/newsfirstlive-kannada/media/post_attachments/wp-content/uploads/2025/05/RCB_TEAM_2025.jpg)
ರೆಡ್ ಆರ್ಮಿಗಳ ಫೈರಿ ಬ್ಯಾಟಲ್ಗೆ ಕೌಂಟ್ಡೌನ್ ಶುರುವಾಗಿದೆ. ಪಂಜಾಬ್-ಆರ್ಸಿಬಿ ಇಬ್ಬರಲ್ಲಿ ಯಾರು ಮೊದಲು ಫೈನಲ್ಗೆ ಎಂಟ್ರಿ ನೀಡ್ತಾರೆ ಅನ್ನೋ ಕುತೂಹಲ ದುಪ್ಪಟ್ಟಾಗಿದೆ. ಮತ್ತೊಮ್ಮೆ ಕಿಂಗ್ ಕೊಹ್ಲಿಯೇ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದಾರೆ. ಆರ್ಸಿಬಿಯ ಬ್ಯಾಟಿಂಗ್ ಸೂಪರ್ ಸ್ಟಾರ್ ಮೇಲೆ ಎಲ್ಲರ ಕಣ್ಣಿದೆ.
ಪ್ರಸಕ್ತ ಐಪಿಎಲ್ ಸೀಸನ್ನಲ್ಲಿ ಅದ್ಬುತ ಪ್ರದರ್ಶನ ನೀಡಿರುವ ವಿರಾಟ್ ಕೊಹ್ಲಿ, ಆರ್ಸಿಬಿ ಪಾಲಿನ ಆಪದ್ಬಂದವರಾಗಿದ್ದಾರೆ. ಪ್ರತಿ ಮ್ಯಾಚ್ನಲ್ಲಿ ತಂಡದ ಗೆಲುವಿನಲ್ಲಿ ಕಾಣಿಕೆ ನೀಡಿದ್ದಾರೆ. ತಂಡಕ್ಕೆ ಗೆಲುವಿನ ಕಾಣಿಕೆ ನೀಡಿರುವ ವಿರಾಟ್, ಆರ್ಸಿಬಿಯ ರಿಯಲ್ ಮ್ಯಾಚ್ ವಿನ್ನರ್ ಆಗಿ ಮೆರೆದಾಡಿದ್ದಾರೆ. ಒಂದಲ್ಲ, ಎರಡಲ್ಲ.. ಲೀಗ್ ಹಂತದಲ್ಲಿ ಸಾಲಿಡ್ ಆಟವಾಡಿರುವ ವಿರಾಟ್, 13 ಪಂದ್ಯಗಳಿಂದ 602 ರನ್ ಸಿಡಿಸಿದ್ದಾರೆ. ಈ ಪೈಕಿ 8 ಅರ್ಧಶತಕ ಸಿಡಿಸಿರುವ ವಿರಾಟ್, 147.91ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮ್ಯಾಚ್ ವಿನ್ನರ್ ಆಗಿದ್ದಾರೆ. ಆದ್ರೀಗ ಅದೇ ಮ್ಯಾಚ್ ವಿನ್ನರ್ ವಿರಾಟ್, ಪ್ಲೇ ಆಫ್ನಲ್ಲಿ ವಿಲನ್ ಆಗ್ತಾರಾ ಎಂಬ ಟೆನ್ಶನ್ ಶುರುವಾಗಿದೆ.
ಇದನ್ನೂ ಓದಿ: RCB ಅಭಿಮಾನಿಗಳಿಗೆ ಐದು ಖುಷಿಯ ವಿಚಾರಗಳು.. ಪಂಜಾಬ್ ವಿರುದ್ಧದ ಪಂದ್ಯಕ್ಕೆ ಸಖತ್ ಬೂಸ್ಟ್..!
ಲೀಗ್ ಸ್ಟ್ರೈಜ್ನಲ್ಲಿ ಕೊಹ್ಲಿ ವೈಲೆಂಟ್
ಪ್ರಚಂಡ ಫಾರ್ಮ್ನಲ್ಲಿರುವ ವಿರಾಟ್ ಕೊಹ್ಲಿ, ಲೀಗ್ ಸ್ಟೇಜ್ನಲ್ಲಿ ಅಬ್ಬರಿಸಿ ಬೊಬ್ಬೆರೆಸಿದ್ದಾರೆ ನಿಜ. ಬಿಗ್ ಮ್ಯಾಚ್ ಪ್ಲೇಯರ್ ಅಂತಾನೇ ಕರೆಸಿಕೊಳ್ಳುವ ಕೊಹ್ಲಿ, ಐಪಿಎಲ್ನ ಪ್ಲೇ ಆಫ್ ಪಂದ್ಯಗಳಲ್ಲಿ ಕಂಪ್ಲೀಟ್ ಸೈಲೆಂಟ್ ಆಗಿದ್ದಾರೆ. ಅದು ಕೂಡ ಒಂದಲ್ಲ.. ಎರಡಲ್ಲ.. ಆರ್ಸಿಬಿ ಪ್ಲೇ ಆಫ್ನಲ್ಲಿ ಆಡಿರುವ ಎಲಿಮಿನೇಟರ್, ಕ್ವಾಲಿಫೈಯರ್, ಕ್ವಾಲಿಫೈಯರ್-2 ಸೇರಿದಂತೆ ಫೈನಲ್ ಪಂದ್ಯಗಳಲ್ಲೂ ವಿರಾಟ್ ಬ್ಯಾಟ್, ಸದ್ದು ಮಾಡದ ಸೈಲೆಂಟ್ ಆಗಿದೆ.
ಪ್ಲೇಆಫ್ ಸ್ಟೇಜ್ನಲ್ಲಿ ಕೊಹ್ಲಿ
2009ರಿಂದ 2024ರ ತನಕ ಎಲಿಮಿನೇಟರ್, ಕ್ವಾಲಿಫೈಯರ್-1, ಕ್ವಾಲಿಫೈಯರ್-2, ಫೈನಲ್ ಸೇರಿದಂತೆ 15 ಪಂದ್ಯಗಳನ್ನಾಡಿರುವ ವಿರಾಟ್, 26.23 ಬ್ಯಾಟಿಂಗ್ ಅವರೇಜ್ನಲ್ಲಿ 341 ರನ್ ಗಳಿಸಿದ್ದಾರೆ. 2 ಅರ್ಧಶತಕ ಗಳಿಸಿರುವ ಕೊಹ್ಲಿ, 121.78ರ ಬ್ಯಾಟಿಂಗ್ ಸ್ಟ್ರೈಕ್ರೇಟ್ ಹೊಂದಿದ್ದಾರೆ. ವಿರಾಟ್ ಕೊಹ್ಲಿಯ ಈ ಟ್ರ್ಯಾಕ್ ರೆಕಾರ್ಡ್ ಆರ್ಸಿಬಿ ಪಾಲಿಗೆ ಮುಗ್ಗಲ ಮುಳ್ಳಾಗಿದೆ.
ಇದನ್ನೂ ಓದಿ: RCB ಅಭಿಮಾನಿಗಳಿಗೆ ಐದು ಖುಷಿಯ ವಿಚಾರಗಳು.. ಪಂಜಾಬ್ ವಿರುದ್ಧದ ಪಂದ್ಯಕ್ಕೆ ಸಖತ್ ಬೂಸ್ಟ್..!
ಸಿಡಿತಾರಾ ಕೊಹ್ಲಿ?
ಒಂದಿಬ್ಬರ ಪ್ರಾರ್ಥನೆ, ಬೇಡಿಕೆ, ಮನದ ವೇದನೆಯಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಟ್ಯಾಂತರ ಅಭಿಮಾನಿಗಳ ಮನದ ಆವೇದನೆ. ಲೀಗ್ ಸ್ಟೇಜ್ನಲ್ಲಿ ಅಬ್ಬರಿಸಿರುವ ವಿರಾಟ್, ಪ್ಲೇ ಆಫ್ನಲ್ಲಿ ಪವರ್ ಫುಲ್ ಪರ್ಫಾಮೆನ್ಸ್ ನೀಡಿದ್ರೆ ಗೆಲುವು ಕಷ್ಟವೇನಲ್ಲ. ಹೀಗಾಗಿ ಲೀಗ್ ಸ್ಟೇಜ್ನಲ್ಲಿ ವಿರಾಟ್ ವಿರಾಟ ರೂಪ ದರ್ಶನವಾದಂತೆಯೇ ಪ್ಲೇ ಆಫ್ನಲ್ಲೂ ಸಿಡಿದೇಳಲಿ ಅನ್ನೋದೇ ಫ್ಯಾನ್ಸ್ ಫ್ರಾರ್ಥನೆ. ಅಭಿಮಾನಿಗಳ ಆ ಆಶಾಭಾವನೆ ನನಸಾಗುವ ಸಾಧ್ಯತೆ ದಟ್ಟವಾಗಿದೆ.
ಪಂಜಾಬ್ ಎದುರು ಕೊಹ್ಲಿ
ಪಂಜಾಬ್ ಎದುರು 34 ಪಂದ್ಯಗಳನ್ನಾಡಿರುವ ವಿರಾಟ್, 36.80ರ ಬ್ಯಾಟಿಂಗ್ ಅವರೇಜ್ನಲ್ಲಿ 1104 ರನ್ ಗಳಿಸಿದ್ದಾರೆ. 6 ಅರ್ಧಶತಕ, 1 ಶತಕ ಸಿಡಿಸಿರುವ ಶ್ರೇಯಸ್ ಅಯ್ಯರ್, 133.49ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ. ಪಂಜಾಬ್ ಎದುರು ಅದ್ಬುತ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಕೊಹ್ಲಿ, ಇವತ್ತು ಸಿಡಿಯುತ್ತಾರೆ ಅನ್ನೋ ನಂಬಿಕೆ ಹುಟ್ಟಿಹಾಕಿದೆ.
ವಿರಾಟ್ ಕೈಯಲ್ಲಿದೆ ಆರ್ಸಿಬಿ ಫೈನಲ್ ಭವಿಷ್ಯ
ರಾಯಲ್ ವಾಲೆಂಜರ್ಸ್ ಬೆಂಗಳೂರು ತಂಡದ ಫೈನಲ್ ಭವಿಷ್ಯ. ನೂರಕ್ಕೆ ನೂರರಷ್ಟು ವಿರಾಟ್ ಕೊಹ್ಲಿಯ ಪ್ರದರ್ಶನದ ಮೇಲೆದೆ ಅನ್ನೋದ್ರಲ್ಲಿ ಡೌಟಿಲ್ಲ. ಯಾಕಂದ್ರೆ ಲೀಗ್ ಸ್ಟೇಜ್ನಲ್ಲಿ ವಿರಾಟ್, ವಿರಾಟ ದರ್ಶನ ಪ್ರದರ್ಶಿಸಿದ ಪ್ರತಿ ಮ್ಯಾಚ್ ಆರ್ಸಿಬಿ ಗೆದ್ದು ಬೀಗಿದೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್.. ವಿರಾಟ್ ಅರ್ಧಶತಕ ಸಿಡಿಸಿದ ಎಟಕ್ಕೆಂಟು ಮ್ಯಾಚ್ಗಳಲ್ಲಿ ಆರ್ಸಿಬಿ ತಂಡದ ಗೆಲುವಿನಯಾನ.. ಹೀಗಾಗಿ ಇಂದಿನ ಪಂದ್ಯದಲ್ಲಿ ವಿರಾಟ್, ವೀರವೇಶದ ಬ್ಯಾಟಿಂಗ್ ನಡೆಸಿದ್ರೆ. ಆರ್ಸಿಬಿ ಗೆಲುವಿನ ಜೊತೆಗೆ ಫೈನಲ್ಗೆ ಎಂಟ್ರಿ ನೀಡುವ ಕನಸು ನನಸಾಗುವುದು ಗ್ಯಾರಂಟಿ. ಇದೆಲ್ಲವೂ ಆಪದ್ಬಾಂದವ ವಿರಾಟ್, ಕೈಯಲ್ಲಿಯೇ ಇದೆ.
ಇದನ್ನೂ ಓದಿ: Qualifier-1: ಬೆಂಗಳೂರು ತಂಡ ಸಂಪೂರ್ಣ ಬದಲಾಗಲಿದೆಯೇ..? RCB ಸಂಭಾವ್ಯ ಪ್ಲೇಯಿಂಗ್ 11 ಪಟ್ಟಿ..!
ಬಿಗ್ ಮ್ಯಾಚ್ ಪ್ಲೇಯರ್, ಕ್ರೈಸಿಸ್ ಮ್ಯಾನ್ ಎಂದೇ ಕರೆಸಿಕೊಳ್ಳವ ವಿರಾಟ್ಗೆ, ಈಗ ಪ್ಲೇ ಆಪ್ ಪಂದ್ಯಗಳಲ್ಲಿ ಮ್ಯಾಚ್ ವಿನ್ನರ್ ಅನ್ನೋದನ್ನ ನಿರೂಪಿಸಿಕೊಳ್ಳುವ ಜೊತೆಗೆ ಕೋಟ್ಯಾಂತರ ಅಭಿಮಾನಿಗಳ ಕನಸು ನನಸಾಗಿಸುವ ಬೆಟ್ಟದಷ್ಟು ನಿರೀಕ್ಷೆ ವಿರಾಟ್ ಕೊಹ್ಲಿ ಮೇಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ