Advertisment

ಮದುಮಗಳಂತೆ ರೆಡಿಯಾದ ಪುಟ್ಟಕ್ಕನ 3ನೇ ಮಗಳು ಸುಮಾ; ವಿಶೇಷ ಉಂಟಾ!

author-image
Veena Gangani
Updated On
ಮದುಮಗಳಂತೆ ರೆಡಿಯಾದ ಪುಟ್ಟಕ್ಕನ 3ನೇ ಮಗಳು ಸುಮಾ; ವಿಶೇಷ ಉಂಟಾ!
Advertisment
  • ಊಹಿಸಲಾರದ ರೀತಿಯಲ್ಲಿ ತಿರುವು ಪಡೆದುಕೊಂಡ ಸೀರಿಯಲ್​
  • ಸುಮಾ ಪಾತ್ರದ ಮೂಲಕ ಕಿರುತೆರೆಗೆ ಈ ನಟಿ ಶಿಲ್ಪ ಪದಾರ್ಪಣೆ
  • ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗ್ತಿದೆ ಸ್ನೇಹಾ ತಂಗಿ ವಿಡಿಯೋ

ಕಿರುತೆರೆಯಲ್ಲಿ ಹೈವೋಲ್ಟೇಜ್ ಟಿಆರ್​​ಪಿ ಪಡೆದುಕೊಂಡು ಮೊದಲ ಎಪಿಸೋಡ್​ನಿಂದಲೂ ಎಲ್ಲರ ಗಮನ ಸೆಳೆಯುತ್ತಿರೋ ಧಾರಾವಾಹಿ ಅಂದ್ರೆ ಪುಟ್ಟಕ್ಕನ ಮಕ್ಕಳು. ಈ ಧಾರಾವಾಹಿಯ ಕಲಾವಿದರಿಂದ ಹಿಡಿದು ಡೈರೆಕ್ಷನ್ ಟೀಮ್​ವರೆಗೂ ಎಲ್ಲರೂ ಸಹ ಈ ದೊಡ್ಡ ಸಕ್ಸಸ್​ಗೆ ಕಾರಣ. ಆದರೆ ಮಗಳನ್ನ ಕಳೆದುಕೊಂಡು ಬರಿದಾಗಿರೋ ಪುಟ್ಟಕ್ಕನ ಮಡಿಲಿಗೆ ಸಹನಾ ಬಂದಿದ್ದಾಳೆ.

Advertisment

ಇದನ್ನೂ ಓದಿ: ‘ಬ್ಯೂಟಿ’ ಬ್ಯಾಡ್‌ಲಕ್‌.. ಶವದ ಮುಂದೆ 24 ಗಂಟೆ ಕಾಲ ಕಳೆದ ಪ್ರಿಯಕರ; ಬೆಂಗಳೂರಲ್ಲಿ ಭಯಾನಕ ಕೃತ್ಯ!

publive-image

ಒಬ್ಬಳು ಮಗಳು ಬಂದಳೂ ಅಂತ ಖುಷಿ ಪಡೋಕೆ ಆಗದೇ ಜೀವಕ್ಕೆ ಜೀವವಾಗಿದ್ದ ಸ್ನೇಹಾಳನ್ನ ಕಳೆದುಕೊಂಡು ನೋವು ಅನುಭವಿಸ್ತಿದ್ದಾಳೆ ಪುಟ್ಟಕ್ಕ. ತಾಯಿಯ ನೋವು ಸಂಕಟವನ್ನ ಅನುಭವಿಸಿ ಅಭಿನಯಿಸ್ತಿರೋ ಉಮಾಶ್ರೀ ಅಮ್ಮನ ಅಭಿನಯಕ್ಕೆ ಎಂಥವರಿಗೂ ಒಂದು​ ಕ್ಷಣ ಕಣ್ಣಾಲೆಗಳು ತುಂಬಿಕೊಳ್ಳುತ್ತಿವೆ. ಸದ್ಯ ಪುಟ್ಟಕ್ಕನಿಗೆ ಕಿರಿಯ ಮಗಳು ಸುಮಾ ಮದುಮಗಳಂತೆ ರೆಡಿಯಾಗಿ ಫೋಟೋಗೆ ಪೋಸ್​ ಕೊಟ್ಟಿದ್ದಾಳೆ.

publive-image

ಸುಮಾ ಪ್ರಾತಕ್ಕೆ ಜೀವ ತುಂಬಿರೋ ನಟಿಯ ಹೆಸರು ಶಿಲ್ಪಾ ಸವಸೆರೆ. ಇದೀಗ ನಟಿ ಶಿಲ್ಪಾ ಸವಸೆರೆ ಅವರು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅದೇ ವಿಡಿಯೋದಲ್ಲಿ ನಟಿ ಶಿಲ್ಪಾ ಸವಸೆರೆ ಥೇಟ್​ ಮದುಮಗಳ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ ಇದೇ ವಿಡಿಯೋ ನೋಡಿದ ಅಭಿಮಾನಿಗಳು ಮೇಡಂ ಮದುವೆನಾ? ಏನ್​ ಮೇಡಂ ವಿಶೇಷ, ಲುಕ್ಕಿಂಗ್​ ಸೂಪರ್​ ಅಂತೇಲ್ಲಾ ಕಾಮೆಂಟ್ಸ್​ ಹಾಕಿದ್ದಾರೆ. ಇನ್ನು, ಶಿಲ್ಪಾ ಸವಸೆರೆ ಮಾಡೆಲ್​ ಹಾಗೂ ಫ್ಯಾಷನ್​ ಡಿಸೈನರ್ ಆಗಿ ಕೂಡ ಕೆಲಸ ಮಾಡುತ್ತಿದ್ದಾರೆ. ಸದ್ಯ ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ಸುಮಾ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment