newsfirstkannada.com

ಮರಣ ದಂಡನೆಯಿಂದ ಜಸ್ಟ್ ಮಿಸ್.. ಕತಾರ್​ ಜೈಲಿನಲ್ಲಿದ್ದ 8 ಭಾರತೀಯರು ಬಿಡುಗಡೆಯಾಗಿದ್ದೇ ರೋಚಕ ಕಥೆ!

Share :

Published February 12, 2024 at 9:38pm

    ಭಾರತೀಯ ನೌಕಾದಳದ ನಿವೃತ್ತ ಸಿಬ್ಬಂದಿಯನ್ನ ಬಂಧಿಸಿದ್ದ ಕತಾರ್​

    ತಪ್ಪಿತಸ್ಥರೆಂದು ಮರಣ ದಂಡನೆ ವಿಧಿಸಿದ್ದ ಕತಾರ್​ ಕೋರ್ಟ್​

    ಮೋದಿ ಸರ್ಕಾರದ ಮಾತುಕತೆಯಿಂದ ಇದೀಗ 8 ಮಂದಿ ಬಿಡುಗಡೆ

ಸಾವಿನಿಂದ ಜಸ್ಟ್​ ಮಿಸ್​ ಆದ್ರೂ ಅಂತಾರಲ್ಲ. ಹಾಗೇ ಇದೆ ಈ ಸ್ಟೋರಿ. ವಿದೇಶದಲ್ಲಿ ಮರಣ ದಂಡನೆಗೆ ಒಳಗಾಗಿದ್ದ ಭಾರತೀಯರನ್ನ ಭಾರತ ಸರ್ಕಾರ ಶಿಕ್ಷೆಯಿಂದ ಪಾರು ಮಾಡಿ ತಾಯ್ನಾಡಿಗೆ ಕರೆ ತಂದ ಸ್ಟೋರಿಯಿದು. ಮರಣದಂಡನೆಯಿಂದ ಶಿಕ್ಷೆ, ಶಿಕ್ಷೆಯಿಂದ ಬಿಡುಗಡೆ ಭಾಗ್ಯ ಸಿಕ್ಕಿದ್ದೇ ರೋಚಕ ಕಥೆ. ಇದು ಭಾರತಕ್ಕೆ ಸಿಕ್ಕ ದೊಡ್ಡ ಗೆಲುವು. ಕನಸು ನನಸೋ ಗೊತ್ತಾಗ್ತಿಲ್ಲ, ತನ್ನ ದೇಶಕ್ಕೆ ಬರೋದಿರಲಿ ಬದುಕ್ತೀವಿ ಅನ್ನೋ ಆಸೆ ಬಿಟ್ಟಿದ್ದವರು ಇವತ್ತು ತಾಯ್ನಾಡಿಗೆ ಬಂದು ಇಳಿದಿದ್ದಾರೆ. ತಮ್ಮ ದೇಶ, ತಮ್ಮವರನ್ನ ಕಂಡು ದೀರ್ಘವಾದ ನಿಟ್ಟುಸಿರು ಬಿಟ್ಟಿದ್ದಾರೆ.

ಖತಾರ್​ ಜೈಲಿನಲ್ಲಿದ್ದ 8 ಮಂದಿ ನೌಕಾದಳ ಸಿಬ್ಬಂದಿ ಬಿಡುಗಡೆ

ಖತಾರ್​ ಜೈಲಿನಲ್ಲಿದ್ದ 8 ಮಂದಿ ಭಾರತೀಯ ನೌಕಾದಳದ ನಿವೃತ್ತ ಸಿಬ್ಬಂದಿಗೆ ಬಿಡುಗಡೆ ಭಾಗ್ಯಾ ಸಿಕ್ಕಿದೆ.. ಅಷ್ಟೇ ಅಲ್ಲ, ಅದರಲ್ಲಿ ಏಳು ಮಂದಿ ತಾಯ್ನಾಡಿಗೂ ವಾಪಸ್​ ಮರಳಿದ್ದಾರೆ. ಕತಾರ್​ನಲ್ಲಿ ಮರಣದಂಡಣೆಗೆ ಒಳಗಾದವರನ್ನ ಭಾರತ ಸರ್ಕಾರ ಇಂದು ವಾಪಸ್​ ಭಾರತಕ್ಕೆ ಕರೆತಂದಿದೆ.. ಭಾರತ ಸರ್ಕಾರ ಕಾನೂನು ಸಹಾಯದ ಮೂಲಕ ರಕ್ಷಣೆಗೆ ಧಾವಿಸಿತ್ತು. ಕಡೆಗೆ ಪ್ರಧಾನಿ ನರೇಂದ್ರ ಮೋದಿಗೆ ಕತಾರ್​ ಜೊತೆಗಿದ್ದ ಉತ್ತಮ ಭಾಂಧವ್ಯ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಧೋವಲ್‌ ಮಧ್ಯಪ್ರವೇಶದಿಂದ ಆರೋಪಿಗಳಿಗೆ ರಿಲೀಫ್‌ ಸಿಕ್ಕಿದೆ. ತಮ್ಮ ವಯಕ್ತಿಕ ಸಂಪರ್ಕವನ್ನ ಬಳಸಿ ಅಜಿತ್​ ದೋವಲ್​ ಎಲ್ಲಾ 8 ಮಂದಿಯನ್ನ ಸುರಕ್ಷಿತವಾಗಿ ಬಿಡುಗಡೆ ಮಾಡಿಸಿ ಭಾರತಕ್ಕೆ ವಾಪಸ್​ ಕರೆ ತಂದಿದ್ದಾರೆ. ಕಮಾಂಡರ್‌ಗಳಾದ ಪೂರ್ಣೇಂದು ತಿವಾರಿ, ಸುಗುಣಾಕರ್ ಪಾಕಲಾ, ಅಮಿತ್ ನಾಗ್‌ಪಾಲ್, ಸಂಜೀವ್ ಗುಪ್ತಾ ಮತ್ತು ಕ್ಯಾಪ್ಟನ್‌ಗಳಾದ ನವತೇಜ್ ಸಿಂಗ್ ಗಿಲ್, ಬೀರೇಂದ್ರ ಕುಮಾರ್ ವರ್ಮಾ ಮತ್ತು ಸೌರಭ್ ವಸಿಷ್ಟ್, ನಾವಿಕ ರಾಗೇಶ್ ಗೋಪಕುಮಾರ್ ಬಂಧಿತರಾಗಿದ್ದ ನೌಕಾದಳದ ನಿವೃತ್ತ ಸಿಬ್ಬಂದಿ.

ಇದನ್ನೂ ಓದಿ: ಹಿಂದೂ ಧರ್ಮಕ್ಕೆ ಅಪಮಾನ.. ಮಂಗಳೂರಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳ ಹೋರಾಟಕ್ಕೆ ಜಯ

ಭಾರತೀಯ ನೌಕಾಪಡೆ ಕೆಲಸ ಮಾಡಿದ್ದ ನಿವೃತ್ತ ಅಧಿಕಾರಿಗಳೂ ಸೇರಿ ಎಂಟು ಮಂದಿ ಕೆಲ ವರ್ಷದ ಹಿಂದೆ ಕತಾರ್‌ನ ಖಾಸಗಿ ಕಂಪನಿಯೊಂದರಲ್ಲಿ ಜಲಾಂತರ್ಗಾಮಿ ನೌಕೆಗೆ ಸಂಬಂಧಿಸಿದ ಯೋಜನೆಗಾಗಿ ಕೆಲಸ ಮಾಡುತ್ತಿದ್ದರು. ‘ಕತಾರ್‌ ಜಲಾಂತರ್ಗಾಮಿ ಪ್ರಾಜೆಕ್ಟ್​’ ಮೇಲೆ ಬೇಹುಗಾರಿಕೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆರೋಪ ಬೆನ್ನಲ್ಲೇ ಎಂಟು ಮಂದಿಯನ್ನು ಬಂಧಿಸಲಾಗಿತ್ತು. 2022, ಅಕ್ಟೋಬರ್​ನಿಂದ ಕತಾರ್‌ ಜೈಲಿನಲ್ಲಿದ್ದರು. ನಂತರ ಕತಾರ್ ಕೋರ್ಟ್​ ಇವರನ್ನು ತಪ್ಪಿತಸ್ಥರೆಂದು ಘೋಷಣೆ ಮಾಡಿತ್ತು. ಅದಕ್ಕೆ ಶಿಕ್ಷೆಯಾಗಿ ಮರಣದಂಡನೆ ವಿಧಿಸಿತ್ತು.

ಬೇಹುಗಾರಿಕೆ ಆರೋಪದಡಿ ಖತಾರ್​ನ ಜೈಲಿನಲ್ಲಿದ್ದ ಸಿಬ್ಬಂದಿ

ಯಾವಾಗ ಆಕ್ಟೋಬರ್​ನಲ್ಲಿ ಕತಾರ್​ ನ್ಯಾಯಾಲಯ 8 ಮಂದಿಗೆ ಮರಣ ದಂಡನೆ ವಿಧಿಸ್ತೋ ಖುದ್ದು ಪ್ರಧಾನಿ ನರೇಂದ್ರ ಮೋದಿ ಕತಾರ್‌ನ ಮುಖ್ಯಸ್ಥರಾದ ಅಮಿರ್‌ ಶೇಖ್ ತಮೀಮ್ ಬಿನ್ ಹಮದ್ ಅವರೊಂದಿಗೆ ಮಾತುಕತೆ ನಡೆಸಿದ್ರು. ಬಳಿಕ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌, ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹಾಗೂ ಅಧಿಕಾರಿಗಳ ಹಂತದಲ್ಲೂ ರಾಜತಾಂತ್ರಿಕ ಮಾತುಕತೆಗಳು ನಡೆದಿದ್ದವು. ಇದಾದ ನಂತರ ಡಿಸೆಂಬರ್‌ನಲ್ಲಿ ಮರಣದಂಡನೆ ರದ್ದುಪಡಿಸಿ ಜೀವಾವಧಿ ಶಿಕ್ಷೆಗೆ ಇಳಿಸಲಾಗಿತ್ತು. ಇಷ್ಟಕ್ಕೆ ಸುಮ್ಮನಾಗದೇ ನಿರಂತರ ಮಾತುಕತೆ ನಡೆಸಿದ ಅಜಿತ್‌ ಧೋವಲ್‌ ಎರಡು ತಿಂಗಳಿನಲ್ಲಿಯೇ ಎಲ್ಲರನ್ನೂ ಬಿಡುಗಡೆ ಮಾಡಿಸಿದ್ದಾರೆ. ಒಟ್ನಲ್ಲಿ, ಮರಣದಂಡನೆಗೆ ಒಳಗಾಗಿದ್ದವರನ್ನ ಬಿಡಿಸಿ ವಾಪಸ್​ ಮನೆಗೆ ಕರೆತಂದ ಭಾರತ, ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ತನ್ನ ಶಕ್ತಿಯನ್ನ ಸಾಬೀತು ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮರಣ ದಂಡನೆಯಿಂದ ಜಸ್ಟ್ ಮಿಸ್.. ಕತಾರ್​ ಜೈಲಿನಲ್ಲಿದ್ದ 8 ಭಾರತೀಯರು ಬಿಡುಗಡೆಯಾಗಿದ್ದೇ ರೋಚಕ ಕಥೆ!

https://newsfirstlive.com/wp-content/uploads/2024/02/pm-modi-84.jpg

Load More