/newsfirstlive-kannada/media/post_attachments/wp-content/uploads/2024/11/Vladimir-Putin.jpg)
- ಮಧ್ಯಪ್ರಾಚ್ಯದಲ್ಲಿ ಇರಾನ್-ಇಸ್ರೇಲ್ ನಡುವೆ ಪ್ರತಿಷ್ಠೆಯ ಯುದ್ಧ
- ಇಸ್ರೇಲ್ ಸಹಾಯಕ್ಕೆ ಬಂದು ಇರಾನ್ ಮೇಲೆ ಅಮೆರಿಕ ದಾಳಿ
- ಅಮೆರಿಕ ದಾಳಿ ಬೆನ್ನಲ್ಲೇ ರಷ್ಯಾ ಇರಾನ್ಗೆ ಬೆಂಬಲ ನೀಡುತ್ತಾ?
ಇದು ಪ್ರತಿಷ್ಠೆಯ ಕದನ.. ಇರಾನ್​ ಪರಮಾಣು ಪ್ರತಿಷ್ಠೆ ಮಧ್ಯಪ್ರಾಚ್ಯದಲ್ಲಿ ಸ್ಫೋಟಕಗಳ ಬೆಂಕಿ ಸುರಿಯುವಂತೆ ಮಾಡಿದೆ. ಇಸ್ರೇಲ್​ಗೆ ಅಮೆರಿಕ ಸಾಥ್ ನೀಡಿದ್ದು ಜಂಟಿಯಾಗಿ ಇರಾನ್ ವಿರುದ್ಧ ಸೈರನ್ ಮೊಳಗಿಸಿವೆ. ಇರಾನ್​ನ ಮೂರು ಪರಮಾಣು ನೆಲೆಗಳನ್ನು ಅಮೆರಿಕ ಸೇನೆ ಧ್ವಂಸಗೊಳಿಸಿದ್ದು ಈ ಮಧ್ಯೆ ಇರಾನ್​ ಕೂಡ ಪ್ರತೀಕಾರದ ದಾಳಿ ನಡೆಸ್ತಿದೆ.
ಇದರ ಬೆನ್ನಲ್ಲೇ ಇರಾನ್​ನ ವಿದೇಶಾಂಗ ಸಚಿವರು ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಮಾತುಕತೆ ನಡೆಸಿದ್ದಾರೆ. ಅಮೆರಿಕ ಎಂಟ್ರಿಯನ್ನು ರಷ್ಯಾ ಈ ಹಿಂದೆಯೇ ವಿರೋಧಿಸಿತ್ತು. ಅಲ್ಲದೇ ಇಸ್ರೇಲ್, ಇರಾನ್ ಮೇಲೆ ನಡೆಸ್ತಿದ್ದ ದಾಳಿಯನ್ನೂ ಖಂಡಿಸಿ ಇರಾನ್ ಪರ ರಷ್ಯಾ ಬ್ಯಾಟ್ ಬೀಸಿತ್ತು. ಹೀಗಾಗಿ ರಷ್ಯಾ ಇರಾನ್ ಪರ ಸ್ಟ್ಯಾಂಡ್ ತೆಗೆದುಕೊಳ್ಳಲಿದೆ. ಇಸ್ರೇಲ್ ಜೊತೆಗಿನ ಹೋರಾಟದಲ್ಲಿ ನೇರವಾಗಿ ಸಹಾಯ ಮಾಡಲಿದೆ ಎಂದು ಹೇಳಲಾಗಿತ್ತು.
ಆದರೆ ರಷ್ಯಾದ ನಿಲುವು ಇರಾನ್ ಪರವಾಗಿದ್ದರೂ ಸಹಾಯ ಮಾಡುತ್ತಿಲ್ಲ ಎಂದು ಪುಟಿನ್ ತಿಳಿಸಿದ್ದಾರೆ. ಯಾಕೆ ತಾವು ಇರಾನ್​ಗೆ ಸಹಾಯ ಮಾಡ್ತಿಲ್ಲ ಎಂದು ತಿಳಿಸಿರುವ ರಷ್ಯಾ ಅಧ್ಯಕ್ಷ, ಇಸ್ರೇಲ್ ದೇಶದಲ್ಲಿ 2 ಮಿಲಿಯನ್ ರಷ್ಯಾ ದೇಶದ ಜನರು ವಾಸಿಸುತ್ತಿದ್ದಾರೆ. ಇಸ್ರೇಲ್ ಈಗ ಬಹುತೇಕ ರಷ್ಯನ್ ಮಾತನಾಡುವ ಜನರಿಂದ ತುಂಬಿದೆ. ಇಸ್ರೇಲ್‌ನ ಶೇ.15 ರಷ್ಟು ಜನರು ರಷ್ಯಾದವರು. ಇದನ್ನು ಪರಿಗಣನೆಗೆ ತೆಗೆದುಕೊಂಡು ನಾವು ಇರಾನ್​ಗೆ ಸಹಾಯ ಮಾಡುತ್ತಿಲ್ಲ ಎಂದು ಪುಟಿನ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ