/newsfirstlive-kannada/media/post_attachments/wp-content/uploads/2025/06/Siri-R-Mendan2.jpg)
ಕನ್ನಡ ಕಿರುತೆರೆ ನಟಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಬಂಗಾರಮ್ಮನ ಮಗಳು ಸದ್ಯ ಖುಷಿಯಲ್ಲಿದ್ದಾರೆ.
ಇದನ್ನೂ ಓದಿ: ಕಾರು ಓವರ್ ಟೇಕ್ ಗಲಾಟೆ.. ಅನಂತ್ ಕುಮಾರ್ ಹೆಗಡೆ ವಿರುದ್ಧ ಎಫ್ಐಆರ್..!
ಹೌದು, ಪುಟ್ಟಕ್ಕನ ಮಕ್ಕಳು ಸೀರಿಯಲ್ ನಟಿ ಬಂಗಾರಮ್ಮನ ಮಗಳು ವಸು ಪಾತ್ರದಲ್ಲಿ ನಟಿಸುತ್ತಿರುವ ಸೌಮ್ಯಾ ಮೆಂಡನ್ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ವಸು ಪಾತ್ರದಲ್ಲಿ ನಟಿ ಸೌಮ್ಯಾ ಮೆಂಡನ್ ಅಭಿನಯಿಸುತ್ತಿದ್ದಾರೆ. ನಟಿ ಸೌಮ್ಯಾ ಅವರು ಪುಟ್ಟಕ್ಕನ ಮಕ್ಕಳು, ಪಾರು, ಗೀತಾ, ಕಾವೇರಿ ಕನ್ನಡ ಮೀಡಿಯಂ ಸೇರಿದಂತೆ ಕೆಲ ಧಾರಾವಾಹಿ ನಟಿಸಿದ್ದಾರೆ.
ಇನ್ನೂ, ನಟಿ ಸೌಮ್ಯಾ ಅವರು ಕಸ್ತೂರಿ ನಿವಾಸ ಧಾರಾವಾಹಿಯಲ್ಲಿ ನಟಿಸಿರೋ ನಟ ಸುವೇದ್ ದಾಸ್ ಜೊತೆ ಎಂಗೇಜ್ ಆಗಿದ್ದಾರೆ. ಇವರು ಕನ್ನಡ ಧಾರಾವಾಹಿ, ಸಿನಿಮಾ, ತುಳು ರಂಗದಲ್ಲಿಯೂ ಸಕ್ರಿಯವಾಗಿದ್ದಾರೆ.
ಸದ್ಯ ಈ ಜೋಡಿಯ ನಿಶ್ಚಿತಾರ್ಥ ಸಮಾರಂಭಕ್ಕೆ ಪಾರು ಧಾರಾವಾಹಿ ನಟಿ ಸಿತಾರಾ, ಪುಟ್ಟಕ್ಕನ ಮಕ್ಕಳು ಸೀರಿಯಲ್ ನಟ ನಟಿಯರು ಭಾಗಿಯಾಗಿ ಶುಭ ಹಾರೈಸಿದ್ದಾರೆ.
ಸದ್ಯ ಈ ಜೋಡಿ ಎರಡು ವರ್ಷಗಳ ಹಿಂದೆಯೇ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪ್ರೀತಿಯನ್ನು ಹೇಳಿಕೊಂಡಿತ್ತು. ಸದ್ಯ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ನಿಶ್ಚಿತಾರ್ಥ ಮಾಡಿಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ