/newsfirstlive-kannada/media/post_attachments/wp-content/uploads/2025/06/Qatar_Airways.jpg)
ಕತಾರ್ ಏರ್ವೇಸ್ (Qatar Airways) ಸತತ 2ನೇ ವರ್ಷವೂ ವಿಶ್ವದ ಅತ್ಯುತ್ತಮ ಏರ್‌ಲೈನ್ ಎಂದು 2025ರ ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಲೈನ್ ಪ್ರಶಸ್ತಿ ಗೆದ್ದುಕೊಂಡಿದೆ. ಸಿಂಗಪೂರ್ ಏರ್ಲೈನ್ಸ್ ದ್ವಿತಿಯ ಸ್ಥಾನ ಪಡೆದುಕೊಂಡರೆ, ಕ್ಯಾಥೆ ಪೆಸಿಫಿಕ್ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ.
ಪ್ಯಾರಿಸ್ ಏರ್ ಶೋನ ಏರ್ ಅಂಡ್ ಸ್ಪೇಸ್ ಮ್ಯೂಸಿಯಂನಲ್ಲಿ ಲೆ ಬೌರ್ಗೆಟ್ ವಿಮಾನ ನಿಲ್ದಾಣದ ಆರ್ಟ್ ಡೆಕೊ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಕತಾರ್ ಏರ್ವೇಸ್ ಕೆಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ವಿಶ್ವದ ಬೆಸ್ಟ್ ಬ್ಯುಸಿನೆಸ್ ಕ್ಲಾಸ್, ಮಧ್ಯ ಪ್ರಾಚ್ಯದ ಅತ್ಯುತ್ತಮ ವಿಮಾನಯಾನ ಸಂಸ್ಥೆ ಹಾಗೂ ಬೆಸ್ಟ್ ಬ್ಯುಸಿನೆಸ್ ಕ್ಲಾಸ್ ಏರ್ಲೈನ್ಸ್ ಲೌಂಜ್ ಎಂಬ 2025ರ ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಲೈನ್ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಇದನ್ನೂ ಓದಿ:ಬುಲೆಟ್ ಟ್ರೈನ್ ಕಾರಿಡಾರ್; 8ನೇ ಸ್ಟೀಲ್ ಬ್ರಿಡ್ಜ್ ಪೂರ್ಣ.. ಇನ್ನು ಎಷ್ಟು ಸೇತುವೆ ನಿರ್ಮಿಸಬೇಕು?
ವಾಯುಯಾನ ಉದ್ಯಮದಲ್ಲಿ ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಲೈನ್ ಪ್ರಶಸ್ತಿ, ಆಸ್ಕರ್ ಪ್ರಶಸ್ತಿ ಎಂದೇ ಖ್ಯಾತಿ ಪಡೆದುಕೊಂಡಿದೆ. ಇಂತಹ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನ 26 ವರ್ಷಗಳ ಇತಿಹಾಸದಲ್ಲಿ ಕತಾರ್ ಏರ್ವೇಸ್ ಒಟ್ಟು 9 ಬಾರಿ ಪಡೆದುಕೊಂಡು ಸಂಭ್ರಮಿಸಿದೆ. ಇದು ಸಂಸ್ಥೆಗೆ ದೊಡ್ಡ ಹೆಮ್ಮೆಯ ವಿಚಾರವಾಗಿದೆ. ಮಧ್ಯ ಪ್ರಾಚ್ಯದಲ್ಲಿ ಕತಾರ್ ಏರ್ವೇಸ್ ಅತ್ಯುತ್ತಮ ಏರ್ಲೈನ್ಸ್ ಎಂದು ಖ್ಯಾತಿ ಪಡೆದುಕೊಂಡಿದೆ ಎನ್ನಲಾಗಿದೆ.
ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಲೈನ್ ಪ್ರಶಸ್ತಿಯನ್ನು ಪಡೆದಿರುವುದು ನಮಗೆ ತುಂಬಾ ಹೆಮ್ಮೆ ಆಗುತ್ತಿದೆ. ಈ ಮನ್ನಣೆ ನಾವು ಮಾಡಿದ ಸೇವೆಗೆ ಸಿಕ್ಕ ಪ್ರತಿಫಲವಾಗಿದೆ. ಈ ಪ್ರಶಸ್ತಿಯು ವಿಮಾನಯಾನ ಸಂಸ್ಥೆ ಇನ್ನಷ್ಟು ಕೆಲಸ ಮಾಡಲು ಉತ್ತೇಜನ ನೀಡಿದಂತೆ ಆಗಿದೆ. ಇದು ನಮ್ಮ ಸಂಸ್ಥೆಯ ಉತ್ಸಾಹ, ನಿಖರತೆ ಹಾಗೂ ಉದ್ದೇಶದ ಆಚರಣೆಯಾಗಿದೆ ಎಂದು ಕತಾರ್ ಏರ್ವೇಸ್ ಗ್ರೂಪ್‌ನ ಸಿಇಒ ಬದ್ರ್ ಮೊಹಮ್ಮದ್ ಅಲ್-ಮೀರ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ