/newsfirstlive-kannada/media/post_attachments/wp-content/uploads/2025/04/puttakana-makkalu-1.jpg)
ಪುಟ್ಟಕ್ಕನ ಮಕ್ಕಳು ಕತೆ ಮತ್ತೆ ಟೇಕ್ ಆಫ್ ಆಗಿದೆ. ಮುಕ್ತಾಯ ಆಗುತ್ತಾ ಅಂತ ಅಂದುಕೊಂಡಿದ್ದ ಸ್ಟೋರಿಗೆ ಹೊಸ ಹುರುಪು ತಗೊಂಡು ಬಂದಿದ್ದು ಕಂಠಿ ಲವ್ ಸೀನ್ಸ್. ಪಕ್ಕಾ ಸ್ನೇಹಾ ಹಾಗೂ ಕಂಠಿ ಇಬ್ಬರು ಒಂದಾಗುತ್ತಾರೆ ಅನ್ನುವಷ್ಟರಲ್ಲಿ ಮತ್ತೆ ಟ್ವಿಸ್ಟ್ ನೀಡಲಾಗಿದೆ.
ಇದನ್ನೂ ಓದಿ:ಪತ್ನಿ, ಅಪ್ಪ-ಅಮ್ಮನ ಜೊತೆ ಪಹಲ್ಗಾಮ್ಗೆ ಹೋಗಿದ್ದ ಗಣೇಶ್ ಕಾರಂತ್.. ವಿಡಿಯೋದಲ್ಲಿ ಹೇಳಿದ್ದೇನು?
ಹೌದು, ಪುಟ್ಟಕ್ಕನ ಮಕ್ಕಳು ಸೀರಿಯಲ್ನಲ್ಲಿ ಈಗ ನಿಶ್ಚಿತಾರ್ಥದ ಸಂಭ್ರಮ ಜೋರಾಗಿದೆ. ಸ್ನೇಹಾ ಪಾತ್ರಕ್ಕೆ ಯಾವಾಗ ವಿದ್ಯಾರಾಜ್ ಎಂಟ್ರ ಆಯ್ಯೋ ಅಲ್ಲಿಂದ ಸೀರಿಯಲ್ಗೆ ಮತ್ತೊಂದು ಕಳೆ ಬಂದಂತೆ ಆಗಿದೆ. ಅಷ್ಟೇ ಅಲ್ಲದೇ ಕಂಠಿ ಸ್ನೇಹಾಗೆ ಪ್ರೇಮ ನಿವೇದನೆ ಮಾಡ್ಬೇಕು ಮಾಡಿದ್ದ. ಆದರೆ ಬಂಗಾರಮ್ಮನ ಅವಾಜ್ಗೆ ಹೆದರಿ ಹೋಗಿದ್ದ ಸ್ನೇಹಾ ಹಾಗೂ ತಂದೆ ಈ ಪುಟ್ಟಕ್ಕನ ಮನಸ್ಸಿಗೆ ಬೇಸರವಾಗುವಂತೆ ಬೈದಿದ್ದರು. ಆದ್ರೆ ನಿಜವಾಗಲೂ ಕಂಠಿ ಮೇಲೆ ಪ್ರೀತಿ ಇಟ್ಟುಕೊಂಡಿದ್ದ ಸ್ನೇಹಾಳನ್ನು ಬೇರೆ ಹುಡುಗನಿಗೆ ಕೊಟ್ಟ ನಿಶ್ಚಿತಾರ್ಥ ಮಾಡಲು ಮುಂದಾಗಿದ್ದಾರೆ.
ಯಾವಾಗ ಸ್ನೇಹ ಪ್ರೀತಿಗೆ, ಮದುಗೆ ಬೇಡ ಅಂದ್ಕೋ ಅವಾಗಿಂದ ಮನಸ್ಸನ್ನು ಚೇಂಚ್ ಮಾಡಿಕೊಂಡಿದ್ದಾನೆ. ಅಲ್ಲದೇ ಅವ್ವನ ಮಾತಿಗೆ ಸೋತು ರಾಧಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ ಕಂಠಿ. ಆದ್ರೆ ನಿಜಕ್ಕೂ ಸ್ನೇಹಾಗೆ ಪ್ರೀತಿ ಇರೋ ವಿಚಾರ ತಿಳಿದರೇ ಕಂಠಿ ಸುಮ್ಮನೆ ಕೂರೋದಿಲ್ಲ. ಮುಂದಿನ ಸಂಚಿಕೆಯಲ್ಲಿ ಕಂಠಿಗೆ ಈ ವಿಚಾರ ಗೊತ್ತಾಗುತ್ತಾ ಅಂತ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ