು ಯಾಚಿಸುತ್ತೇನೆ ನನಗೆ ನಿಜಕ್ಕೂ ಗೊತ್ತಿರಲಿಲ್ಲ ಅವರು ಪ್ರಾಣಿಗಳಿಗೆ ಹೆದರುತ್ತಾರೆ ಎಂದು. ನಾನು ಆ ಸಮಯದಲ್ಲಿ ಒಂದು ಒಳ್ಳೆಯ ವಾತಾವರಣ ನಿರ್ಮಾಣವಾಗಲಿ ಎಂದು ಶ್ವಾನವನ್ನು ಬರಲು ಅನುಮತಿ ನೀಡಿದ್ದೆ ಹೊರತು ಬೇರಾವ ದುರುದ್ದೇಶದಿಂದಲೂ ಅಲ್ಲ ಎಂದು ಹೇಳಿದ್ದಾರೆ.
ಖಜಕ್ ರಾಜಧಾನಿ ಅಸ್ತಾನಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಷ್ಯಾ ಅಧ್ಯಕ್ಷ ಪುಟಿನ್, ನೀವು ಮತ್ತೊಮ್ಮೆ ರಷ್ಯಾಗೆ ದಯವಿಟ್ಟು ಭೇಟಿ ನೀಡಿ ಇಂತಹ ಸನ್ನಿವೇಶಗಳು ಮತ್ತೆ ಸೃಷ್ಟಿಯಾಗದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಸದ್ಯ ಈ ಒಂದು ಕ್ಷಮಾಪಣೆ ಈಗ ಸೋಷಿಯಲ್ ಮೀಡಿಯಾದಲ್ಲಿ 2007ರಂದು ನಡೆದ ಆ ಘಟನೆಯ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಲು ಕಾರಣವಾಗುತ್ತಿದೆ. ಪುಟಿನ್ ಅವರ ಕಪ್ಪು ಲ್ಯಾಬರಡರ್ ಶ್ವಾನ ಎಂಜೆಲಾ ಮಾರ್ಕೆಲ್ ಸುತ್ತ ಸುತ್ತಾಡುತ್ತಿರುವುದು ವಿಡಿಯೋದಲ್ಲಿ ಕಂಡು ಬರುತ್ತಿದೆ.
ಇದನ್ನೂ ಓದಿ:ಇದು ಬೀಳುವ ಮನೆಯಲ್ಲ, ಬಾಳುವ ಕಟ್ಟಡ; 200 ವರ್ಷ ಅಲುಗಾಡದ ನಿವಾಸ ನಿರ್ಮಿಸುತ್ತಿರುವ ವಾಸ್ತುಶಿಲ್ಪಿ
2007ರಲ್ಲಿ ಇದೇ ವಿಷಯದ ಕುರಿತು ಬೇಸರ ವ್ಯಕ್ತಪಡಿಸಿದ್ದ ಎಂಜೆಲಾ, ನಾನು ಪುಟಿನ್ ಮುಖ ಭಾವದಲ್ಲಿ ಅಂದು ವಿಕೃತ ಆನಂದವನ್ನು ಅನುಭವಿಸುತ್ತಿರುವುದನ್ನು ಕಂಡೆ. ಪುಟಿನ್ ತಮ್ಮ ಅಧಿಕಾರದ ಪ್ರದರ್ಶನ ಮಾಡಿದ್ದಾರೆ ಎಂದು ಹೇಳಿ ವಿವಾದ ಹುಟ್ಟು ಹಾಕಿದ್ದರು. ಅಂದು ನಡೆದ ಘಟನೆಗೆ ಸದ್ಯ ಪುಟಿನ್ ಎಂಜೆಲಾ ಅವರನ್ನು ಮತ್ತೊಮ್ಮೆ ಕ್ಷಮೆ ಕೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ