/newsfirstlive-kannada/media/post_attachments/wp-content/uploads/2024/10/Puttakkana-Makkalu-Sneha.jpeg)
ಕನ್ನಡ ಕಿರುತೆರೆಯಲ್ಲಿ ಪುಟ್ಟಕ್ಕನ ಮಕ್ಕಳು ಒನ್​ ಆಫ್​ ದಿ ಪಾಪೂಲರ್​ ಧಾರಾವಾಹಿ. ವೀಕ್ಷಕರಿಗಂತೂ ತುಂಬಾನೇ ಹತ್ತಿರವಾದ ಪಾತ್ರಗಳು ಮೂವರು ಹೆಣ್ಮಕ್ಕಳು. ಅದರಲ್ಲೂ ಸ್ನೇಹ ಪಾತ್ರ ಯುವಕರಿಗೆ ಸ್ಪೂರ್ತಿ ತುಂಬುವಂತಹದ್ದು. ಹೆಣ್ಣು ಮಕ್ಕಳು ಹೇಗೆ ಸ್ಟ್ರಾಂಗ್​ ಆಗಿ ಬದುಕನ್ನು ಕಟ್ಟಿಕೊಳ್ಳಬೇಕು ಅನ್ನೋದಕ್ಕೆ ಬೆಸ್ಟ್​ ಎಕ್ಸಾಂಪಲ್​ ಸ್ನೇಹಾ.
ಸದ್ಯ ಸ್ನೇಹಾ ಡಿಸಿ ಆಗಿ ಗಮನ ಸೆಳೆಯುತ್ತಿದ್ದಾರೆ. ಕರ್ತವ್ಯ-ಮನೆ ಅಂತ ಬಂದಾಗ ಎರಡನ್ನೂ ಬ್ಯಾಲೆನ್ಸ್ ಮಾಡ್ತಾ ಮುನ್ನುಗ್ಗುತ್ತಿದ್ದಾಳೆ. ಇತ್ತ ಸಹನಾಳನ್ನ ರಕ್ಷಿಸಿರೋ ಸ್ನೇಹಾ ಸಿಂಗಾರಮ್ಮನಿಗೆ ಗೇಟ್​ ಪಾಸ್​ ಕೊಟ್ಟು ಅತ್ತೆ ಬಂಗಾರಮ್ಮನ ಕಾಪಾಡುವ ಮಾರ್ಗದಲ್ಲಿದ್ದಾಳೆ. ಕತೆ ಸಖತ್​ ಇಂಟ್ರಸ್ಟಿಂಗ್​ ಆಗಿ ಸಾಗುತ್ತಿದೆ. ಇದಿಷ್ಟು ತೆರೆ ಮೇಲಿನ ಕತೆ.
ಆದರೆ ತೆರೆ ಹಿಂದೆ ಸ್ನೇಹಾ ಪಾತ್ರ ಮಾಡ್ತಿರೋ ಸಂಜನಾ ಅವರನ್ನು ಹೆಚ್ಚಾಗಿ ಸೀರೆ, ಚೂಡಿದಾರ್ ಸೇರಿದಂತೆ ಸಂಪ್ರದಾಯ ಉಡುಗೆಯಲ್ಲಿಯೇ ವೀಕ್ಷಕರು ನೋಡಿರೋದು. ಸ್ವಲ್ಪ ಟ್ರೆಡಿಷನಲ್​ಗೆ ಬ್ರೇಕ್​ ಹಾಕಿ ಮಾಡ್ರನ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ಫೋಟೋಶೂಟ್​ ಮಾಡಿಸಿದ್ದಾರೆ ಸಂಜನಾ. ತಿಳಿ ನೇರಳೆ ಹಾಗೂ ಕೇಸರಿ ಬಣ್ಣ ಮಿಕ್ಸ್​ ಇರುವಂತಹ ಗೌನ್​ ಧರಿಸಿದ್ದು ಸಿಂಪಲ್​ ಆಗಿ ಲುಕ್​ನ ಕ್ರಿಯೆಟ್​ ಮಾಡಿದ್ದಾರೆ. ಈ ಫೋಟೋಗಳನ್ನು ನಟಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
View this post on Instagram
ಇದನ್ನೂ ಓದಿ: ಬಿಗ್​ಬಾಸ್ ಮನೆಯಲ್ಲಿ ಸ್ಪರ್ಧಿಗೆ ಹೃದಯಾಘಾತ; ವೈದ್ಯರ ತಂಡ ದೌಡು.. ಗಂಗವ್ವ ಸ್ಥಿತಿ ಹೇಗಿದೆ?
ಹೊಸ ಲುಕ್​ನಲ್ಲಿ ನೆಚ್ಚಿನ ನಟಿಯನ್ನು ನೋಡಿದ ಫ್ಯಾನ್ಸ್​ ಶಾಕ್ ಆಗಿದ್ದಾರೆ. ಭಿನ್ನ ವಿಭಿನ್ನವಾಗಿ ಕಾಮೆಂಟ್ಸ್​ ಹಾಕುವ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇನ್ನೂ ನೀವು ಸೀರಿಯಲ್​ ಬಿಟ್ರಾ ಮೇಡಂ, ನಿಮ್ಮದು ಅದ್ಭುತವಾದ ನಟನೆ, ಪ್ಲೀಸ್​ ಸೀರಿಯಲ್​ ಬಿಡಬೇಡಿ ಮೇಡಂ ಅಂತೆಲ್ಲಾ ಆ ಫೋಟೋಗಳಿಗೆ ಕಾಮೆಂಟ್ಸ್​ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us