ದೆಹಲಿ ಮಹಿಳೆಯರಿಗಾಗಿ ‘ಪ್ಯಾರಿ ದೀದಿ ಯೋಜನೆ’ ಘೋಷಿಸಿದ ಡಿಕೆ ಶಿವಕುಮಾರ್!

author-image
Ganesh
Updated On
ದೆಹಲಿ ಮಹಿಳೆಯರಿಗಾಗಿ ‘ಪ್ಯಾರಿ ದೀದಿ ಯೋಜನೆ’ ಘೋಷಿಸಿದ ಡಿಕೆ ಶಿವಕುಮಾರ್!
Advertisment
  • ದೆಹಲಿ ಚುನಾವಣೆ ಗೆಲ್ಲಲು ಕಾಂಗ್ರೆಸ್ ಕಸರತ್ತು
  • ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸುದ್ದಿಗೋಷ್ಟಿ
  • ಪ್ರತಿ ತಿಂಗಳ ಮಹಿಳೆಯರಿಗೆ 2500 ರೂಪಾಯಿ ಘೋಷಣೆ

ದೆಹಲಿ ಮಹಿಳೆಯರ ಓಲೈಸಲು ಕಾಂಗ್ರೆಸ್ ಭರ್ಜರಿ ಘೋಷಣೆ ಮಾಡಿದೆ. ದೆಹಲಿ ಮಹಿಳೆಯರಿಗಾಗಿ ‘ಪ್ಯಾರಿ ದೀದಿ ಯೋಜನೆ’ (Pyari Didi Yojana) ಅನೌನ್ಸ್ ಮಾಡಿದ್ದು, ಅದರ ಅಡಿಯಲ್ಲಿ ಪ್ರತಿ ತಿಂಗಳು 2500 ರೂಪಾಯಿ ನೀಡುವುದಾಗಿ ಭರವಸೆ ನೀಡಿದೆ.

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ದೆಹಲಿ ಕಾಂಗ್ರೆಸ್ ಇಂದು ವಿಶೇಷ ಸುದ್ದಿಗೋಷ್ಟಿ ನಡೆಸಿತ್ತು. ಈ ವೇಳೆ ಕರ್ನಾಟಕದ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಸುದ್ದಿಗೋಷ್ಟಿಯ ನೇತೃತ್ವ ವಹಿಸಿದ್ದರು. ಈ ವೇಳೆ ದೆಹಲಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಪ್ರತಿ ತಿಂಗಳು 2500 ರೂಪಾಯಿ ನೀಡೋದಾಗಿ ಭರವಸೆ ನೀಡಿದೆ.

ಕಾಂಗ್ರೆಸ್ ಘೋಷಣೆ ಏನು..?

‘ಪ್ಯಾರಿ ದೀದಿ ಯೋಜನೆ’ಯನ್ನು ಡಿಕೆ ಶಿವಕುಮಾರ್​ ಅನೌನ್ಸ್​ ಮಾಡಿದರು. ದೆಹಲಿಯಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದರೆ ಮಹಿಳೆಯರಿಗೆ ಮಾಸಿಕ 2,500 ರೂಪಾಯಿ ಭತ್ಯೆ ನೀಡುವುದಾಗಿ ಭರವಸೆ ನೀಡಿದರು. ಕರ್ನಾಟಕದಲ್ಲಿ ಈ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ. ಮೊದಲ ಸಂಪುಟ ಸಭೆಯಲ್ಲಿ ಈ ಭರವಸೆಗೆ ಅನುಮೋದನೆ ನೀಡಲಾಯಿತು. ಆ ಯಶಸ್ಸಿನ ಬೆನ್ನಲ್ಲೇ ಇದೀಗ ಕಾಂಗ್ರೆಸ್​ ದೆಹಲಿಯಲ್ಲೂ ಅನೌನ್ಸ್ ಮಾಡ್ತಿದೆ ಎಂದರು.

ಇದನ್ನೂ ಓದಿ:IND vs AUS: ಸಿಡ್ನಿ ಟೆಸ್ಟ್​​ ಹೀನಾಯ ಸೋಲಿಗೆ 5 ಕಾರಣ ರಿವೀಲ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment