/newsfirstlive-kannada/media/post_attachments/wp-content/uploads/2025/05/puttakana-makkalu4.jpg)
ಕನ್ನಡ ಕಿರುತೆರೆಯಲ್ಲಿ ವೀಕ್ಷಕರ ನೆಚ್ಚಿನ ಸೀರಿಯಲ್ಗಳಲ್ಲಿ ಒಂದಾಗಿದೆ ಪುಟ್ಟಕ್ಕನ ಮಕ್ಕಳು. ಇದೇ ಧಾರಾವಾಹಿಯಲ್ಲಿ ಮುಂಗುಸಿ ಪಾತ್ರದ ಮೂಲಕ ಜನಪ್ರಿಯತೆ ಪಡೆದುಕೊಂಡಿರೋ ಗಜೇಂದ್ರ ಅವರು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇದನ್ನೂ ಓದಿ: ಅಪ್ಪನಾಗೋ ಖುಷಿಯಲ್ಲಿರೋ ವಾಸುಕಿ ವೈಭವ್ಗೆ ಕ್ಯೂಟ್ ಸರ್ಪ್ರೈಸ್ ಕೊಟ್ಟ ಅರುಣ್ ಸಾಗರ್ ದಂಪತಿ
ಹೌದು, ಕಾಮಿಡಿ ಕಿಲಾಡಿಗಳು ಶೋ ಮೂಲಕ ಫೇಮಸ್ ಆಗಿರೋ ನಟ ಸದ್ಯ ಪುಟ್ಟಕ್ಕನ ಮಕ್ಕಳು, ಯಜಮಾನ ಸೀರಿಯಲ್ನಲ್ಲಿ ನಟಿಸುತ್ತಿದ್ದಾರೆ.
ಅದರಲ್ಲೂ ಪುಟ್ಟಕ್ಕನ ಮಕ್ಕಳು ಸೀರಿಯಲ್ನಲ್ಲಿ ಕಂಠಿ ಸ್ನೇಹಿತನ ಪಾತ್ರದಲ್ಲಿ ಗಜೇಂದ್ರ ನಟಿಸುತ್ತಿದ್ದಾರೆ.
View this post on Instagram
ನಟ ಗಜೇಂದ್ರ ಅವರು ಅಣ್ಣತಂಗಿ, ಪಾರ್ವತಿ ಪರಮೇಶ್ವರ, ಪರಿಣಿತ, ಅನುಬಂಧ ಧಾರಾವಾಹಿಗಳಲ್ಲಿ ನಟಿಸಿದ್ದಾರೆ, ಆ ಬಳಿಕ ಕ್ರೇಜಿಲೋಕ ಎಂಬ ಸಿನಿಮಾ ಕೂಡ ಮಾಡಿರುವ ನಟ ನಿಜ ಜೀವನದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕಳೆದ ತಿಂಗಳು ಏಪ್ರಿಲ್ 25ರಂದು ಅದ್ಧೂರಿಯಾಗಿ ಶ್ವೇತಾ ಎನ್ನುವವರ ಜೊತೆ ಗಜೇಂದ್ರ ಮದುವೆಯಾಗಿದ್ದಾರೆ. ತಮ್ಮ ಮದುವೆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೇ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ