ನಿಮ್ಮ ಮಕ್ಕಳಿಗೆ ಓದಿನ ಮೇಲೆ ಆಸಕ್ತಿ ಬೆಳೆಸೋದು ಹೇಗೆ? ಅದಕ್ಕಾಗಿ ಪೋಷಕರು ಏನ್ಮಾಡಬೇಕು?

author-image
Gopal Kulkarni
Updated On
ನಿಮ್ಮ ಮಕ್ಕಳಿಗೆ ಓದಿನ ಮೇಲೆ ಆಸಕ್ತಿ ಬೆಳೆಸೋದು ಹೇಗೆ? ಅದಕ್ಕಾಗಿ ಪೋಷಕರು ಏನ್ಮಾಡಬೇಕು?
Advertisment
  • ನಿಮ್ಮ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಮೂಡಿಸುವುದು ಹೇಗೆ
  • ಮಕ್ಕಳಿಗೆ ಪುಸ್ತಕಗಳ ಶಕ್ತಿಯ ಕುರಿತು ನೀವು ಅರಿವು ಮೂಡಿಸಬೇಕು?
  • ಒಂದು ಪುಸ್ತಕ ಒಂದ ಮಗುವಿನ ಮೇಲೆ ಏನೆಲ್ಲಾ ಪರಿಣಾಮ ಬೀರಲಿದೆ

ಪೋಷಕರು ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವುದು ತುಂಬಾ ಮುಖ್ಯ. ನಮ್ಮನ್ನು ನೋಡಿಯೇ, ನಮ್ಮ ನುಡಿಯನ್ನು ಕೇಳಿಯೇ ಮಕ್ಕಳು ಹಲವು ಹವ್ಯಾಸಗಳನ್ನು ಕಲಿಯುತ್ತವೆ. ಇಂದಿನ ಪೋಷಕರು ತಾವು ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಮಕ್ಕಳಿಗೆ ಓದಿ ಎಂದು ಗದರಿಸುತ್ತಾರೆ. ತಾವು ಧಾರವಾಹಿಯ ಎದುರು ಕುಳಿತು ಮಕ್ಕಳಿಗೆ ಹೋಮ್ ವರ್ಕ್ ಮಾಡಿ ಎಂದು ಸೂಚಿಸುತ್ತಾರೆ. ಅದು ಅಷ್ಟು ಸರಳವಲ್ಲ ಪುಸ್ತಕಗಳು ಮಕ್ಕಳಲ್ಲಿ ಏನೆಲ್ಲಾ ಬದಲಾವಣೆ ತರಲಿವೆ ಎಂಬುದನ್ನು ಅವರಿಗೆ ಸೂಕ್ಷ್ಮವಾಗಿ ತಿಳಿಸಿ ಹೇಳಬೇಕು. ಅವುಗಳಿಂದ ಬದುಕಿಗೆ ಎಷ್ಟು ದೊಡ್ಡ ಕೊಡುಗೆ ಸಿಗಲಿದೆ. ನಮ್ಮ ಸಂವೇದನೆಗಳು ಹೇಗೆ ಸೂಕ್ಷ್ಮಗೊಳ್ಳಲಿವೆ ಎಂಬುದನ್ನು ಅವರ ಅರಿವಿಗೆ ಬರುವಂತೆ ನಾವು ಸರಳವಾಗಿ ತಿಳಿಸಬೇಕು. ಅದರಲ್ಲೂ ಪ್ರಮುಖವಾಗಿ ಕೆಲವೊಂದು ಕೋಟ್​ಗಳನ್ನು ಮಕ್ಕಳಿಗೆ ಹೇಳುವುದರಿಂದ ಅವರು ಪುಸ್ತಕಗಳ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಾರೆ.

ಹೆಚ್ಚು ಹೆಚ್ಚು ಓದಿದಂತೆ ಹೆಚ್ಚು ಹೆಚ್ಚು ಜ್ಞಾನ ಪಡಿಯುತ್ತೀಯಾ
ಇದನ್ನು ಪ್ರಮುಖವಾಗಿ ಹೇಳಬೇಕು. ಓದು ಒಕ್ಕಾಲು ಬುದ್ಧಿ ಮುಕ್ಕಾಲು ಅಂತ ನಮ್ಮಲ್ಲಿ ಗಾದೆಯೇ ಇದೆ.  ಕಾಲು ಭಾಗ ನಾವು ಓದಿದರೆ, ಮೂರು ಕಾಲು ಭಾಗ ಬುದ್ಧಿಯನ್ನು ನಾವು ಸಂಪಾದಿಸುತ್ತವೆ. ಜ್ಞಾನವೃದ್ಧಿಯಾಗಬೇಕು ಅಂದ್ರೆ ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಲು ಕಲಿಯಬೇಕು. ಓದು ಮಕ್ಕಳಲ್ಲಿ ಕಲ್ಪನೆಗಳ ಶಕ್ತಿಯನ್ನು ಹೆಚ್ಚಿಸುತ್ತದೆ. ಒಂದೊಂದು ಪುಸ್ತಕವೂ ಕೂಡ ಒಂದೊಂದು ಅನ್ವೇಷಣೆಗೆ ತೆಗೆಸಿಕೊಟ್ಟ ಟಿಕೆಟ್​ಗಳಂತೆ ಹೀಗಾಗಿ ಮಕ್ಕಳಿಗೆ ಪುಸ್ತಕ ಓದು ರೂಢಿ ಬೆಳೆಸಿ

publive-image

ಓದಿನಿಂದ ನೀನು ಟಿಕೆಟ್ ಇಲ್ಲದೇ ಪ್ರಯಾಣಿಸಬಹುದು
ಮಕ್ಕಳಿಗೆ ಈ ವಿಷಯವನ್ನು ಹೇಳಬೇಕು. ಪುಸ್ತಕಗಳನ್ನು ಓದುವುದು, ವಿಶ್ವವನ್ನು ಸುತ್ತುವುದು ಎರಡು ಒಂದೇ ನೀನು ಒಂದೇ ಒಂದು ಟಿಕೆಟ್ ಖರೀದಿಸದೇ ಇಡೀ ವಿಶ್ವವನ್ನು ಕೇವಲ ಪುಸ್ತಕಗಳ ಮೂಲಕವೇ ನೋಡಬಹುದು ಎಂಬುದನ್ನು ಅವರಿಗೆ ಅರ್ಥವಾಗುವಂತೆ ಹೇಳಿ. ಅದರಿಂದ ಮಕ್ಕಳಲ್ಲಿ ಒಂದು ಕುತೂಹಲ ಮೂಡುತ್ತದೆ. ಅವರು ಪುಸ್ತಕಗಳತ್ತ ಆಕರ್ಷಿತರಾಗುತ್ತಾರೆ.

ಇಂದಿನ ಓದುಗ ನಾಳೆಯ ನಾಯಕ
ಓದು ಮಕ್ಕಳಲ್ಲಿ ಒಂದು ನಾಯಕತ್ವ ಗುಣವನ್ನು ಹುಟ್ಟು ಹಾಕುತ್ತದೆ. ಅವರಲ್ಲಿ ಬಲಿಷ್ಢವಾದ ಬುದ್ಧಿಶಕ್ತಿಯನ್ನು ಸೃಷ್ಟಿಸುತ್ತದೆ ಬಲಿಷ್ಠವಾದ ಬುದ್ಧಿಶಕ್ತಿ ಅವರ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುತ್ತವೆ. ಹೀಗಾಗಿ ಮಕ್ಕಳಿಗೆ ಓದುವ ರೂಢಿಯನ್ನು ಬೆಳೆಸಬೇಕು.

publive-image

ಪುಸ್ತಕ ನೀನು ನಿನ್ನ ಕೈಯಲ್ಲಿಯೇ ಹಿಡಿದ ನಿನ್ನ ಕನಸು
ಪುಸ್ತಕಗಳಿಗೆ ಪವಾಡ ಸೃಷ್ಟಿಸುವ ಶಕ್ತಿಯಿದೆ. ಒಂದು ಪುಟ ಓದಲು ಆರಂಭಗೊಳಿಸಿದರೆ ಅದು ಹತ್ತು ಪುಟಕ್ಕೆ ನಮ್ಮನ್ನು ಕರೆದುಕೊಂಡು ಹೋಗುವ ತಾಕತ್ತು ಇದೆ. ಅವು ನಾವು ನಮ್ಮ ಕೈಯಲ್ಲಿಯೇ ಹಿಡಿದ ನಾಳೆಯ ಕನಸುಗಳು ಎಂಬುದನ್ನು ಮರೆಯಬಾರದು.

ಓದಲು ಒಂದು ಬಾರಿ ಆರಂಭಿಸಿದರೆ ನೀನು ಅಂದಿನಿಂದ ಸರ್ವ ಸ್ವತಂತ್ರ
ಓದು ಎಂಬುವುದೇ ಒಂದು ಸಬಲೀಕರಣ. ಮಕ್ಕಳು ಸ್ವತಂತ್ರವಾಗಿ ಕಲಿಯಲು ಆರಂಭಿಸುತ್ತಾರೆ. ಬೆಳೆಯಲು ಆರಂಭಿಸುತ್ತಾರೆ, ಅವರ ಕಲ್ಪನೆಯ ಮಟ್ಟ ಬೇರೆಯದ್ದೇ ಎತ್ತರಕ್ಕೆ ಹೋಗುತ್ತದೆ ಹೀಗಾಗಿ ಓದು ಅವರಿಗೆ ವ್ಯಸನವಾಗುವಂತೆ ನೋಡಿಕೊಳ್ಳಿ.

publive-image

ಪುಸ್ತಕಕ್ಕಿಂತ ಪ್ರಾಮಾಣಿಕ ಸ್ನೇಹಿತರಿಲ್ಲ
ಪುಸ್ತಕ ನಮಗೆ ಸ್ನೇಹಿನಾಗ, ಶಿಕ್ಷಕನಾಗಿ, ಮನರಂಜಕನಾಗಿ ಪಾತ್ರ ನಿರ್ವಹಿಸುತ್ತದೆ. ಹೀಗಾಗಿ ಪುಸ್ತಕ ಓದುವ ರೂಢಿಯನ್ನು ಬೆಳೆಸಿದಲ್ಲಿ.ಅವರಿಗೆ ಒಬ್ಬ ಅದ್ಭುತ ಗೆಳೆಯನನ್ನು ಪರಿಚಯಿಸದಂತೆ

ಯಾವಾಗ ಬೇಕಾದರೂ ತೆರೆದು ನೋಡಬಲ್ಲ ಉಡುಗೊರೆ
ನೀವು ಯಾರಿಗೆ ಏನೇ ಗಿಫ್ಟ್ ಕೊಡುವುದಾದರೆ ನೀವು ಪುಸ್ತಕವನ್ನೇ ಗಿಫ್ಟ್​ ಆಗಿ ಕೊಡಿ. ನಿಮ್ಮ ಮಗುವಿನ ಬರ್ತ್​ಡೇ ಇದ್ದಲ್ಲಿ. ಉಡುಗೊರೆಯಾಗಿ ಪುಸ್ತಕ ಕೊಡಿ. ಸಣ್ಣ ಸಣ್ಣ ಸಾಧನೆಗಳನ್ನು ಮಾಡಿದಾಗ ಅವರಿಗೆ ಪೂರಕವಾಗುವಂತಹ ಹಾಗೂ ಪ್ರೇರಕವಾಗುವಂತಹ ಪುಸ್ತಕಗಳನ್ನು ಕೊಡಿ. ಇದರಿಂದ ಮಕ್ಕಳು ಓದಿನ ಗುಂಗಿಗೆ ಹೋಗುತ್ತಾರೆ.ಹೀಗೆ ಪುಸ್ತಕಗಳು ನಿಮ್ಮ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ. ಹೊಸತನಕ್ಕೆ ತಮ್ಮನ್ನು ತಾವು ತೆರೆದುಕೊಳ್ಳುವುದಕ್ಕೆ, ನಾಯಕತ್ವದ ಗುಣ ಬೆಳೆಯುವುದಕ್ಕೆ ಸಹಾಯಕವಾಗಿ ನಿಲ್ಲುತ್ತವೆ. ಓದು ಅವರಿಗೆ ಒಂದು ವ್ಯಸನವಾಗುವಂತೆ ನೋಡಿಕೊಳ್ಳಬೇಕಾಗಿರುವುದು ನಿಮ್ಮ ಕೈಯಲ್ಲಿ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment