/newsfirstlive-kannada/media/post_attachments/wp-content/uploads/2025/06/puttakjana-makkalu.jpg)
ಪುಟ್ಟಕ್ಕನ ಮಕ್ಕಳು ಕತೆ ಮತ್ತೆ ಟೇಕ್ ಆಫ್ ಆಗಿದೆ. ಮುಕ್ತಾಯ ಆಗುತ್ತಾ ಅಂತ ಅಂದುಕೊಂಡಿದ್ದ ಸ್ಟೋರಿಗೆ ಹೊಸ ಹುರುಪು ತಗೊಂಡು ಬಂದಿದೆ. ಇದೇ ಸಂದರ್ಭದಲ್ಲಿ ಸಾವಿರದ ಸಂಚಿಕೆ ಪೂರೈಸಿದೆ ಧಾರಾವಾಹಿ. ಅಶ್ವಿನಿ ನಕ್ಷತ್ರ, ಜೋಡಿ ಹಕ್ಕಿ, ಭೂಮಿಗೆ ಬಂದ ಭಗವಂತ ಸೇರಿದಂತೆ ಹಲವು ಯಶಸ್ವಿ ಧಾರಾವಾಹಿ ಕೊಡೆಗೆ ನೀಡಿರೋ ಆರೂರು ಜಗದೀಶ್ ಅವರ ನಿರ್ಮಾಣದಲ್ಲಿ ಮೂಡಿ ಬರ್ತಿರೋ ಪುಟ್ಟಕ್ಕನ ಮಕ್ಕಳು ಕೂಡ ದಾಖಲೆಯ ಮೈಲಿಗಲ್ಲು ಸಾಧಿಸಿದೆ.
ಇದನ್ನೂ ಓದಿ:ತಮಿಳು Sa Re Ga Ma Pa ವೇದಿಕೆ ಮೇಲೆ ಶಿವಾನಿಗೆ ಬಿಗ್ ಸರ್ಪ್ರೈಸ್.. ಏನದು?
ಪುಟ್ಟಕ್ಕನ ಮಕ್ಕಳು ಧಾರಾವಾಹಿ ಸಾವಿರ ಸಂಚಿಕೆ ಪೂರೈಸಿದ ಖುಷಿಯಲ್ಲಿ ಜೀ ವಾಹಿನಿ ಹಾಗೂ ನಿರ್ದೇಶಕ, ನಿರ್ಮಾಪಕ ಆರೂರು ಜಗದೀಶ್ ಅದ್ಧೂರಿ ಕಾರ್ಯಕ್ರಮದ ಮೂಲಕ ಕಾಲಾವಿದರು, ತಂತ್ರಜ್ಞರನ್ನ ಗೌರವಿಸಿದ್ದಾರೆ. ದೊಡ್ಡ ತಾರಾಬಳಗ ಇರೋ ಪುಟ್ಟಕ್ಕನ ಮಕ್ಕಳು ಕಿರುತೆರೆಯಲ್ಲಿ ಮೈಲುಗಲ್ಲು ಸಾಧಿಸಿದೆ.
ಈ ಪ್ರಯುಕ್ತ ಹಿರಿಯ ನಟಿ ಉಮಾಶ್ರೀ ಸೇರಿದಂತೆ ಪ್ರತಿಯೊಬ್ಬ ಕಲಾವಿದರಿಗೂ ನೆನಪಿನ ಕಾಣಿಕೆ ನೀಡಲಾಗಿದೆ. ಜೆಎಸ್ ಪ್ರೊಡಕ್ಷನ್ ಅಡಿ ನಿರ್ಮಾಣವಾದ ದಿಟ್ಟ ಹೆಣ್ಣುಮಕ್ಕಳ ಸಾಧನೆಯ ಕಥೆ ಪುಟ್ಟಕ್ಕನ ಮಕ್ಕಳು. ಈ ಬಗ್ಗೆ ಆರೂರು ಜಗದೀಶ್ ಅವರು ಜನರ ಪ್ರೀತಿಗೆ ಭಾವುಕರಾಗಿದ್ರು.
ಸಾವಿರದ ಶರಣು ಹೇಳುತ್ತಾ ಕೇಕ್ ಕಟ್ ಮಾಡೋದರ ಮೂಲಕ ಸಿಹಿ-ಕಹಿ ಎಲ್ಲವನ್ನು ಸವಿದು ಮತ್ತಷ್ಟು ಮನರಂಜನೆಯ ಅನುಭವ ನೀಡೋ ಭರವಸೆ ನೀಡಿದೆ ತಂಡ. ನಮ್ಮ ಕಡೆಯಿಂದಲೂ ಪುಟ್ಟಕ್ಕನ ಮಕ್ಕಳು ಇಡೀ ತಂಡಕ್ಕೆ ಶುಭ ಹಾರೈಕೆಗಳು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ