newsfirstkannada.com

Breaking News: ಭಾರತಕ್ಕೆ ದೊಡ್ಡ ಗೆಲುವು; ಕತಾರ್​​ನಲ್ಲಿ ಮರಣದಂಡನೆಗೆ ಗುರಿಯಾಗಿದ್ದ 8 ಮಾಜಿ ನಾವಿಕರು ರಿಲೀಸ್

Share :

Published February 12, 2024 at 7:32am

Update February 12, 2024 at 7:34am

    ಭಾರತದ ರಾಜತಾಂತ್ರಿಕತೆಗೆ ಸಂದ ಮತ್ತೊಂದು ದೊಡ್ಡ ಗೆಲುವು

    8 ಮಂದಿಯಲ್ಲಿ 7 ಮಾನಿ ನೌಕಾ ಸಿಬ್ಬಂದಿ ತವರಿಗೆ ವಾಪಸ್

    ಬಿಡುಗಡೆ, ಮನೆಗೆ ಮರಳಿದ್ದನ್ನು ಖಚಿತಪಡಿಸಿಕೊಂಡ ಕತಾರ್

ಕತಾರ್‌ನ ನ್ಯಾಯಾಲಯವು ಭಾರತೀಯ ನೌಕಾಪಡೆಯ ಎಲ್ಲಾ ಎಂಟು ಮಾಜಿ ನಾವಿಕರನ್ನು ಬಿಡುಗಡೆ ಮಾಡಿದೆ. ಈ ಪೈಕಿ ಏಳು ನಾವಿಕರು ಭಾರತಕ್ಕೆ ಮರಳಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಈ ಮೂಲಕ ಭಾರತೀಯ ರಾಜತಾಂತ್ರಿಕತೆಗೆ ಅತೀ ದೊಡ್ಡ ಗೆಲುವು ಸಿಕ್ಕಂತಾಗಿದೆ.

ಕತಾರ್ ವಿರುದ್ಧ ಬೇಹುಗಾರಿಕೆ ಮಾಡಿದ ಆರೋಪದ ಮೇಲೆ ಮಧ್ಯಪ್ರಾಚ್ಯದ ಈ ಸಣ್ಣ ದೇಶದ ಜೈಲಿನಲ್ಲಿ ನೌಕಾಪಡೆಯ ಎಂಟು ಮಾಜಿ ಸಿಬ್ಬಂದಿಯನ್ನು ಬಂಧಿಸಲಾಗಿತ್ತು. ಮಾತ್ರವಲ್ಲ ಅಲ್ಲಿನ ಕೋರ್ಟ್​ ಅವರಿಗೆ ಮರಣದಂಡನೆ ಶಿಕ್ಷೆಯನ್ನೂ ಪ್ರಕಟಿಸಿತ್ತು. ನಂತರ ಅವರ ಬಿಡುಗಡೆ ಕಷ್ಟವಾಗಿತ್ತು.

ಕತಾರ್ ಕೋರ್ಟ್​​ ನಿರ್ಧಾರವನ್ನು ಭಾರತ ಖಂಡಿಸಿತ್ತು. ಗಲ್ಫ್ ದೇಶದ ಕೋರ್ಟ್ ಮರಣದಂಡನೆ ಘೋಷಿಸಿದಾಗ ಭಾರತವು ತನ್ನ ರಾಜತಾಂತ್ರಿಕ ಚಾಣಾಕ್ಷತೆಯನ್ನು ಪ್ರದರ್ಶಿಸಿತ್ತು. ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿತ್ತು. ಡಿಸೆಂಬರ್ 28, 2023 ರಂದು ಭಾರತದ ಮನವಿಯನ್ನು ಗಮನದಲ್ಲಿಟ್ಟುಕೊಂಡು ಎಂಟು ನಾಗರಿಕರಿಗೆ ನೀಡಲಾಗಿದ್ದ ಮರಣದಂಡನೆ ಶಿಕ್ಷೆಗೆ ತಡೆ ಸಿಕ್ಕಿತ್ತು. ಇದೀಗ ಬಿಡುಗಡೆಯಾಗಿ ಮನೆಗೆ ವಾಪಸ್ ಆಗಿದ್ದಾರೆ.

ವಿದೇಶಾಂಗ ಇಲಾಖೆ ಹೇಳಿದ್ದೇನು..?
ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರತಿಕ್ರಿಯಿಸಿ.. ಕತಾರ್‌ನಲ್ಲಿ ಬಂಧಿತರಾಗಿದ್ದ ಎಂಟು ಭಾರತೀಯ ಪ್ರಜೆಗಳ ಬಿಡುಗಡೆ ಆಗಿದೆ. ಕತಾರ್ ನ್ಯಾಯಾಲಯದ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಎಂಟು ಮಂದಿ ಭಾರತೀಯರಲ್ಲಿ ಏಳು ಜನರು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ. ಅವರ ಬಿಡುಗಡೆ ಮತ್ತು ಮನೆಗೆ ಮರಳುವಿಕೆ ಬಗ್ಗೆ ಕತಾರ್ ಆಡಳಿತವು ಖಚಿತಪಡಿಸಿಕೊಳ್ಳಲು ನಿರ್ಧರಿಸಿದೆ. ಇದನ್ನು ಭಾರತ ಪ್ರಶಂಸಿಸುತ್ತದೆ ಎಂದು ತಿಳಿಸಿದೆ.

ಬಿಡುಗಡೆಗೆ ಕುಟುಂಬಸ್ಥರು ಮನವಿ
ಭಾರತೀಯರ ಕುಟುಂಬಗಳು ಅವರ ಬಿಡುಗಡೆಗಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಮನವಿ ಮಾಡಿದ್ದವು. ನಂತರ ಎಂಟು ಭಾರತೀಯರ ಬಿಡುಗಡೆಗಾಗಿ ಕತಾರ್ ಮತ್ತು ಭಾರತದ ನಡುವೆ ರಾಜತಾಂತ್ರಿಕ ಮಾತುಕತೆಗಳು ಶುರುವಾದವು. ಪರಿಣಾಮ ಮಾಜಿ ನಾವಿಕರ ಮರಣದಂಡನೆಯು ಜೈಲು ಶಿಕ್ಷೆಯಾಗಿ ಪರಿವರ್ತಿಸಲಾಯಿತು. ಕೊನೆಗೆ ಜೈಲಿನಲ್ಲಿ ಶಿಕ್ಷೆಯ ಅವಧಿಯನ್ನು ಇನ್ನಷ್ಟು ಕಡಿಮೆಗೊಳಿಸಲಾಯಿತು. ಇದೀಗ ಬಿಡುಗಡೆಗೊಂಡು ವಾಪಸ್ ಆಗಿದ್ದಾರೆ.

ಯಾಕೆ ಬಂಧನ..?
ಕತಾರ್‌ನಲ್ಲಿ ಸೆರೆಯಾಗಿದ್ದ ಎಂಟು ಭಾರತೀಯರು ಈ ಹಿಂದೆ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದ್ದರು. ಅವರು ‘ಕತಾರ್‌ ಜಲಾಂತರ್ಗಾಮಿ ಪ್ರಾಜೆಕ್ಟ್​’ ಮೇಲೆ ಬೇಹುಗಾರಿಕೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆರೋಪ ಬೆನ್ನಲ್ಲೇ ಎಂಟು ಮಂದಿಯನ್ನು ಬಂಧಿಸಲಾಗಿತ್ತು. 2022, ಅಕ್ಟೋಬರ್​ನಿಂದ ಕತಾರ್‌ ಜೈಲಿನಲ್ಲಿದ್ದರು. ನಂತರ ಕತಾರ್ ಕೋರ್ಟ್​ ಇವರನ್ನು ತಪ್ಪಿತಸ್ಥರೆಂದು ಘೋಷಣೆ ಮಾಡಿತ್ತು. ಅದಕ್ಕೆ ಶಿಕ್ಷೆಯಾಗಿ ಮರಣದಂಡನೆ ವಿಧಿಸಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking News: ಭಾರತಕ್ಕೆ ದೊಡ್ಡ ಗೆಲುವು; ಕತಾರ್​​ನಲ್ಲಿ ಮರಣದಂಡನೆಗೆ ಗುರಿಯಾಗಿದ್ದ 8 ಮಾಜಿ ನಾವಿಕರು ರಿಲೀಸ್

https://newsfirstlive.com/wp-content/uploads/2024/02/QATAR.jpg

Load More