/newsfirstlive-kannada/media/post_attachments/wp-content/uploads/2024/10/FRAUD-ALERT.jpg)
ಡಿಜಿಟಲ್ ಜಗತ್ತು ದೊಡ್ಡದಾಗುತ್ತಿರುವ ಈ ಹೊತ್ತಿನಲ್ಲಿ ಆನ್‌ಲೈನ್ ವಂಚನೆಗಳ ವೇಗ ಕೂಡ ತೀವ್ರಗತಿಯಲ್ಲಿದೆ. ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ (Indian cybercrime coordination centre) ವರದಿ ಪ್ರಕಾರ, 2024 ಜನವರಿ ಮತ್ತು ಏಪ್ರಿಲ್ ನಡುವೆ ಸುಮಾರು 1750 ಕೋಟಿ ರೂಪಾಯಿ ವಂಚನೆ ನಡೆದಿದೆ. ರಾಷ್ಟ್ರೀಯ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್‌ನಲ್ಲಿ 740,000ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ.
ಇದನ್ನೂ ಓದಿ:Scam Call: ಸೈಬರ್ ವಂಚಕರ ಕರೆಗೆ ತಾಯಿ ಶಾಕ್.. ಹೃದಯಾಘಾತಕ್ಕೆ ಸರ್ಕಾರಿ ಶಾಲಾ ಶಿಕ್ಷಕಿ ಸಾ*ವು
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಆನ್‌ಲೈನ್ ಚೀಟಿಂಗ್ ಪ್ರಕರಣ ತಡೆಗಟ್ಟಲು ಅನೇಕ ಕ್ರಮಗಳನ್ನು ತೆಗೆದುಕೊಂಡರೂ ಸಾಧ್ಯವಾಗುತ್ತಿಲ್ಲ. ಇದೀಗ ಸಾಫ್ಟ್ವೇರ್ ಕಂಪನಿ Quick Heal ಸೈಬರ್ ಭದ್ರತೆ ಮತ್ತು ವಂಚನೆಯಿಂದ ದೂರ ಇರಲು AntiFraud.AI ಅಭಿವೃದ್ಧಿಪಡಿಸಿದೆ. ಆ ಮೂಲಕ ಸೈಬರ್ ವಂಚನೆಯನ್ನು ತಡೆಯಬಹುದು ಎಂದು ಕಂಪನಿ ಹೇಳಿಕೊಂಡಿದೆ.
AntiFraud.AI ಹೇಗೆ ರಕ್ಷಿಸುತ್ತದೆ?
AntiFraud.AI ಮೂಲಕ ಸೈಬರ್ ವಂಚನೆಯನ್ನು ಕಡಿಮೆ ಮಾಡಬಹುದು ಎಂದು ಕಂಪನಿ ಹೇಳಿದೆ. ತಂತ್ರಜ್ಞಾನದ ಸಹಾಯದಿಂದ AntiFraud.AI ಹೇಗೆ ಕೆಲಸ ಮಾಡಬಹುದು ಅನ್ನೋದನ್ನೂ ತಿಳಿಸಿದೆ.
- ರಿಸ್ಕ್ ಪ್ರೊಫೈಲ್: ಬಳಕೆದಾರ ಅಪಾಯದ ಪ್ರೊಫೈಲ್ಗಳನ್ನು ಹೇಗೆ ಹ್ಯಾಂಡಲ್ ಮಾಡಬೇಕು, ಮತ್ತು ಮೋಸದ ಬಲೆಯಿಂದ ಹೇಗೆ ರಕ್ಷಿಸಿಕೊಳ್ಳಬೇಕು ಅನ್ನೋದನ್ನು ತಿಳಿಸುತ್ತದೆ.
- ಫ್ರಾಡ್ ಕಾಲ್ ಅಲರ್ಟ್: ವಂಚನೆ ಕರೆ ಬಂದರೆ ಅಲರ್ಟ್ ಮಾಡುತ್ತದೆ, ಅನುಮಾನಾಸ್ಪದ ಕರೆಗಳು ಬಂದರೂ ಎಚ್ಚರಿಕೆ ನೀಡುತ್ತದೆ.
- ಬ್ಯಾಂಕಿಂಗ್ ಫ್ರಾಡ್ ಅಲರ್ಟ್: ವಿವಿಧ ಬ್ಯಾಂಕುಗಳ ಹೆಸರಲ್ಲಿ ಕರೆ ಮಾಡಿ ನಿಮ್ಮನ್ನು ವಂಚಿಸಲು ಮಂದಾದರೆ ಕೂಡಲೇ ನಿಮಗೆ ಎಚ್ಚರಿಕೆ ನೀಡುತ್ತದೆ.
- ಫ್ರಾಡ್ ಪ್ರೊಟೆಕ್ಟ್ ಬುಡ್ಡಿ (Fraud Protect Buddy)
- ಫ್ರಾಡ್ ಅಪ್ಲಿಕೇಶನ್ ಡಿಟೆಕ್ಟರ್: ಇದರ ಸಹಾಯದಿಂದ, ಮಾಲ್‌ವೇರ್ ಅಥವಾ ಥ್ರೆಡ್‌ಗಳಿಗೆ ಕಾರಣವಾಗುವ ಅಪ್ಲಿಕೇಶನ್‌ಗಳಿಗಾಗಿ ಬಳಕೆದಾರರ ಸಾಧನಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಿದೆ.
- ಸೆಕ್ಯೂರ್ ಪೇಮೆಂಟ್: ಆನ್‌ಲೈನ್ ವಹಿವಾಟುಗಳನ್ನು ಸುರಕ್ಷಿತಗೊಳಿಸುವಲ್ಲಿ ಸಹಾಯ ಮಾಡುವುದು
- ನಿಮ್ಮ ಮೊಬೈಲ್ನಲ್ಲಿ ಮೈಕ್ರೊಫೋನ್ ಅಥವಾ ಕ್ಯಾಮರಾವನ್ನು ನಿಮಗೆ ತಿಳಿಯದೆ ಇನ್ಸ್ಟಾಲ್ ಮಾಡಿದಾಗ ಎಚ್ಚರಿಕೆ ನೀಡುವುದು
- ಡಾರ್ಕ್ ವೆಬ್ ಮಾನಿಟರಿಂಗ್ ಮೂಲಕ ನಿಮ್ಮ ಸೂಕ್ಷ್ಮ ಮಾಹಿತಿಯ ದುರುಪಯೋಗವನ್ನು ತಡೆಯಲು ಎಚ್ಚರಿಕೆ ನೀಡುತ್ತದೆ ಎಂದು ಕಂಪನಿ ಹೇಳಿದೆ. ಜೊತೆಗೆ ನಿಮ್ಮ ಕರೆಯನ್ನು ಗೊತ್ತಾಗದೇ ರೀತಿಯಲ್ಲಿ ಫಾರ್ವರ್ಡ್ ಮಾಡ್ತಿದ್ದರೆ ಅದರ ಬಗ್ಗೆಯೂ ಎಚ್ಚರಿಕೆ ಕೊಡಲಿದೆ. ಅಂದರೆ ನಿಮ್ಮ ಅನುಮತಿಯಿಲ್ಲದೆ ಕರೆಗಳನ್ನು ಫಾರ್ವರ್ಡ್ ಮಾಡ್ತಿದ್ದರೆ ಅಲರ್ಟ್ ಆಗುವಂತೆ ಈ AI ಸಿಗ್ನಲ್ ನೀಡಲಿದ್ಯಂತೆ.
ಇದನ್ನೂ ಓದಿ:ತಮನ್ನಾ ಭಾಟಿಯಾಗೆ ED ಮಾಸ್ಟರ್ ಸ್ಟ್ರೋಕ್; ನಿರಂತರ ವಿಚಾರಣೆ..? ವಿಷಯ ಏನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ