newsfirstkannada.com

PVR, INOXನಲ್ಲಿ ರಾಮಮಂದಿರ ಸಮಾರಂಭ ಲೈವ್​ ಸ್ಟ್ರೀಮಿಂಗ್.. ಒಂದು ಟೆಕೆಟ್​ ಜೊತೆ ಇದೆಲ್ಲ ಫ್ರೀ..!

Share :

Published January 20, 2024 at 9:32am

    ನಗರಗಳ PVR, INOX ಚಿತ್ರ ಮಂದಿರಗಳಲ್ಲಿ ಲೈವ್​ ಸ್ಟ್ರೀಮಿಂಗ್

    ನಾಡಿದ್ದು ರಾಮಮಂದಿರದ ಅದ್ಧೂರಿ ಸಮಾರಂಭ ವೀಕ್ಷಿಸಬಹುದು

    ರಾಮಮಂದಿರ ಕಾರ್ಯಕ್ರಮ ನೋಡಲು PVR, INOX ಟಿಕೆಟ್​ ದರ?

ಲಕ್ನೋ: ಜನವರಿ 22 ರಂದು ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭವನ್ನು ದೇಶದ ಪ್ರಮುಖ ನಗರಗಳ PVR, INOX ಚಿತ್ರ ಮಂದಿರಗಳಲ್ಲಿ ಲೈವ್​ ಸ್ಟ್ರೀಮಿಂಗ್ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಆನ್​ಲೈನ್​ ಬುಕ್ಕಿಂಗ್ ಕೂಡ ಆರಂಭವಾಗಿದ್ದು ಟಿಕೆಟ್ ದರ ಕೇವಲ 100 ರೂಪಾಯಿ ಎಂದು ಹೇಳಲಾಗ್ತಿದೆ.

ಭಾರತದ 70 ಪ್ರಮುಖ ನಗರಗಳಲ್ಲಿ 160ಕ್ಕೂ ಅಧಿಕ PVR, INOX ಚಿತ್ರಮಂದಿರಗಳಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ನೇರ ಪ್ರಸಾರ ಮಾಡಲಾಗುತ್ತದೆ. ಅಯೋಧ್ಯೆಯ ಈ ಲೈವ್​ ಸ್ಟ್ರೀಮಿಂಗ್ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಎಂದು ಸಮಯ ನಿಗದಿ ಮಾಡಲಾಗಿದೆ. ಲೋಕಾರ್ಪಣೆಯನ್ನು ನೋಡಲು ಇಚ್ಚಿಸುವವರು PVR, INOX ಆ್ಯಪ್ ಅಥವಾ ವೆಬ್​​ಸೈಟ್​ ಮೂಲಕ ಆನ್​ಲೈನ್​ನಲ್ಲಿ ಟಿಕೆಟ್​ ಬುಕ್ ಮಾಡಿಕೊಳ್ಳಬಹುದು. ಟಿಕೆಟ್ ದರ ಕೇವಲ 100 ರೂಪಾಯಿ ಇದ್ದು ಟಿಕೆಟ್ ಜೊತೆ ಪಾಪ್‌ಕಾರ್ನ್ ಮತ್ತು ಪಾನೀಯವನ್ನು ನೀಡುತ್ತಾರೆ ಎಂದು ಹೇಳಲಾಗಿದೆ.

PVR, INOXನ ಸಹ- ಸಿಇಒ ಗೌತಮ್ ದತ್ತಾ ಮಾತನಾಡಿ, ರಾಮಮಂದಿರ ನಿರ್ಮಾಣ ನೂರಾರು ವರ್ಷಗಳ ಕನಸು. ಅದು ನನಸಾಗುತ್ತಿದೆ. ಈ ಮಹತ್ವದ ಸಮಯದ ಬಗ್ಗೆ ಸಂತಸವಾಗುತ್ತಿದೆ. ಇಂತಹ ಭವ್ಯವಾದ ಮತ್ತು ಐತಿಹಾಸಿಕ ಕ್ಷಣಗಳನ್ನು ಮನಸಾರೆ ನಾವು ಅನುಭವಿಸಬೇಕು. ಸಿನಿಮಾ ಸ್ಕ್ರೀನ್​ಗಳು ಜನರ ಭಾವನೆಗಳಿಗೆ ಜೀವ ತುಂಬುತ್ತವೆ. ಹೀಗಾಗಿ ಪ್ರಾಣ ಪ್ರತಿಷ್ಠಾಪನೆ ದಿನವನ್ನು ನಿಜವಾದ ರೀತಿಯಲ್ಲಿ ನೋಡಲು ಅದನ್ನು ಜನರಿಗೆ ಒದಗಿಸಲು ನಮಗೆ ಸಿಕ್ಕಿರುವುದು ಒಂದು ಸೌಭಾಗ್ಯವಾಗಿದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

PVR, INOXನಲ್ಲಿ ರಾಮಮಂದಿರ ಸಮಾರಂಭ ಲೈವ್​ ಸ್ಟ್ರೀಮಿಂಗ್.. ಒಂದು ಟೆಕೆಟ್​ ಜೊತೆ ಇದೆಲ್ಲ ಫ್ರೀ..!

https://newsfirstlive.com/wp-content/uploads/2024/01/RAM_TEMPLE-4.jpg

Load More