/newsfirstlive-kannada/media/post_attachments/wp-content/uploads/2025/05/RCB-14.jpg)
- ಐಪಿಎಲ್ ಮೊದಲ ಕ್ವಾಲಿಫೈಯರ್ ಪಂದ್ಯ ಇಂದು
- ಪಂಜಾಬ್ ಕಿಂಗ್ಸ್ vs ಆರ್‌ಸಿಬಿ ಮಧ್ಯೆ ಮ್ಯಾಚ್
- ಗೆದ್ದವರಿಗೆ ಫೈನಲ್ ಟಿಕೆಟ್ ಭಾಗ್ಯ ಸಿಗಲಿದೆ
ಐಪಿಎಲ್-2025ರ ಮೊದಲ ಕ್ವಾಲಿಫೈಯರ್ ಪಂದ್ಯ ಇಂದು ನಡೆಯಲಿದೆ. ನ್ಯೂ ಚಂಡೀಗಢದ ಮುಲ್ಲನ್‌ಪುರ ಕ್ರೀಡಾಂಗಣದಲ್ಲಿ ಫೈನಲ್ ಟಿಕೆಟ್‌ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಲಿವೆ. ಇವತ್ತಿನ ಹೈ-ವೋಲ್ಟೇಜ್ ಪಂದ್ಯದಲ್ಲಿ ಆರ್​ಸಿಬಿ ಪ್ಲೇಯಿಂಗ್-11 ಹೇಗಿರಬಹುದು ಎಂಬ ಕುತೂಹಲ ಹೆಚ್ಚಾಗಿದೆ.
ಕ್ವಾಲಿಫೈಯರ್-1ರಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶಿಸುತ್ತದೆ. ಲೀಗ್ ಹಂತದ ಅಂತ್ಯದಲ್ಲಿ ಪಂಜಾಬ್ ಕಿಂಗ್ಸ್ ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನ ಮತ್ತು ಆರ್‌ಸಿಬಿ ಎರಡನೇ ಸ್ಥಾನ ಗಳಿಸಿದೆ. ಅರ್ಹತಾ ಪಂದ್ಯದಲ್ಲಿ RCB ಸಾಕಷ್ಟು ಬದಲಾಣೆ ಮಾಡಿಕೊಂಡು ಹೋರಾಡಿದೆ.
ಇದನ್ನೂ ಓದಿ: RCB ಫೈನಲ್​ಗೆ ಹೋಗಲು ನಾಳೆಯೇ ಗೋಲ್ಡನ್ ಚಾನ್ಸ್​.. ಬಲಿಷ್ಠ ತಂಡದಲ್ಲಿ ಯಾರಿಗೆಲ್ಲ ಸ್ಥಾನ..?
ಪ್ಲೇಆಫ್ ಪಂದ್ಯಗಳಿಗೆ ಜಾಕೋಬ್ ಬೆಥಾಲ್ ಬದಲಿಗೆ ನ್ಯೂಜಿಲೆಂಡ್‌ನ ಟಿಮ್ ಸೀಫರ್ಟ್ ಆರ್‌ಸಿಬಿ ಸೇರಿಕೊಂಡಿದ್ದಾರೆ. ಜೋಶ್ ಹೇಜಲ್​ವುಡ್ ತಂಡಕ್ಕೆ ಎಂಟ್ರಿಯಾಗಿದ್ದಾರೆ. ಹೇಜಲ್​ವುಡ್ ಆಡೋದು ಕನ್ಫರ್ಮ್ ಆಗಿದೆ.
ಯಾರಿಗೆಲ್ಲ ಸ್ಥಾನ ಸಿಗಬಹುದು..?
ಆರಂಭಿಕ ಆಟಗಾರರ ಬಗ್ಗೆ ಹೇಳುವುದಾದರೆ ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಲೀಗ್ ಹಂತದ ಇವರೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಇಂದು ಟಿಮ್ ಸೀಫರ್ಟ್ ಅವರನ್ನು ಮೂರನೇ ಸ್ಥಾನದಲ್ಲಿ ಪ್ರಯತ್ನಿಸಬಹುದು. ನಾಯಕ ರಜತ್ ಪಾಟಿದಾರ್ ನಾಲ್ಕನೇ ಸ್ಥಾನದಲ್ಲಿ ಆಡಲಿದ್ದಾರೆ. ನಂತರ ಜಿತೇಶ್ ಶರ್ಮಾ ಐದನೇ ಸ್ಥಾನದಲ್ಲಿ ಮತ್ತು ಮಾಯಾಂಕ್ ಅಗರ್ವಾಲ್ ಆರನೇ ಸ್ಥಾನದಲ್ಲಿ ಬರಬಹುದು.
ಟಿಮ್ ಡೇವಿಡ್ ಫಿನಿಷರ್ ಪಾತ್ರಕ್ಕಾಗಿ ತಂಡಕ್ಕೆ ಮರಳಬಹುದು. ಅವರು ಏಳನೇ ಕ್ರಮಾಂಕದಲ್ಲಿ ಆಡಬಹುದು ಮತ್ತು ಕೃನಾಲ್ ಪಾಂಡ್ಯ ಎಂಟನೇ ಕ್ರಮಾಂಕದಲ್ಲಿ ಆಡುವುದನ್ನು ಕಾಣಬಹುದು. ಈ ಋತುವಿನಲ್ಲಿ ಅಗತ್ಯವಿದ್ದಾಗ ಕೃನಾಲ್ ತಂಡಕ್ಕೆ ಉಪಯುಕ್ತ ಇನ್ನಿಂಗ್ಸ್ ಆಡಿದ್ದಾರೆ. ಬೌಲಿಂಗ್‌ನಲ್ಲಿ ಜೋಶ್ ಹೇಜಲ್​​ವುಡ್, ಭುವನೇಶ್ವರ್ ಕುಮಾರ್ ಮತ್ತು ಯಶ್ ದಯಾಳ್ ಒಳ್ಳೆಯ ಪ್ರದರ್ಶನ ನೀಡುತ್ತಿದ್ದಾರೆ. ಸುಯಶ್ ಶರ್ಮಾ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕೆ ಇಳಿಯಲಿದ್ದಾರೆ.
ಕ್ವಾಲಿಫೈಯರ್-1ರ RCB ಸಂಭಾವ್ಯ ತಂಡ: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ , ಟಿಮ್ ಸೀಫರ್ಟ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಮಯಾಂಕ್ ಅಗರ್ವಾಲ್, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಜೋಶ್ ಹೇಜಲ್​​ವುಡ್, ಭುವನೇಶ್ವರ್ ಕುಮಾರ್ ಮತ್ತು ಯಶ್ ದಯಾಳ್.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ