ಸಖತ್​ ಜಾಲಿ ಮೂಡ್​ನಲ್ಲಿ ಪುಟ್ಟಕ್ಕನ ಮಗಳು ಸ್ನೇಹಾ; ನಟಿ ಸಂಜನಾ ಬುರ್ಲಿ ಹೋಗಿದೆಲ್ಲಿಗೆ?

author-image
Veena Gangani
Updated On
ಸಖತ್​ ಜಾಲಿ ಮೂಡ್​ನಲ್ಲಿ ಪುಟ್ಟಕ್ಕನ ಮಗಳು ಸ್ನೇಹಾ; ನಟಿ ಸಂಜನಾ ಬುರ್ಲಿ ಹೋಗಿದೆಲ್ಲಿಗೆ?
Advertisment
  • ನೀವು ಇಲ್ಲದೆ ಸೀರಿಯಲ್​ ನೋಡೋಕೆ ಆಗ್ತಿಲ್ಲ ಅಂತ ವೀಕ್ಷಕರು ಬೇಸರ
  • ಏಕಾಏಕಿ ಸೀರಿಯಲ್​ನಿಂದ ಆಚೆ ಬಂದ ಪುಟ್ಟಕ್ಕನ ಎರಡನೇ ಮಗಳು ಸ್ನೇಹಾ
  • ಪುಟ್ಟಕ್ಕನ ಮಕ್ಕಳು ಸೀರಿಯಲ್​ನಿಂದ ಆಚೆ ಬಂದ ಸಂಜನಾ ಏನ್ ಮಾಡ್ತಿದ್ದಾರೆ?

ಪುಟ್ಟಕ್ಕ ನೋವಿನಲ್ಲಿದ್ದಾಳೆ. ಮೊದಲ ಮಗಳನ್ನ ಕಳೆದುಕೊಂಡ ದುಃಖ ಇರುವಾಗಲೇ ಎರಡನೇ ಮಗಳು ಸ್ನೇಹಾಳನ್ನ ಆಕ್ಸಿಡೆಂಟ್​ನಲ್ಲಿ ಕಳೆದುಕೊಂಡು ಸಂಕಟ ಅನುಭವಿಸುತ್ತಿದ್ದಾಳೆ. ಪುಟ್ಟಕ್ಕನ ಅಳುವನ್ನು ನೋಡಿದ ವೀಕ್ಷಕರ ಮನಸ್ಸು ಕರಗಿ ಹೋಗಿದೆ. ಆದರೆ ಪುಟ್ಟಕ್ಕನ ಸಂಸಾಕರಕ್ಕೆ ಈಗ ಸಿಂಗಾರಮ್ಮನ ಕಾಟ ಶುರುವಾಗಿದೆ. ಅವರನ್ನು ಕಾಪಾಡಲು ಕಂಠಿ ಹೋರಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ:BBK11: ಲೋ ತಮ್ಮ ದಿನವೂ ಜಳಕ ಮಾಡೋ.. ಹನುಮಂತನಿಗೆ ಕಿಚ್ಚ ಸುದೀಪ್ ಗಿಫ್ಟ್‌ ಕೊಟ್ಟು ಹೇಳಿದ್ದೇನು?

ಇಂದು ಒಂದು ಕಡೆ ಆದ್ರೆ, ಮತ್ತೊಂದು ಕಡೆ ಪುಟ್ಟಕ್ಕನ ಮಕ್ಕಳು ಸೀರಿಯಲ್​ನಿಂದ ಆಚೆ ಬಂದ ಸ್ನೇಹ ಅಂದ್ರೆ ಸಂಜನಾ ಬುರ್ಲಿ ಅವರು ಸಖತ್ ಜಾಲಿ ಮೂಡ್​ನಲ್ಲಿದ್ದಾರೆ. ಸ್ನೇಹಾ ಪಾತ್ರ ಮುಕ್ತಾಯವಾಗ್ತಿದ್ದಂತೆ ನಟಿ ಸಂಜನಾ ಅವರು ಬ್ಯಾಕ್​ ಟು ಬ್ಯಾಕ್​ ಟ್ರಿಪ್ ಮಾಡುತ್ತಿದ್ದಾರೆ. ಇತ್ತಿಚೀಗೆ ಕಾಶ್ಮೀರಕ್ಕೆ ತೆರಳಿದ್ದ ಚಲುವೆ ಸಖತ್​ ಎಂಜಾಯ್​ ಮಾಡಿದ್ರು. ವೀಕ್ಷಕರಿಗೂ ಕೂಡ ಅಲ್ಲಿನ ಸೊಬಗನ್ನ ತೋರಿಸಿದ್ದಾರೆ. ನಂತರ ಮತ್ತೊಂದು ಜಾಲಿ ಟ್ರಿಪ್​ಗೆ ಅನಿಯಾದ ಚಲುವೆ, ಫ್ಯಾಮಿಲಿ ಜೊತೆಗೆ ಸಫಾರಿ ಮಾಡಿ ಕ್ವಾಲಿಟಿ ಟೈಮ್​ ಸ್ಪೆಂಡ್​ ಮಾಡಿದ್ದರು.

publive-image

ಸದ್ಯ ಸಂಜನಾ ಎಲ್ಲಿಗೆ ಹೋದ್ರು ಅಂತ ನೋಡುತ್ತಿರುವಾಗಲೇ ಮನಾಲಿಗೆ ಹಾರಿದ್ದಾರೆ. ಹಲವು ಪ್ರೇಕ್ಷಣಿಯ ಸ್ಥಳಗಳಿಗೆ ವಿಜಿಟ್​ ಮಾಡಿದ್ದಾರೆ. ಅಲ್ಲಿ ಕ್ಲಿಕ್ಕಿಸಿರೋ ಫೋಟೋಗಳನ್ನ ಸೋಷಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಈ ಫೋಟೋಗಳನ್ನ ನೋಡಿದ ಫ್ಯಾನ್ಸ್, ನೀವು​ ಬಿಡೀ ಮ್ಯಾಡಮ್​ ಸೂಪರ್​. ಬಟ್​ ಸೀರಿಯಲ್​ನಲ್ಲಿ ನಿಮ್ಮನ್ನ ತುಂಬಾ ಮಿಸ್​ ಮಾಡಿಕೊಳ್ತಿದ್ದೀವಿ. ನೀವು ಇಲ್ಲದೆ ಸೀರಿಯಲ್​ ನೋಡೋಕೆ ಆಗ್ತಿಲ್ಲ ಅಂತ ಬೇಸರ ಹೊರ ಹಾಕುತ್ತಿದ್ದಾರೆ.

ನಟಿ ಸಂಜನಾ ಬುರ್ಲಿ ಸೀರಿಯಲ್​ ಬಿಟ್ಟಿದ್ದು ಏಕೆ?

ಈ ಬಗ್ಗೆ ನ್ಯೂಸ್​ಫಸ್ಟ್​ ಸಂದರ್ಶನದಲ್ಲಿ ಮಾತಾಡಿದ ಸಂಜನಾ ಬುರ್ಲಿ, ನಾನು ಸೀರಿಯಲ್​ಗೆ 3 ತಿಂಗಳು ನೋಟೀಸ್​ ಪಿರಿಯಡ್ ಕೊಟ್ಟಿದೆ. ಆಗ ನಮ್ಮ ಡೈರೆಕ್ಟರ್ ಆರೂರ್ ಜಗದೀಶ್ ಅವರು ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್​ ಹಾಕಿದ್ದರು. ಪ್ರಮುಖ ಪಾತ್ರಕ್ಕೆ ನಟಿ ಬೇಕಾಗಿದ್ದಾರೆ ಅಂತ. ಸ್ನೇಹಾಳ ಕ್ಯಾರೆಕ್ಟರ್​ಗೆ ರಿಪ್ಲೇಸ್ ಮಾಡೋದಕ್ಕೆ ಅಲ್ಲ. ಆಗ ಸಾಕಷ್ಟು ಮಂದಿ ಇದನ್ನು ಗೇಸ್​ ಮಾಡಿದ್ದರು. ಸಂಜನಾ ಅವರು ಬಿಗ್​ಬಾಸ್​ಗೆ ಹೋಗುತ್ತಾರೆ ಅಂತ ಮುಂಚೆಯೇ ಗೇಸ್​ ಮಾಡಿದ್ದರು. ಆದರೆ ಈಗ ಸ್ನೇಹಾ ಕ್ಯಾರೆಕ್ಟರ್​ ಎಂಡ್ ಆದ ಮೇಲೆ ಬಿಗ್​ಬಾಸ್​ಗೆ ವೈಲ್ಡ್​ಕಾರ್ಡ್ ಎಂಟ್ರಿ ಕೊಡುತ್ತಾರೆ ಅಂತ ಜನ ಅಂದುಕೊಳ್ಳುತ್ತಿದ್ದಾರೆ. ನಾನು ಯಾವ ರಿಯಾಲಿಟಿ ಶೋಗೂ ಹೋಗುತ್ತಿಲ್ಲ ಅಂತ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment